02/08/2025 12:07 PM

Translate Language

Home » ಕೊಪ್ಪಳ » ಯುವಕರು ಸರ್ಕಾರದ ಸ್ವಯಂ ಉದ್ಯೋಗದಿಂದ ಸ್ವಾವಲಂಬಿಗಳಾಗಬೇಕು:ಅಮ್ಜದ್ ಪಟೇಲ್

ಯುವಕರು ಸರ್ಕಾರದ ಸ್ವಯಂ ಉದ್ಯೋಗದಿಂದ ಸ್ವಾವಲಂಬಿಗಳಾಗಬೇಕು:ಅಮ್ಜದ್ ಪಟೇಲ್

Facebook
X
WhatsApp
Telegram

ಕೊಪ್ಪಳ ಜುಲೈ.25: ಯುವಕರು ಸರ್ಕಾರದ ಸ್ವಯಂ ಉದ್ಯೋಗದ ಯೋಜನೆಗಳನ್ನು ಬಳಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್ ಅವರು ಹೇಳಿದರು.

ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಹತ್ತಿರ ಕೃಷಿ ಇಲಾಖೆಯ ಪ್ರಧಾನ ಮಂತ್ರಿ ಕಿರು ಆಹಾರ ಉದ್ದಿಮೆಗಳ ಔಪಾಚಾರೀಕರಣ ಯೋಜನೆಯಡಿ  (PMFME)  ಸ್ಥಾಪಿತವಾದ ಡಿ.ಬಿ ಮಶ್ರೂಮ್ ಅವರ ಭೀಮಾ ನ್ಯಾಚುರಲ್ಸ್ನ ಅಣಬೆ ಕೃಷಿ ಘಟಕ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಂಟಿ ಕೃಷಿ ನಿರ್ದೇಶಕರಾದ ಟಿ.ಎಸ್. ರುದ್ರೇಶಪ್ಪ ಅವರು, ಈ ಯೋಜನೆಯಡಿ ಜಿಲ್ಲೆಯಲ್ಲಿ ಆಹಾರ ಸಂಸ್ಕರಣೆಯಲ್ಲಿ ತೊಡಗಿಸಿಕೊಂಡ 178 ಕ್ಕೂ ಹೆಚ್ಚು ಜನ ಫಲಾನುಭವಿಗಳಿದ್ದು, ಸ್ವಯಂ ಉದ್ಯೋಗ ಕಂಡುಕೊoಡಿದ್ದಾರೆ. ಈ ಯೋಜನೆಯು ತರಬೇತಿ, ಬ್ಯಾಂಕ್ ಸಾಲ, ಯೋಜನಾ ವೆಚ್ಚದ ಶೇ.50 ರಷ್ಟು ಅಥವಾ ಗರಿಷ್ಟ 15 ಲಕ್ಷಗಳ ವರೆಗೆ ಸಹಾಯಧನದ ಜೊತೆಗೆ ಪ್ಯಾಕಿಂಗ್, ಬ್ರಾö್ಯಂಡಿAಗ್ ಬಗ್ಗೆ ಮಾಹಿತಿ ನೀಡುವ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿದ್ದು, ಆಹಾರ ಸಂಸ್ಕರಣೆ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುವವರು ಯೋಜನೆಯ ಲಾಭ ಪಡೆದುಕೊಳ್ಳಲು ಜಂಟಿ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಅಣಬೆ ಕೃಷಿ ಮತ್ತು ಉತ್ಪನ್ನಗಳ ಘಟಕ ಸ್ಥಾಪಿಸಿದ ಭೀಮಪ್ಪ ಶಿವಪ್ಪ ಕೋರವರ ಅವರು ಮಾತನಾಡಿ, ನನ್ನ ಪದವಿಯ ನಂತರ ಜೀವನ ನಿರ್ವಹಣೆಗೆ ಉದ್ಯೋಗದ ಯೋಚನೆಯಲ್ಲಿದ್ದ ನನಗೆ ಈ ಯೋಜನೆಯ ಮಾಹಿತಿ ಸಿಕ್ಕ ತಕ್ಷಣ ಬೆಂಗಳೂರಿನ ಐಐಎಚ್‌ಆರ್ ಮತ್ತು ಮೈಸೂರಿನ ಸಿಎಫ್‌ಟಿಆರ್‌ಐ ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ತರಬೇತಿ ಪಡೆದುಕೊಂಡೆನು. ನಂತರ ಈ ಯೋಜನೆ ಮುಖಾಂತರ ಬ್ಯಾಂಕ್ ಸಾಲ ಮತ್ತು ಸಹಾಯಧನ ಪಡೆದುಕೊಂಡು ಅಣಬೆಯಿಂದ ಉಪ್ಪಿನಕಾಯಿ, ಬಿಸ್ಕೆಟ್ ಮತ್ತು ಪೌಡರ್ ಗಳನ್ನು ತಯಾರಿಸಿದೆ. ಮಾರುಕಟ್ಟೆಯಲ್ಲಿ ಈ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ನಾನು ಮಾಸಿಕವಾಗಿ ಸುಮಾರು 30 ರಿಂದ 40 ಸಾವಿರದವರೆಗೆ ಆದಾಯ ಗಳಿಸಿ ಸ್ವಾವಲಂಬಿ ಜೀವನ ನೆಡೆಸುತ್ತಿದ್ದೇನೆ ಎಂದು ತಮ್ಮ ಅನುಭವ ಹಂಚಿಕೊoಡರು.

ಕಾರ್ಯಕ್ರಮದಲ್ಲಿ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಶ್ರೀನಿವಾಸ ಕುಲಕರ್ಣಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವಶೇಖರ್ ಪಾಟೀಲ್, ಅಯೋಧ್ಯಾ ಕ್ರಾಪ್ಸ್ ಅಕಾಡೆಮಿ ಸಂಸ್ಥಾಪಕರಾದ ಎಮ್.ಬಿ ಪಾಟೀಲ್, ಕೃಷಿ ಇಲಾಖೆಯ ಜಿಲ್ಲಾ ಅನುಷ್ಠಾನ ಸಮಿತಿಯ ನಳಿನಿ, ಆತ್ಮ ಯೋಜನೆಯ ಶಿವಪ್ಪ ನಾಯಕ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ರಾಘವೇಂದ್ರ ಗೊಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!