06/07/2025 5:10 PM

Translate Language

Home » ಲೈವ್ ನ್ಯೂಸ್ » ರಾಜ್ಯದ ‘ಪೊಲೀಸ್ ಸಿಬ್ಬಂದಿ’ಗಳಿಗೆ: ವಾರ್ಷಿಕ ‘ಆರೋಗ್ಯ ತಪಾಸಣೆ ವೆಚ್ಚ’1500 ರೂ.ಗೆ ಹೆಚ್ಚಿಸಿ ಸರ್ಕಾರ ಆದೇಶ.!

ರಾಜ್ಯದ ‘ಪೊಲೀಸ್ ಸಿಬ್ಬಂದಿ’ಗಳಿಗೆ: ವಾರ್ಷಿಕ ‘ಆರೋಗ್ಯ ತಪಾಸಣೆ ವೆಚ್ಚ’1500 ರೂ.ಗೆ ಹೆಚ್ಚಿಸಿ ಸರ್ಕಾರ ಆದೇಶ.!

Facebook
X
WhatsApp
Telegram

ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ವಾರ್ಷಿಕ ಆರೋಗ್ಯ ತಪಾಸಣೆಯ ವೆಚ್ಚವನ್ನು ಹೆಚ್ಚಿಸಿ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.

ಉಲ್ಲೇಖಿತ (3)ರ ಸರ್ಕಾರದ ಆದೇಶದಲ್ಲಿ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಗೆ ವಾರ್ಷಿಕ ಆರೋಗ್ಯ ತಪಾಸಣೆಗಾಗಿ ವೈದ್ಯಕೀಯ ವೆಚ್ಚ ರೂ.1000/- ಗಳಿಂದ ರೂ. 1500/- (ಒಂದು ಸಾವಿರದ ಐದು ನೂರು ರೂಪಾಯಿಗಳು ಮಾತ್ರ) ಗಳಿಗೆ ಹೆಚ್ಚಿಸಿ ಆದೇಶಿಸಲಾಗಿರುತ್ತದೆ. ಸರ್ಕಾರದ ಆದೇಶವನ್ನು ಸೂಕ್ತ ಕ್ರಮಕ್ಕಾಗಿ ಈ ಸುತ್ತೋಲೆಯೊಂದಿಗೆ ಲಗತ್ತಿಸಿದೆ.

ಘಟಕಾಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಕೆಳಕಂಡಂತೆ ಸೂಚನೆಗಳನ್ನು ನೀಡಲಾಗಿದೆ.

1. ವಾರ್ಷಿಕ ಆರೋಗ್ಯ ತಪಾಸಣೆಯಲ್ಲಿ ಪೊಲೀಸ್ ಸಿಬ್ಬಂದಿಗಳು ಸದರಿ ವೆಚ್ಚದಲ್ಲಿ ಈ ಕೆಳಕಂಡ ಪರೀಕ್ಷೆಗಳನ್ನು ಮಾಡಿಸತಕ್ಕದ್ದು.

1) Blood Pressure (BP)

2) Blood & Urine Sugar Test

3) Kidney Function Test

4) Ultrasound Test

5) ECG

6) Cholestrol Test

7) Liver Function Test

8) Optholmic Investigation

9) CBC

10) Urine Analysis

11) Chest X-ray

12) Echo Cardiogram

13) TMT-Tread Mill Test

14) Physician consultation

3. ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮ 1963ರ ಪ್ರಕಾರ ಸರ್ಕಾರಿ ಮಾನ್ಯತೆ ಹೊಂದಿರುವ ಆಸ್ಪತ್ರೆಗಳಲ್ಲಿ ಅಥವಾ ಎಬಿವೈ ಅಡಿಯಲ್ಲಿ ಗುರುತಿಸಲಾದ ಆಸ್ಪತ್ರೆಗಳಲ್ಲಿ ಮಾತ್ರ ತಪಾಸಣೆ ಮಾಡಿಸುವುದು, ಯಾವುದೇ ಕಾರಣಕ್ಕೂ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮ 1963ರ ಪ್ರಕಾರ ಸರ್ಕಾರಿ ಮಾನ್ಯತೆ ಹೊಂದಿರದ ಆಸ್ಪತ್ರೆಗಳಲ್ಲಿ ಅಥವಾ ಎಬಿವೈ ಯೋಜನೆಯಡಿ ಗುರುತಿಸದೇ ಇರುವ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸತಕ್ಕದ್ದಲ್ಲ.

4. ಘಟಕಾಧಿಕಾರಿಗಳು ಈ ಮೊತ್ತವನ್ನು ಡ್ರಾ ಮಾಡಿ ನೇರವಾಗಿ ವೈದ್ಯಕೀಯ ಆಸ್ಪತ್ರೆಗಳಿಗೆ ನೀಡುವುದು. ಯಾವುದೇ ಕಾರಣಕ್ಕು ಹಣವನ್ನು ಡ್ರಾ ಮಾಡಿ ನಗದಾಗಿ ಸಿಬ್ಬಂದಿಗಳಿಗೆ ನೀಡುವಂತಿಲ್ಲ.

5. ವಾರ್ಷಿಕ ರಹಸ್ಯ ವರದಿಯನ್ನು ಬರೆಯುವಾಗ ವೈದ್ಯಕೀಯ ತಪಾಸಣೆ ವರದಿಯನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಕಾಲಂ ಅಡಿಯಲ್ಲಿ ತಪಾಸಣೆ ಮಾಡಿಸಿದ ಬಗ್ಗೆ ದಾಖಲಿಸುವುದು.

ಘಟಕಾಧಿಕಾರಿಗಳು ವೈದ್ಯಕೀಯ ತಪಾಸಣೆಯನ್ನು ಮಾಡಿಸಲು ಕ್ರಮ ಕೈಗೊಳ್ಳುವುದು ಹಾಗೂ ಈ ಸರ್ಕಾರಿ ಆದೇಶದ ಬಗ್ಗೆ ಎಲ್ಲಾ ಸಿಬ್ಬಂದಿಗಳಿಗೆ ಮಾಹಿತಿ ನೀಡುವುದು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!