15/06/2025 7:32 PM

Translate Language

Home » ಲೈವ್ ನ್ಯೂಸ್ » ಭಗವಾನ್ ಬುದ್ದ ಜಯಂತಿ ಆಚರಣೆ ಕಡ್ಡಾಯ. ರಾಜ್ಯ ಸರ್ಕಾರ ಆದೇಶ

ಭಗವಾನ್ ಬುದ್ದ ಜಯಂತಿ ಆಚರಣೆ ಕಡ್ಡಾಯ. ರಾಜ್ಯ ಸರ್ಕಾರ ಆದೇಶ

Facebook
X
WhatsApp
Telegram

ಬೆಂಗಳೂರು.10.ಏಪ್ರಿಲ್.25:- ಕರ್ಣಾಟಕ ಸರ್ಕಾರ ಈಗ ರಾಜ್ಯಾಧ್ಯಂತ ಭಗವಾನ್ ಬುದ್ಧ ಜಯಂತಿಯನ್ನು ಪ್ರತಿ ವರ್ಷ ಬುದ್ಧ ಪೌರ್ಣಿಮೆಯಂದು ಆಚರಿಸುವಂತೆ ಸರ್ಕಾರ ಆದೇಶಿಸಿದೆ.

ರಾಜ್ಯ ಸರ್ಕಾರ ಈ ಕುರಿತಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಸಹಕಾರ ಸಂಘಗಳ ಅಪರ ನಿಬಂಧಕರು (ನಿ), ಮೈಸೂರು ಇವರು ದಿನಾಂಕ:19.08.2023ರ ಪತ್ರದಲ್ಲಿ, ಮಹಾವೀರ, ಕನಕದಾಸರು ಮುಂತಾದ ಮಹಾತ್ಮ ದಾರ್ಶನಿಕರ ಜಯಂತಿಗಳನ್ನು ರಾಷ್ಟ್ರೀಯ ಹಬ್ಬಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಅವುಗಳ ಆಚರಣೆಯನ್ನು ಜಾರಿಗೆ ತಂದಿದ್ದು.

ಏಷ್ಯಾ ಖಂಡದ ಹಲವಾರು ರಾಷ್ಟ್ರಗಳು ಬುದ್ದ ಜಯಂತಿಯನ್ನು ರಾಷ್ಟ್ರೀಯ ಹಬ್ಬವಾಗಿ ವೈಭವದಿಂದ ಆಚರಿಸುತ್ತಿದ್ದು, ವಿಶ್ವದ ಪ್ರಥಮ ಹಾಗೂ ಶ್ರೇಷ್ಠ ದಾರ್ಶನಿಕರಾದ ಬುದ್ಧರ ಜಯಂತಿಯನ್ನು ಅವರು ಜನಿಸಿದ ಭಾರತದಲ್ಲಿ ಸರ್ಕಾರದ ವತಿಯಿಂದ ಆಚರಿಸುವುದು ಸೂಕ್ತ ಎಂದು ತಿಳಿಸುತ್ತಾ, ಬುದ್ಧ ಜಯಂತಿಯನ್ನು ರಾಷ್ಟ್ರೀಯ ಹಬ್ಬಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಸರ್ಕಾರದ ವತಿಯಿಂದ ಪ್ರತಿವರ್ಷ ಆಯೋಜಿಸಿ ಆಚರಿಸಲು ಸರ್ಕಾರದ ಆದೇಶ ಹೊರಡಿಸುವಂತೆ ಕೋರಿರುತ್ತಾರೆ ಎಂದಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಈಗಾಗಲೇ ವಾರ್ಷಿಕವಾಗಿ ವಿವಿಧ ಮಹಾಪುರುಷರ 32 ಜಯಂತಿಗಳನ್ನು ಆಚರಿಸಲಾಗುತ್ತಿದ್ದು ಭಗವಾನ್ ಬುದ್ಧರ ಜಯಂತಿಯನ್ನು ಇಲಾಖಾ ವತಿಯಿಂದ ಆಚರಿಸುವ ಬಗ್ಗೆ ಸರ್ಕಾರದ ಮಾರ್ಗದರ್ಶನ ನೀಡುವಂತೆ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರು ಕೋರಿರುತ್ತಾರೆ ಎಂದು ತಿಳಿಸಿದ್ದಾರೆ.

ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಭಗವಾನ್ ಬುದ್ಧರ ಜಯಂತಿಯನ್ನು ಪ್ರತಿ ವರ್ಷ ಬುದ್ಧ ಪೌರ್ಣಿಮೆಯಂದು ರಾಜ್ಯಾದ್ಯಂತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಚರಿಸಲು ಸರ್ಕಾರವು ಆದೇಶಿಸಿದ್ದಾರೆ. ಸದರಿ ಜಯಂತಿಯ ಆಚರಣೆಗೆ ತಗಲುವ ವೆಚ್ಚವನ್ನು ಮಹಾಪುರುಷರ ಜಯಂತಿಗಳ ಆಚರಣೆಗೆ 2025-263 ಸಾಲಿನ ಅನುದಾನದಿಂದ ಭರಿಸತಕ್ಕದ್ದು ಎಂದು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!