03/08/2025 12:11 PM

Translate Language

Home » ಲೈವ್ ನ್ಯೂಸ್ » ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ `ಅತಿಥಿ ಉಪನ್ಯಾಸಕರ’ ನೇಮಕಾತಿಗೆ ಅರ್ಜಿ ಆಹ್ವಾನ.!

ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ `ಅತಿಥಿ ಉಪನ್ಯಾಸಕರ’ ನೇಮಕಾತಿಗೆ ಅರ್ಜಿ ಆಹ್ವಾನ.!

Facebook
X
WhatsApp
Telegram

ಬೆಂಗಳೂರು.02.ಜನವರಿ.25:- ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2024-25ನೇ ಶೈಕ್ಷಣಿಕ ಬೋಧನಾ ಕಾರ್ಯಕ್ಕೆ ಅಗತ್ಯವಿರುವ ಅತಿಥಿ ಉಪನ್ಯಾಸಕರನ್ನು ಆನ್ಲೈನ್ ಮೂಲಕ ಕೌನ್ಸೆಲಿಂಗ್ ನಡೆಸಿ ಭರ್ತಿ ಮಾಡಿಕೊಳ್ಳಲು ಕಾಲೇಜು ಶಿಕ್ಷಣ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ.

2024-25ನೇ ಶೈಕ್ಷಣಿಕ ಸಾಲಿನಲ್ಲಿ ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (ಸರ್ಕಾರಿ ಸಂಸ್ಕೃತ ಹಾಗೂ ಚಿತ್ರಕಲಾ ಕಾಲೇಜುಗಳೂ ಒಳಗೊಂಡಂತೆ) ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ಬೋಧನಾ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರನ್ನು (ಅತಿಥಿ ಗ್ರಂಥಪಾಲಕರು ಹಾಗೂ ಅತಿಥಿ ದೈಹಿಕ ಶಿಕ್ಷಣ ನಿರ್ದೇಶಕರೂ ಒಳಗೊಂಡಂತೆ) ಆನ್‌ಲೈನ್ ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡಿಕೊಳ್ಳಲು ಸರ್ಕಾರದ ಪತ್ರ ಸಂಖ್ಯೆ: ಇಡಿ 243 ಡಿಸಿಇ 2024(ಇ), ದಿನಾಂಕ:19.08.2024 ರಲ್ಲಿ ಅನುಮತಿ ನೀಡಲಾಗಿರುತ್ತದೆ.

ಆದರೆ, ಇಲಾಖೆಯಲ್ಲಿ ನಡೆಸಲಾದ ಸಾಮಾನ್ಯ / ವಿಶೇಷ ವರ್ಗಾವಣೆ ಹಾಗೂ ಹೊಸದಾಗಿ ನೇಮಕಾತಿ ಹೊಂದಿದ ಖಾಯಂ ಉಪನ್ಯಾಸಕರು ಸಂಬಂಧಪಟ್ಟ ಕಾಲೇಜುಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕಿದ್ದರಿಂದ ಕಾಲೇಜುಗಳಲ್ಲಿ ಬೋಧನಾ ಕಾರ್ಯಭಾರದ ಹೆಚ್ಚಳ/ಕೊರತೆ ಉಂಟಾಗಲಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 2024-25ನೇ ಸಾಲಿಗೆ ಅತಿಥಿ ಉಪನ್ಯಾಸಕರ ಆಯ್ಕೆಗೆ ಆನ್‌ಲೈನ್‌ ಕೌನ್ಸಿಲಿಂಗ್ ನಡೆಸುವವರೆಗೆ ಈ ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ಆಯ್ಕೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದ / ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಪ್ರಸ್ತುತ ತಾತ್ಕಾಲಿಕವಾಗಿ ಬಳಸಿಕೊಳ್ಳಲಾಗುತ್ತಿದೆ.

2024-25ನೇ ಸಾಲಿನ 1, 3 & 5ನೇ ಸೆಮಿಸ್ಟರ್ ಅವಧಿಯು ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಮುಕ್ತಾಯಗೊಂಡಿದ್ದು 2, 4 & 6ನೇ ಸೆಮಿಸ್ಟರ್ ಪ್ರಾರಂಭವಾಗಲಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಲಭ್ಯವಾಗುವ ಹೆಚ್ಚುವರಿ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿರುತ್ತದೆ. ಜಾರಿಯಲ್ಲಿರುವ ಯು.ಜಿ.ಸಿ. 2018 ರ ಮಾರ್ಗಸೂಚಿಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸ್ನಾತಕೋತ್ತರ ಪದವಿಯಲ್ಲಿ ಶೇ 55 ಅಂಕಗಳೊಂದಿಗೆ (ಎಸ್‌ಸಿ/ ಎಸ್ ಟಿ/ ಓಬಿಸಿ/ ವಿಶೇಷ ಚೇತನರಿಗೆ ಶೇ 50) ಮತ್ತು ಎನ್‌ಇಟಿ/ ಎಸ್‌ಎಲ್‌ಇಟಿ/ಕೆಸೆಟ್/ ಪಿಹೆಚ್ ಡಿ ವಿದ್ಯಾರ್ಹತೆಯನ್ನು ನಿಗಧಿಪಡಿಸಲಾಗಿರುತ್ತದೆ.

ಮುಂದುವರೆದು, ಸರ್ಕಾರದ ಆದೇಶ ಸಂಖ್ಯೆ: ಇಡಿ 242 ಡಿಸಿಇ 2021, ದಿನಾಂಕ:14.01.2022 ರ ಕಂಡಿಕೆ (6) ರಲ್ಲಿ “ಯುಜಿಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದ ಅತಿಥಿ ಉಪನ್ಯಾಸಕರಿಗೆ ನಿಗಧಿತ ವಿದ್ಯಾರ್ಹತೆಯನ್ನು ಹೊಂದಲು 3 ವರ್ಷಗಳ ಕಾಲಾವಧಿ ನೀಡುವುದು, 3 ವರ್ಷಗಳ ನಂತರ ಯುಜಿಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು” ಎಂಬುದಾಗಿ ಆದೇಶಿಸಲಾಗಿರುತ್ತದೆ. ಅಲ್ಲದೆ, ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಉಲ್ಲೇಖ (2) ರಲ್ಲಿ ಮಾನ್ಯ ಉಚ್ಚ ನ್ಯಾಯಾಲಯವು ಕೆಳಕಂಡಂತೆ ತೀರ್ಪು ನೀಡಿರುತ್ತದೆ.

ಕೌನ್ಸಿಲಿಂಗ್‌ ಪ್ರಕ್ರಿಯೆಯಲ್ಲಿ ಕಾಲೇಜು ಆಯ್ಕೆಮಾಡಿಕೊಂಡು ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾದ ನಂತರದಲ್ಲಿ ಗರಿಷ್ಟ 6 ತಿಂಗಳ ಕಾಲಾವಧಿಗೆ ಗೌರವಧನರಹಿತ Maternity Leave ಪಡೆಯಲು ಅವಕಾಶವಿದ್ದು ಸಾಮಾನ್ಯ ಮುಕ್ತಾಯ ದಿನಾಂಕದವರೆಗೆ ಸೀಮಿತಗೊಳಿಸಿ ಸದರಿ ಅವಧಿಯನ್ನು ಸೇವಾ ಅವಧಿ ಎಂದು ಪರಿಗಣಿಸಲಾಗುವುದು. Maternity Leave ಪಡೆದ ಅತಿಥಿ ಉಪನ್ಯಾಸಕರ ಬೋಧನಾ ಕಾರ್ಯಭಾರವನ್ನು ನಿರ್ವಹಿಸಲು ಬದಲಿ ಅತಿಥಿ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ಆಯ್ಕೆಮಾಡಿಕೊಳ್ಳಲಾಗುವುದು. ಬದಲಿ ಅತಿಥಿ ಉಪನ್ಯಾಸಕರನ್ನು Maternity Leave ಪಡೆದಿರುವ ಅತಿಥಿ ಉಪನ್ಯಾಸಕರು ವರದಿ ಮಾಡಿಕೊಂಡ ನಂತರ ಬಿಡುಗಡೆ ಮಾಡಲಾಗುವುದು.

ವರ್ಗಾವಣೆ/ ನಿಯೋಜನೆ/ ಮರು-ಹಂಚಿಕೆ (Redeployment) ಹಾಗೂ ಇನ್ನಿತರ ಕಾರಣದಿಂದಾಗಿ ಖಾಯಂ ಅದ್ಯಾಪಕರು ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾದಾಗ ಅಥವಾ ಸೆಮಿಸ್ಟ‌ರ್ ಅವಧಿಯಲ್ಲಿ ಕಾರ್ಯಭಾರ ಕಡಿಮೆಯಾದಾಗ ಅಥವಾ ಇತರೆ ಕಾರಣಗಳಿಂದ ಹೆಚ್ಚುವರಿ ಕಾರ್ಯಭಾರದಲ್ಲಿ ವ್ಯತ್ಯಯವಾದಾಗ ಆ ಕಾಲೇಜಿಗೆ ಸಂಬಂಧಪಟ್ಟ ವಿಷಯದಲ್ಲಿ ಕೊನೆಯದಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗುವುದು.

ಅತಿಥಿ ಉಪನ್ಯಾಸಕರನ್ನು ಹೆಚ್ಚುವರಿ ಕಾರ್ಯಭಾರಕ್ಕನುಗುಣವಾಗಿ ತಾತ್ಕಾಲಿಕ ವ್ಯವಸ್ಥೆಯಡಿ ಆಯ್ಕೆ ಮಾಡಿಕೊಳ್ಳುವುದರಿಂದ ಸದರಿ ತಾತ್ಕಾಲಿಕ ಸೇವೆಯನ್ನು ಪರಿಗಣಿಸಿ ಖಾಯಂ ಮಾಡಲು ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇಮಕಾತಿಯಲ್ಲಿ ಆದ್ಯತೆ ನೀಡಲು ಅವಕಾಶ ಇರುವುದಿಲ್ಲ ಹಾಗೂ ಈ ಬಗ್ಗೆ ಕೃಪಾಂಕ ಕೋರಲು ಸಹ ಯಾವುದೇ ಹಕ್ಕು ಇರುವುದಿಲ್ಲ.

ಆನ್‌ಲೈನ್ ಮೂಲಕ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಕುರಿತು ಎಲ್ಲಾ ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಕಾಲೇಜುಗಳ ನೋಟೀಸ್ ಬೋರ್ಡ್ನಲ್ಲಿ ಪ್ರಕಟಿಸುವುದರೊಂದಿಗೆ, ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು/ EDIT ಮಾಡಲು ಮಾಹಿತಿಯನ್ನು ನೀಡುವುದು. ಅತಿಥಿ ಉಪನ್ಯಾಸಕರ ಆಯ್ಕೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಇಲಾಖೆಯ ಅಂತರ್ಜಾಲ ತಾಣ https://dce.karnataka.gov.in ರಲ್ಲಿ ಪ್ರಕಟಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಸದರಿ ಅಂತರ್ಜಾಲ ತಾಣವನ್ನು ಪ್ರತಿನಿತ್ಯ ಗಮನಿಸಲು ತಿಳಿಸಲಾಗಿದೆ.

ಈ ಪ್ರಕಟಣೆಯಲ್ಲಿ ಮೇಲಿನಂತೆ ತಿಳಿಸಿರುವ ಅಂಶಗಳನ್ನು ಹೊರತುಪಡಿಸಿ ಇತರೆ ಎಲ್ಲಾ ವಿಷಯಗಳಿಗೆ ಈ ಹಿಂದೆ ಹೊರಡಿಸಲಾಗಿರುವ ಸುತ್ತೋಲೆ/ ಸರ್ಕಾರದ ಆದೇಶಗಳಲ್ಲಿನ ಅಂಶಗಳು ಅನ್ವಯವಾಗುತ್ತವೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!