ರಾಯಚೂರು.11.ಆಗಸ್ಟ್.25:- ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದಿಂದ 2025-26 ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಗೆ ನಿಗದಿಪಡಿಸಿದ ಗುರಿಯಂತೆ ಯೂರಿಯಾ, ಡಿ.ಎ.ಪಿ ರಸಗೊಬ್ಬರ ಜಿಲ್ಲೆಗೆ ಬರುತ್ತಿದ್ದು, ರಸಗೊಬ್ಬರದ ಕೊರತೆ ಬಗ್ಗೆ ರೈತರು ಆತಂಕಪಡುವ ಅವಶ್ಯಕತೆ ಇರುವುದಿಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರಕಾಶ್ ಚೌಹಾಣ್ ಅವರು ತಿಳಿಸಿದ್ದಾರೆ.
ಆಗಸ್ಟ್ 8ರಂದು ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರವು ಪಿಎಸಿಎಸ್ ಸಿಂಧನೂರು-13, ತುಂಗಾಭದ್ರ ಎಫ್‌ಪಿಒ ಸಿಂಧನೂರು-12, ಪಿಎಸಿಎಸ್ ಸಾಲಗುಂದಾ-13, ಪಿಎಸಿಎಸ್ ಗೋನವಾರ-12, ಸ್ನಾಸ್ತ್ರ ಎಫ್‌ಪಿಒ ಜವಳಗೇರಾ-13 ಪಿಎಸಿಎಸ್ ಜವಳಗೇರಾ-12, ಪಿಎಸಿಎಸ್ ಗುಂಜಳ್ಳಿ-12 ಪಿಎಸಿಎಸ್ ಹಾರಾಪುರ-12, ಪಿಎಸಿಎಸ್ ದಿನ್ನಿ-9, ಪಿಎಸಿಎಸ್ ತಲಮಾರಿ-9, ನಂದಿನಿ ಎಫ್‌ಪಿಒ ನೆಲಹಾಳ-9, ಟಿಎಪಿಸಿಎಮ್‌ಎಸ್ ಮಾನವಿ-36 ಪಿಎಸಿಎಸ್ ನಕ್ಕುಂದಿ-18, ಪಿಎಸಿಎಸ್ ಚೀಕಲಪರ್ವಿ-9, ಪಿಎಸಿಎಸ್ ಆಲ್ಮಾಳ-9, ಪಿಎಸಿಎಸ್ ಹರವಿ-9, ಪಿಎಸಿಎಸ್ ಕವಿತಾಳ-9, ಪಿಎಸಿಎಸ್ ಕುರ್ಡಿ-9, ಟಿಎಪಿಸಿಎಮ್‌ಎಸ್ ದೇವದುರ್ಗ-36, ಪಿಎಸಿಎಸ್ ಹೀರೆಕೋಟೆಕಲ್-9, ಆರ್‌ಎಪಿಸಿಎಮ್‌ಸಿ ರಾಯಚೂರು-18, ಪಿಎಸಿಎಸ್ ತುರ್ವಿಹಾಳ-9, ಪಿಎಸಿಎಸ್ ಅರಳಹಳ್ಳಿ-9, ಪಿಎಸಿಎಸ್ ಮಲ್ಲಾಪುರ-9, ಪಿಎಸಿಎಸ್ ತಿಡಿಗೋಳ-9, ಪಿಎಸಿಎಸ್ ಉದ್ಬಾಳ-9 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ವಿತರಿಸಲಾಗಿದೆ.
ಆಗಸ್ಟ್ 8ರಂದು ಜಿಲ್ಲೆಯಲ್ಲಿ ಡಿ.ಎ.ಪಿ ಗೊಬ್ಬರವು ಪಿಎಸಿಎಸ್ ಹೀರಾಪುರ-18, ಪಿಎಸಿಎಸ್ ದಿನ್ನಿ-9, ಪಿಎಸಿಎಸ್ ತಲಮಾರಿ-9, ನಂದಿನಿ ಎಫ್‌ಪಿಒ ನೆಲಹಾಳ-7.5, ಪಿಎಸಿಎಸ್ ಚೀಕಲಪರ್ವಿ-9, ಪಿಎಸಿಎಸ್ ಆಲ್ದಾಳ-9, ಪಿಎಸಿಎಸ್ ಹರವಿ-9, ಪಿಎಸಿಎಸ್ ಕವಿತಾಳ-9, ಪಿಎಸಿಎಸ್ ಕುರ್ಡಿ-9, ಟಿಎಪಿಸಿಎಮ್‌ಎಸ್ ದೇವದುರ್ಗ-18, ಪಿಎಸಿಎಸ್ ಹೀರೆಕೋಟ್ನೇಕಲ್-9, ಪಿಎಸಿಎಸ್ ತುರ್ವಿಹಾಳ-9, ಪಿಎಸಿಎಸ್ ಅರಳಹಳ್ಳಿ-9, ಪಿಎಸಿಎಸ್ ಮಲ್ಲಾಪುರ-9, ಪಿಎಸಿಎಸ್ ತಿಡಿಗೋಳ-9, ಪಿಎಸಿಎಸ್ ಉದ್ಬಾಳ-9 ಮೆಟ್ರಿಕ್ ಟನ್ ಡಿ.ಎ.ಪಿ ಗೊಬ್ಬರವು ರೈತರಿಗೆ ವಿತರಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.