ಬೆಂಗಳೂರು.12.ಏಪ್ರಿಲ್.25: ರಾಜ್ಯ ಸರಕಾರ ‘ಗಾಂಧಿ ಭಾರತ’ ಲಾಂಛನವನ್ನು ರಾಜ್ಯದ ಎಲ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಅನುದಾನಿತ ಪದವಿ ಕಾಲೇಜುಗಳು ಶತಮಾನೋತ್ಸವದ ಆಚರಣೆಯ ಅಳವಡಿಕೊಳ್ಳುವಂತೆ ರಾಜ್ಯ ಸರಕಾರ ಆದೇಶಿಸಿದೆ.
ಕಾಲೇಜು ಶಿಕ್ಷಣ ಇಲಾಖೆ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳಲ್ಲಿ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಆಚರಣೆಯ ಸಲುವಾಗಿ ‘ಗಾಂಧಿ ಭಾರತ’ ಲಾಂಛನವನ್ನು ರಾಜ್ಯದ ಎಲ್ಲ ಪದವಿ ಕಾಲೇಜುಗಳು ಆಚರಣೆ ಬಗ್ಗೆ.
ಶುಕ್ರವಾರ ಕಾಲೇಜು ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದ್ದು, ಗಾಂಧಿ ಭಾರತ ಕಾರ್ಯಕ್ರಮದ ಲಾಂಛನ ಎಲ್ಲ ಸರಕಾರಿ, ಖಾಸಗಿ ಮತ್ತು ಅನುದಾನರಹಿತ ಪದವಿ ಕಾಲೇಜುಗಳ ಪತ್ರವ್ಯವಹಾರ, ಲೆಟರ್ ಹೆಡ್, ಆಮಂತ್ರಣ ಪತ್ರಿಕೆ, ಸಭೆ-ಸಮಾರಂಭಗಳ ಬ್ಯಾನರ್, ಜಾಹೀರಾತು ಮತ್ತು ಇತರೆ ಪ್ರಚಾರ ಸಾಮಗ್ರಿಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕು ಎಂದು ಸೂಚಿಸಿದೆ.
ಮಹಾತ್ಮಾ ಗಾಂಧಿಯವರ ಧ್ಯಾನಸ್ಥ ಸ್ಥಿತಿಯ ಭಾವಚಿತ್ರವನ್ನು ಕಾಲೇಜು ಇಲಾಖೆಯ ವೆಬ್‍ಸೈಟ್ https://dce.karnataka.gov.in ನಲ್ಲಿ ಪ್ರಕಟಿಸಲಾಗಿದ್ದು, ಎಲ್ಲ ಪದವಿ ಕಾಲೇಜುಗಳು ಹಾಗೂ ಪಾಲಿಟೆಕ್ನಿಕ್/ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಗಾಂಧಿಯವರು ಬೋಧಿಸಿದ ಸಪ್ತ ಸಾಮಾಜಿಕ ಪಾತಕಗಳ ಫಲಕಗಳನ್ನು ಪ್ರದರ್ಶಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.