|

ರಾಜ್ಯದ ಸಮಸ್ತ ಅತಿಥಿ ಉಪನ್ಯಾಸಕರ ಗಮನಕ್ಕೆ

ಮೈಸೂರು.18.ಸೆಪ್ಟೆಂಬರ್.25:- ಮೖಸೂರು ನಗರ ಕಾಲೇಜುಗಳ ಅತಿಥಿ ಉಪನ್ಯಾಸಕರು ಇಂದು ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯು ಕರೆ ನೀಡಿರುವ  ರಾಜ್ಯಮಟ್ಟದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು, ಮಾನ್ಯ ಮುಖ್ಯಮಂತ್ರಿಗಳ ತವರು ಜಿಲ್ಲೆ ಮೖಸೂರು ನಗರದಲ್ಲಿ ಮುಂದುವರಿಸಲಾಗಿದೆ.

ನಾಳೆಯು ಅಂದರೆ ದಿನಾಂಕ  18/09/2025 ಗುರುವಾರವೂ‌ ಸಹ ಜಿಲ್ಲಾಧಿಕಾರಿಗಳ ಕಛೇರಿ ಎದರು ಧರಣಿ ಸತ್ಯಾಗ್ರಹ ಮುಂದುವರಿಯಲಿದೆ.

ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕ ಬಂಧುಗಳು ಭಾಗವಹಿಸಿ,  ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ಶಾಸಕಾಂಗ/ಸಚಿವ ಸಂಪುಟದ ಸಭೆಯಲ್ಲಿ ಮಂಡಿಸಲು ಒತ್ತಾಯಿಸಿ ಮೌನ ಧರಣಿ ಸತ್ಯಾಗ್ರಹ ಹೋರಾಟವನ್ನು ಯಶಸ್ವಿಗೊಳಿಸಿ.
ನೀವು ಬನ್ನಿ – ಗೆಳೆಯರನ್ನು ಕರೆ ತನ್ನಿ.

ಈ ಹೋರಾಟ ನಮ್ಮೆಲ್ಲರ ಉದ್ಯೋಗದ ಹಕ್ಕಿಗಾಗಿ. ದಶಕಗಳಿಂದ ಕನಿಷ್ಠ ಗೌರವಧನಕ್ಕೆ ದುಡಿದ ನಮಗೆ ನ್ಯಾಯದ ಪಾಲು ದಕ್ಕಲೇ ಬೇಕು. ಹೋರಾಟ ನಮ್ಮದು ಜಯವು ನಮ್ಮದು.

ಡಾ. ಸೋಮಶೇಖರ್. ಎಚ್. ಶಿಮೊಗ್ಗಿ.
ರಾಜ್ಯಾಧ್ಯಕ್ಷರು.
ಸ. ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ (ರಿ)ಪರವಾಗಿ

Similar Posts

Leave a Reply

Your email address will not be published. Required fields are marked *