|

ರಾಜ್ಯದಲ್ಲಿ ನೌಕರರು ಮತ್ತು ಗುತ್ತಿಗೆದಾರರಿಗೆ ಅರೋಗ್ಯ ಯೋಜನೆ ಭಾಗ್ಯ.

ಬೆಂಗಳೂರು.21.ಜೂನ್.25:- ಸರ್ಕಾರಿ ಇಲಾಖೆಗಳ ನೌಕರರು ಮತ್ತು ಗುತ್ತಿಗೆದಾರರಿಗೆ ಆರೋಗ್ಯ ಇಲಾಖಯಿಂದ ಅರೋಗ್ಯ ಭದ್ರತೆ ಸಿಕ್ಕಿದೆ. ಇನ್ನು ನೌಕರರ ಆರೋಗ್ಯ, ಆಸ್ಪತ್ರೆ ಖರ್ಚು ವೆಚ್ಚಗಳ ಹೊರೆ ಕಡಿಮೆಯಾಗಲಿದೆ.

ನೌಕರರು, ಗುತ್ತಿಗೆದಾರರಿಗೆ ಆರೋಗ್ಯ ಭದ್ರತೆ ಯೋಜನೆ ತರಲಾಗಿದ್ದು ಇದರಡಿಯಲ್ಲಿ 5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ. ಇಂತಹದ್ದೊಂದು ಐತಿಹಾಸಿಕ ನಿರ್ಣಯಕ್ಕೆ ನಿನ್ನೆಯ ಕ್ಯಾಬಿನೆಟ್ ಸಭೆಯಲ್ಲಿ ಅಂಕಿತ ಹಾಕಲಾಗಿದೆ.

ಸುವರ್ಣ ಆರೋಗ್ಯ ಟ್ರಸ್ಟ್ ಯೋಜನೆ ಮುಖಾಂತರ ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ನೌಕರರು ಮತ್ತು ಅವರ ಅವಲಂಬಿತರು 5 ಲಕ್ಷ ರೂ.ವರೆಗೆ ಚಿಕಿತ್ಸಾ ಸೌಲಭ್ಯ ಪಡೆದುಕೊಳ್ಳಬಹುದು. ಇದು ಸುಮಾರು 3 ಲಕ್ಷ ನೌಕರರಿಗೆ ಪರಯೋನವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ಈ ಯೋಜನೆಯು ಇಎಸ್‌ಐಸಿ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಮುಂತಾದ ಯಾವುದೇ ಆರೋಗ್ಯ ಯೋಜನೆಯಲ್ಲಿ ಇಲ್ಲದ ನೌಕರರಿಗೆ ಅನ್ವಯವಾಗಲಿದೆ. ಈ ಯೋಜನೆಗಾಗಿ ಪ್ರತೀ ತಿಂಗಳು ನೌಕರರ ವೇತನದಿಂದ ಸುಮಾರು 100 ರೂ. ಕಡಿತ ಮಾಡಲಾಗುತ್ತದೆ. ಉಳಿದ 100 ರೂ. ಸರ್ಕಾರ ಭರಿಸಲಿದೆ.

Similar Posts

Leave a Reply

Your email address will not be published. Required fields are marked *