|

ಭ್ರಷ್ಟ ಅಬಕಾರಿ ಉಪ ಆಯುಕ್ತ: ವಿರುದ್ಧ ಕ್ರಮಕೆ ರಾಜ್ಯಪಾಲರು, ಲೋಕಾಯುಕ್ತಕ್ಕೆ ದೂರು

ಬೆಂಗಳೂರು.13.ಸೆಪ್ಟೆಂಬರ್.25:-ಸರ್ಕಾರಕ್ಕೆ ಸೂಚಿಸುವಂತೆ ಕೋರಿ  ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರಿಗೆ, ಲೋಕಾಯುಕ್ತಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ದೂರು ಕೊಟ್ಟಿದೆ. ಮಂಡ್ಯದ ಅಬಕಾರಿ ಕಚೇರಿಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ರೈತ ಸಂಘ ದೂರು ಕೊಟ್ಟಿದೆ.

ಮಂಡ್ಯ ಜಿಲ್ಲೆಯ ಮಂಡ್ಯ ನಗರದ ಕೇಂದ್ರಸ್ಥಾನದಲ್ಲಿರುವ ಅಬಕಾರಿ ಕಚೇರಿಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಅಬಕಾರಿ ಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ, ಸಿಎಂ ಮತ್ತು ಇಲಾಖೆ ಆಯುಕ್ತ ಹೆಸರಿನಲ್ಲಿ ಅಧಿಕಾರಿಗಳು, ಮದ್ಯದಂಗಡಿಗಳಲ್ಲಿ ಹ್ತಾ ವಸೂಲಿ ಮಾಡುತ್ತಿದ್ದಾರೆ. ಹೊಸದಾಗಿ ಹೋಟೆಲ್ ಮತ್ತು ವಸತಿ ಗೃಹ(ಸಿಎಲ್-7) ಪರವಾನಗಿ ಮಂಜೂರಾತಿ ಕೊಡಲು ಜಾತಿ ನೋಡಿ ಲಂಚ ನಿಗದಿ ಮಾಡುತ್ತಿದ್ದಾರೆ. ಸಿಎಲ್7 ಲೈಸೆನ್ಸ್ ನೀಡಲು 60 ಲಕ್ಷ ರೂ.ಬೇಡಿಕೆ ಇಟ್ಟಿರುವ ಮಂಡ್ಯ ಅಬಕಾರಿ ಉಪ ಆಯುಕ್ತ ವಿರುದ್ಧ ಈಗಾಗಲೇ ಕೆಲವರು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ ಎಂದು ರಾಜ್ಯಪಾಲರಿಗೆ ಕೊಟ್ಟಿರುವ ದೂರಿನಲ್ಲಿ ಸಂಘದ ಅಧ್ಯಕ್ಷ ಇ.ಎನ್.ಕೃಷ್ಣೇಗೌಡ ಉಲ್ಲೇಖಿಸಿದ್ದಾರೆ.

ನಾಗಶಯನ ಒಬ್ಬ ಭ್ರಷ್ಟ್ರ ಅಧಿಕಾರಿ ಆಗಿದ್ದಾನೆ. ಹಿಂದೆ ಚಿತ್ರದುರ್ಗದ ಅಬಕಾರಿ ಉಪ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿಯೂ ಭಾರಿ ಪ್ರಮಾಣದ ಲಂಚ ಆರೋಪದ ಮೇಲೆ ಅವರ ವಿರುದ್ಧ ಕೇಸ್ ದಾಖಲಾಗಿತ್ತು. ಕಾಂಗ್ರೆಸ್ ಪಕ್ಷದವರನ್ನು ಹೊರತುಪಡಿಸಿ ಬೇರೆ ಪಕ್ಷದ ಅರ್ಜಿದಾರರಿಗೆ ಲೈಸೆನ್ಸ್ ನೀಡುತ್ತಿಲ್ಲ. ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಿದ್ದರೆ ಜಿಲ್ಲಾ ಉಸ್ತುವಾರಿ ಮಂತ್ರಿ ಭೇಟಿ ಮಾಡುವಂತೆ ಅರ್ಜಿದಾರರಿಗೆ ಅಬಕಾರಿ ಅಧಿಕಾರಿಗಳು ಹೇಳುತ್ತಾರೆ. ಈ ಬಗ್ಗೆ ಆಡಿಯೋ ಸಹ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ವಿಚಾರ ಬಗ್ಗೆ ಕೆ.ಆರ್.ಪೇಟೆ ತಾಲೂಕಿನ ಸುಂದರ್ ಎಂಬುವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ ಎಂದು ಕೃಷ್ಣೇಗೌಡ ದೂರಿದ್ದಾರೆ.

ನಾಗಶಯನ ವಿರುದ್ಧ ರೆಕಾರ್ಡ್‌ ಸಮೇತ ದೂರು:

ಸಿಎಲ್7 ಪರವಾನಗಿ ಮಂಜೂರಾತಿಗೆ 60 ಲಕ್ಷ ರೂ.ಲಂಚಕ್ಕೆ ಬೇಡಿಕೆ ಇಟ್ಟಿರುವ ಮಂಡ್ಯ ಅಬಕಾರಿ ಉಪ ಆಯುಕ್ತ ನಾಗಶಯನ ವಿರುದ್ಧ ಲೋಕಾಯುಕ್ತಕ್ಕೆ ಅರ್ಜಿದಾರ ಎ.ಎಂ. ಸುಂದರೇಶ ದೂರು ಕೊಟ್ಟಿದ್ದಾರೆ. ಜೊತೆಗೆ, ಲಂಚದ ಬಗ್ಗೆ ನಾಗಶಯನ ಮಾತನಾಡಿರುವ ರೆಕಾರ್ಡ್‌ಡಿಂಗ್ಸ್ ಅನ್ನು ಸಾಕ್ಷಿಯಾಗಿ ಲೋಕಾಯುಕ್ತಕ್ಕೆ ಅಧಿಕಾರಿಗಳಿಗೆ ಸುಂದರೇಶ ನೀಡಿದ್ದಾರೆ. ಅರ್ಜಿ ಸರಿ ಇದ್ದರೂ ಜೆಡಿಎಸ್ ಕಾರ್ಯಕರ್ತ ಆಗಿರುವ ಕಾರಣ ಜಿಲ್ಲಾ ಉಸ್ತುವಾರಿ ಮಂತ್ರಿ, ಸಿಎಂ ಅವರನ್ನು ಭೇಟಿ ಮಾಡಬೇಕೆಂದು ಅಧಿಕಾರಿ ಹೇಳುತ್ತಾರೆ. ಹಾಗಾಗಿ, ಈ ಸಂಬಂಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಸುಂದರೇಶ ಮನವಿ ಮಾಡಿದ್ದಾರೆ.

Similar Posts

Leave a Reply

Your email address will not be published. Required fields are marked *