04/08/2025 12:47 PM

Translate Language

Home » ಲೈವ್ ನ್ಯೂಸ್ » ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ : 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ : 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ

Facebook
X
WhatsApp
Telegram

ಬೆಂಗಳೂರು.16.ಜುಲೈ.25:- ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ. ಬೆಂಗಳೂರು ನಗರದ ಸಿಸಿಬಿ ಮುಖ್ಯಸ್ಥ ಹಾಗೂ ಸಂಚಾರ ವಿಭಾಗದ ಜಂಟಿ ಆಯುಕ್ತರು ಸೇರಿ 35 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ  ಆದೇಶ ಹೊರಡಿಸಿದೆ.

ಸಿಸಿಬಿ ಮುಖ್ಯಸ್ಥ ಚಂದ್ರಗುಪ್ತ ಅವರನ್ನು ಈಶಾನ್ಯ ವಲಯ ಐಜಿಪಿಯಾಗಿ ನಿಯೋಜಿಸಿದ ಸರ್ಕಾರ, ಅವರಿಂದ ಖಾಲಿಯಾದ ಹುದ್ದೆಗೆ ಡಿಐಜಿ ಅಜಯ್ ಹಿಲೋರಿ ಅವರನ್ನು ನೇಮಿಸಿದೆ.

ಸಂಚಾರ ವಿಭಾಗದ ಜಂಟಿ ಆಯುಕ್ತ ಅನುಚೇತ್ ಅವರಿಗೆ ಸರ್ಕಾರ ನೇಮಕಾತಿ ವಿಭಾಗದ ಡಿಐಜಿ ಹುದ್ದೆ ಕೊಟ್ಟಿದೆ. ಜಂಟಿ ಆಯುಕ್ತರಾಗಿ ಕಾರ್ತಿಕ್ ರೆಡ್ಡಿ, ಲೋಕಾಯುಕ್ತ ಎಸ್ಪಿಯಾಗಿ ಶಿವಪ್ರಕಾಶ್ ದೇವರಾಜ್ ಹಾಗೂ ಪಶ್ಚಿಮ (ಸಂಚಾರ) ವಿಭಾಗದ ಡಿಸಿಪಿಯಾಗಿ ಅನೂಪ್ ಶೆಟ್ಟಿ ಅವರನ್ನು ಸರ್ಕಾರ ನಿಯೋಜಿಸಿದೆ.

ವರ್ಗಾವಣೆ ಪಟ್ಟಿ ಹೀಗಿದೆ:

ಡಾ.ಚಂದ್ರಗುಪ್ತ- ಐಜಿಪಿ ಈಶಾನ್ಯ ವಲಯ, ಅಜಯ್ ಹಿಲೋರಿ- ಜಂಟಿ ಆಯುಕ್ತ (ಅಪರಾಧ) ಬೆಂಗಳೂರು, ಎಂ.ಎನ್‌.ಅನುಚೇತ್‌- ಡಿಐಜಿ ನೇಮಕಾತಿ, ಇಡಾ ಮಾರ್ಟಿನ್‌- ಡಿಐಜಿ ಕೇಂದ್ರ ಸ್ಥಾನ, ವರ್ತಿಕಾ ಕಟಿಯಾರ್‌- ಡಿಐಜಿ ಬಳ್ಳಾರಿ ವಲಯ, ಕಾರ್ತಿಕ್ ರೆಡ್ಡಿ- ಜಂಟಿ ಆಯುಕ್ತ (ಸಂಚಾರ) ಬೆಂಗಳೂರು, ಕೆ.ಎಂ.ಶಾಂತರಾಜ್‌- ಎಸ್ಪಿ ಗುಪ್ತದಳ,

ಡಿ.ಆರ್‌.ಸಿರಿಗೌರಿ-ಎಸ್ಪಿ ಎಸ್‌ಸಿಆರ್‌ಬಿ, ಕೆ.ಪರಶುರಾಮ್- ಡಿಸಿಪಿ ವೈಟ್‌ಫೀಲ್ಡ್‌, ಡಾ.ಅನೂಪ್ ಶೆಟ್ಟಿ-ಡಿಸಿಪಿ (ಸಂಚಾರ) ಪಶ್ಚಿಮ ವಿಭಾಗ, ಡಾ.ಸುಮನ್‌ ಡಿ.ಪನ್ನೇಕರ್‌- ಡಿಸಿಪಿ ಗುಪ್ತದಳ, ಶಿವಪ್ರಕಾಶ್ ದೇವರಾಜ್‌- ಎಸ್ಪಿ ಲೋಕಾಯುಕ್ತ, ಜಯಪ್ರಕಾಶ್‌- ಡಿಸಿಪಿ ಉತ್ತರ (ಸಂಚಾರ), ಎಂ.ನಾರಾಯಣ್- ಡಿಸಿಪಿ ಎಲೆಕ್ಟ್ರಾನಿಕ್ ಸಿಟಿ, ಅನಿತಾ ಹದ್ದಣ್ಣನವರ್‌- ಡಿಸಿಪಿ ನೈಋತ್ಯ ವಿಭಾಗ ಬೆಂಗಳೂರು, ಹಾಕಯ್‌ ಅಕ್ಷಯ್‌ ಮಚ್ಚಿಂದ್ರ- ಡಿಸಿಪಿ ಕೇಂದ್ರ ವಿಭಾಗ ಬೆಂಗಳೂರು, ಡಿ.ಎಲ್‌.ನಾಗೇಶ್- ಡಿಸಿಪಿ ವಾಯುವ್ಯ ವಿಭಾಗ ಬೆಂಗಳೂರು, ಡಾ,ಸಿಮಿ ಮಾರಿಯಂ ಜಾರ್ಜ್‌- ಡಿಸಿಪಿ ಸಂಚಾರ (ದಕ್ಷಿಣ) ಬೆಂಗಳೂರು, ಎನ್‌.ಯತೀಶ್- ಎಸ್ಪಿ ರೈಲ್ವೆ, ಸೈದುಲು ಅಡವಾತ್‌- ಎಸ್ಪಿ ಸಿಐಡಿ, ಡಾ.ಶಿವಕುಮಾರ್- ಎಐಜಿಪಿ ಡಿಜಿಪಿ ಕಚೇರಿ, ವೈ.ಅಮರನಾಥ್ ರೆಡ್ಡಿ – ಕೆಎಸ್‌ಆರ್‌ಪಿ, ಶ್ರೀಹರಿಬಾಬು- ಡಿಸಿಪಿ1 ಸಿಸಿಬಿ, ಯಶೋಧ ವಂಟಗೊಂಡಿ- ಎಸ್ಪಿ ಹಾವೇರಿ, ಡಾ.ಎಸ್‌.ಕೆ.ಸೌಮ್ಯಲತಾ- ಡಿಸಿಪಿ ಸಿಎಆರ್‌, ಅನ್ಷು ಕುಮಾರ್- ಎಸ್ಪಿ ಕಾರಾಗೃಹ, ಗುಂಜನ್‌ ಆರ್ಯ- ಎಸ್ಪಿ ಧಾರವಾಡ, ಬಾಬಾಸಾಬ್ ನ್ಯಾಮಗೌಡ- ಡಿಸಿಪಿ ಉತ್ತರ ವಿಭಾಗ ಬೆಂಗಳೂರು, ಡಾ.ಗೋಪಾಲ.ಎಂ.ಬ್ಯಾಕೋಡ್‌- ಜಂಟಿ ನಿರ್ದೇಶಕ ಎಫ್‌ಎಸ್‌ಎಲ್‌, ಸಿದ್ಧಾರ್ಥ್‌ ಗೋಯಲ್‌- ಎಸ್ಪಿ ಬಾಗಲಕೋಟೆ, ರೋಹನ್‌ ಜಗದೀಶ್- ಎಸ್ಪಿ ಗದಗ, ಶಿವಾಂಶು ರಜಪೂತ್‌- ಎಸ್ಪಿ ಕೆಜಿಎಫ್‌, ಜಿತೇಂದ್ರ ಕುಮಾರ್ ದಯಾಮ- ಡಿಸಿಪಿ ಮಂಗಳೂರು, ಎಂ.ಎನ್‌.ದೀಪನ್‌- ಎಸ್ಪಿ ಉತ್ತರ ಕನ್ನಡ, ಜಾಹ್ನವಿ- ಎಸ್ಪಿ ವಿಜಯನಗರ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!