|

ರಾಜ್ಯದಲ್ಲಿ 18 ಸಾವಿರ ಶಿಕ್ಷಕರ ನೇಮಕಕ್ಕೆ ಶೀಘ್ರ ನೋಟಿಫಿಕೇಶನ್‌

ಶಿವಮೊಗ್ಗ.05.ಮೇ.25:- ರಾಜ್ಯದಲ್ಲಿ 18 ಸಾವಿರ ಶಿಕ್ಷಕರ ಹುದ್ದೆ ಭರ್ತಿಗೆ ಶೀಘ್ರವೇ ನೋಟಿಫಿಕೇಶನ್‌ ಹೊರಡಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಕರ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ. ಕಮಿಟಿ ವರದಿ ಬಂದ ದಿನವೇ ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿಹುದ್ದೆಗಳನ್ನು ತುಂಬಲಗುವದು ಯೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿಯಲ್ಲಿ ಈಚೆಗೆ ನಡೆದ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಶೇ.80ರಷ್ಟು ಹುದ್ದೆಗಳನ್ನು ಭರ್ತಿ ಮಾಡಬೇಕೆಂಬ ನಿರ್ಣಯ ಆಗಿತ್ತು. ಅದರಂತೆ ಶಿಕ್ಷಣ ಇಲಾಖೆಯಲ್ಲಿ 6 ಸಾವಿರಕ್ಕೂ ಹುದ್ದೆ ಕಲ್ಯಾಣ ಕರ್ನಾಟಕದಲ್ಲಿ ಭರ್ತಿ ಮಾಡಲಾಗುವುದು. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಆರೂವರೆ ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಸೇರಿ ಒಟ್ಟು ರಾಜ್ಯದಲ್ಲಿ ಸುಮಾರು 18 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕಲ್ಯಾಣ ಕರ್ನಾಟಕಕ್ಕೆ ನೀಡಿದ ಅನುದಾನ ಸರಿಯಾಗಿ ಬಳಕೆಯಾಗಿದೆ. ಇಲಾಖೆಯೊಳಗೆ ಬದಲಾವಣೆ ಕಂಡುಬಂದಿದೆ. ಕಳೆದ ವರ್ಷ ಅನುದಾನಿತ ಶಾಲೆಗಳ ಫಲಿತಾಂಶ ನಮಗಿಂತ ಚೆನ್ನಾಗಿತ್ತು. ಈ ವರ್ಷ ನಾವು ಮೇಲಿದ್ದೇವೆ. ಖಾಸಗಿ ಶಾಲೆಗೆ ಹೋಲಿಕೆ ಮಾಡಿಕೊಳ್ಳಬೇಡಿ. ಖಾಸಗಿಯಲ್ಲಿ 30 ಪರ್ಸೆಂಟ್‌ ಇದ್ದವರಿಗೆ ತೆಗೆದುಕೊಳ್ಳುತ್ತಾರಾ. ನಾವು ಸೊನ್ನೆ ಇದ್ದವರನ್ನೂ ಸೇರಿಸಿಕೊಂಡು ಡಿಸ್ಟಿಂಕ್ಷನ್‌ ಕೊಡಿಸುತ್ತೇವೆ ಎಂದರು.

Similar Posts

Leave a Reply

Your email address will not be published. Required fields are marked *