|

ರಾಜ್ಯದಲ್ಲಿ ಭಾರಿ ಮಳೆ 6 ಜಿಲ್ಲೆಗಳಿಗೆ ಆರೆಂಜ್, 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು.12.ಅಕ್ಟೋಬರ.25: ರಾಜ್ಯಾದ್ಯಂತ ಭಾರಿ ಮಳೆ ಸಾಧ್ಯತೆ ಬೆಂಗಳೂರು, ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ಇತರೆಡೆ ಮಳೆ ಹೆಚ್ಚಾಗಿದೆ. 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ತುಮಕೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಕೊಡಗು, ದಾವಣಗೆರೆ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೋಲಾರಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಉತ್ತರ ಕನ್ನಡ, ಉಡುಪಿಯಲ್ಲಿ ಒಣಹವೆ ಇರಲಿದೆ.

ಎಲ್ಲೆಲ್ಲಿ ಮಳೆಯಾಗಿದೆ?
ಮದ್ದೂರು, ಚಿಂತಾಮಣಿ, ಚನ್ನಗಿರಿ, ಹುಣಸೂರು, ಸಿರಾ, ತಿಪಟೂರು, ಚನ್ನರಾಯಪಟ್ಟಣ, ಗೇರುಸೊಪ್ಪ, ಕೃಷ್ಣರಾಜಪೇಟೆ, ನಂಜನಗೂಡು, ಅರಕಲಗೂಡು, ಎಚ್ಡಿ ಕೋಟೆ, ಕನಕಪುರ, ಕೃಷ್ಣರಾಜಸಾಗರ, ಮೈಸೂರು, ಎನ್ಆರ್ಪುರ, ನಾಗಮಂಗಲ, ತರೀಕೆರೆ, ಯಗಟಿ, ಕೋಲಾರ, ಅಜ್ಜಂಪುರದಲ್ಲಿ ಮಳೆಯಾಗಿದೆ.

ಚಿಕ್ಕಬಳ್ಳಾಪುರ, ಕೊಪ್ಪ, ಎಂಎಂಹಿಲ್ಸ್, ಮಧುಗಿರಿ, ಮಾಗಡಿ, ಸೈದಾಪುರ, ತ್ಯಾಗರ್ತಿ, ಬೇಲೂರು, ಚಾಮರಾಜನಗರ, ಗುಬ್ಬಿ, ಗುರುಮಿಟ್ಕಲ್, ಬನವಾಸಿ, ಧಾರವಾಡ, ಬೆಂಗಳೂರು ಕೆಐಎಎಲ್, ಹಿರಿಯೂರು, ಚಿತ್ರದುರ್ಗ, ಹೊಸಕೋಟೆ, ಜೋಯ್ಡಾ, ಜಯಪುರ, ಮೂಡುಬಿದಿರೆ, ನಾಪೋಕ್ಲು, ಕುಮಟಾ, ಪೊನ್ನಂಪೇಟೆ, ರಾಯಲ್ಪಾಡು, ಸಿದ್ದಾಪುರ, ಸೋಮವಾರಪೇಟೆಯಲ್ಲಿ ಮಳೆಯಾಗಿದೆ.

Similar Posts

Leave a Reply

Your email address will not be published. Required fields are marked *