ಬಾಗಲಕೋಟ.11.ಜೂನ್.25:- ರಾಜ್ಯ ಸರ್ಕಾರ ಇನ್ಮುಂದೆ ಫೆಸಿಯಲ್ ಅಟೆಂಡೆನ್ಸ್ ಮಾಡೋಕೆ ನಿರ್ಧರಿಸಿದೆ. ಡಿಜಿಟಲ್ ಯುಗ ಆಗಿರುವ ಕಾರಣ ಸರ್ಕಾರಿ ಶಾಲೆಗಳ ಮಕ್ಕಳಿಗೂ ಇನ್ಮುಂದೆ ಫೇಶಿಯಲ್ ಅಟೆಂಡೆನ್ಸ್ ಮಾಡಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು ಇನ್ಮುಂದೆ ಸರ್ಕಾರಿ ಶಾಲೆಗಳ ಮಕ್ಕಳಿಗೂ ಫೇಶಿಯಲ್ ಅಟೆಂಡೆನ್ಸ್ ಮಾಡಲಾಗುವುದು. ಇದು ಡಿಜಿಟಲ್ ಯುಗ ಆಗಿರುವ ಕಾರಣ ಶಿಕ್ಷಣ ಇಲಾಖೆಯಲ್ಲಿ ಈ ವರ್ಷವೇ ಕೆಲ ಬದಲಾವಣೆ ಮಾಡಲಿದ್ದೇವೆ. ಒಂದೆರಡು ತಿಂಗಳಲ್ಲಿ ಈ ಬದಲಾವಣೆ ನಿಮಗೆ ಗೊತ್ತಾಗಲಿದೆ ಎಂದರು.
ಈಗಾಗಲೇ ಫೇಶಿಯಲ್ ಅಟೆಂಡೆನ್ಸ್ ಬೇರೆ ರಾಜ್ಯದಲ್ಲಿ ಜಾರಿ ಮಾಡಲಾಗಿದೆ. ನಾವು ಸ್ವಲ್ಪ ಹಿಂದೆ ಇದ್ದೇವೆ. ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಇದ್ದ ಕಾರಣ ಒಂದರಡು ತಿಂಗಳಿನಲ್ಲಿ ಜಾರಿ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದ ಸರ್ಕಾರಿ ಶಾಲೆಯ 25 ಸಾವಿರ ಮಕ್ಕಳಿಗೆ ಸಿಇಟಿ, ನೀಟ್ ತರಬೇತಿ ಕೊಡುತ್ತಿದ್ದೇವೆ. ಕಳೆದ ಬಾರಿಯಂತೆ ಈ ಬಾರಿಯೂ ಉಚಿತ ತರಬೇತಿಯನ್ನು ವಿಸ್ತರಣೆ ಮಾಡಿದ್ದೇವೆ ಎಂದು ಹೇಳಿದರು.