ರಾಜ್ಯದಲ್ಲಿ ಈ ಅತಿಥಿ ಉಪನ್ಯಾಸಕರಿಗೆ ಶಾಕ್ ರಾಜ್ಯದ ಪದವಿ ಕಾಲೇಜುಗಳಿಗೆ ಕಳೆದ ತಿಂಗಳು ಕೌನ್ಸೆಲಿಂಗ್ ಮೂಲಕ ಆಯ್ಕೆ ಯಾದ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದ್ದು, ಇದರಿಂದಾಗಿ ಯುಜಿಸಿ ಅರ್ಹತೆ ಇಲ್ಲದ 6,665 ಅತಿಥಿ ಉಪನ್ಯಾಸಕರು ಉದ್ಯೋಗ ಕಳೆದುಕೊಂಡಿದ್ದಾರೆ.
ಮಾನವೀಯತೆ ಹಾಗೂ ಹಿರಿತನದ ಆಧಾರದ ಮೇಲೆ ತಮ್ಮ ಸೇವಾ ಭದ್ರತೆ ಒದಗಿಸುವಂತೆ ಒತ್ತಾಯಿಸಿ ಯುಜಿಸಿ ಅರ್ಹತೆ ವಂಚಿತ ಉಪನ್ಯಾಸಕರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಈ ಮಧ್ಯೆ ಕಾಲೇಜು ಶಿಕ್ಷಣ ಇಲಾಖೆ, ಡಿ.8ರಂದು ಏಕಾಏಕಿ ರಾಜ್ಯದ ಎಲ್ಲ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆಗೊಳಿಸಿದೆ. ಅಲ್ಲದೇ ಡಿ.8ರಿಂದ 10ರ ಒಳಗಾಗಿ ನವೆಂಬರ್‌ನಲ್ಲಿ ಕೌನ್ಸೆಲಿಂಗ್ ಮೂಲಕ ಆಯ್ಕೆಯಾದವರನ್ನು ಸೇವೆಗೆ ಸೇರಿಕೊಳ್ಳಲು ಅವಕಾಶ ನೀಡಿದೆ.
ರಾಜ್ಯದ ಕೆಲ ವಿವಿಗಳ ವ್ಯಾಪ್ತಿಯಲ್ಲಿ ಡಿ.17 ಮತ್ತು ಇನ್ನೂ ಕೆಲವು ಕಡೆ ಡಿ.21ರವರೆಗೆ ಅತಿಥಿ ಉಪನ್ಯಾಸಕರ ಸೇವಾವಧಿ ಇತ್ತು. ಆದರೆ ಕಾಲೇಜು ಶಿಕ್ಷಣ
ಹೊಸದಾಗಿ ಅತಿಥಿ ಉಪನ್ಯಾಸಕರನ್ನು ನೇಮ ಕ ಮಾಡುವಾಗ ಯುಜಿಸಿ ನಿಯಮಾವಳಿ ಗಳನ್ನು ಪರಿಗಣಿಸಲಿ. ಅದನ್ನು ಬಿಟ್ಟು ದಶಕಗಳಿಂದ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಯುಜಿಸಿ ನಿಯಮಾವಳಿ ಅನ್ವಯಿಸುವುದು ಸರಿಯಲ್ಲ, ಸರಕಾರ ತಕ್ಷಣ ಅತಿಥಿ ಉಪನ್ಯಾಸಕರ ಬಿಡುಗಡೆ ಆದೇಶ ರದ್ದುಪಡಿಸಿ, ಸೇವಾ ಭದ್ರತೆ ಒದಗಿಸಬೇಕು.
-ಹನುಮಂತಗೌಡ ಕಲ್ಪನಿ
ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಇಲಾಖೆ ದಿಢೀರನೇ ಎಲ್ಲ ಅತಿಥಿ ಉಪನ್ಯಾಸಕರನ್ನು ಬಿಡುಗಡೆ ಮಾಡಿ, ಕೌನ್ಸೆಲಿಂಗ್ ಮೂಲಕ ಆಯ್ಕೆಯಾದವರನ್ನು ಭರ್ತಿ ಮಾಡಿಕೊಳ್ಳಲು ಆರಂಭಿಸಿರುವುದು, ಯುಜಿಸಿ ಅರ್ಹತೆ ಇಲ್ಲದ ಅತಿಥಿ ಉಪನ್ಯಾಸಕರಿಗೆ ಆಘಾತ ತಂದಿದೆ.
ಕೈಕೊಟ್ಟ ಕಾಂಗ್ರೆಸ್
ಅವರೇ ತಮ್ಮ ಸಿದ್ದರಾಮಯ್ಯ ಅವರು ಪ್ರತಿ ಪಕ್ಷದ ನಾಯಕರಾಗಿದ್ದಾಗ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ, ವೇತನ ಹೆಚ್ಚಳ ಮಾಡಬೇಕು ಎಂದು ಪಟ್ಟು ಹಿಡಿದಿದ್ದರು. ವೇತನವೂ ಹೆಚ್ಚಾಗಿತ್ತು. ಆದರೆ ಈಗ ಮುಖ್ಯಮಂತ್ರಿಯಾಗಿದ್ದಾರೆ. ಪ್ರಣಾಳಿಕೆಯಲ್ಲೂ ಸೇವಾ ಭದ್ರತೆ ನೀಡುವುದಾಗಿ ಕೊಟ್ಟಿದ್ದ ಭರವಸೆ ಈಡೇರಿಲ್ಲ ಎನ್ನುತ್ತಾರೆ ಅತಿಥಿ ಉಪನ್ಯಾಸಕರು.
ಅತಿಥಿ ಉಪನ್ಯಾಸರ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರ ಜೊತೆ ಚರ್ಚಿಸಿ, ಯಾರಿಗೂ ಅನ್ಯಾಯ ಆಗದ ರೀತಿಯಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗುವುದು.
-ಎಚ್.ಕೆ. ಪಾಟೀಲ ಕಾನೂನು ಸಚಿವ
ಮನವಿಗೆ ಸ್ಪಂದಿಸಿಲ್ಲ
ಅತಿಥಿ ಉಪನ್ಯಾಸಕರ ಬೇಡಿಕೆ ನ್ಯಾಯ ಯುತವಾಗಿದೆ. ಸರಕಾರ ಅವರ ಬೇಡಿಕೆ ಈಡೇರಿಸುವವರೆಗೆ ನಡೆಸಬಾರದು ఎండు ಸಭಾಪತಿ ಬಸವರಾಜ ಹೊರಟ್ಟಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದರು. ಅಲ್ಲದೇ ಕಾನೂನು ಸಚಿವ ಎಚ್.ಕೆ. ವಾಟೀಲರು ಶಿಕ್ಷಣ ಇಲಾಖೆ ಹಾಗೂ ಅಡ್ವಕೇಟ್ ಜನರಲ್ ಸಲಹೆ ಮೇರೆಗೆ ಕೌನ್ಸೆಲಿಂಗ್ ನಡೆಸಬಾರದು ಎಂದು ಸೂಚಿಸಿದ್ದರೂ ಕಾಲೇಜು ಶಿಕ್ಷಣ ಇಲಾಖೆ ಕೌನ್ಸೆಲಿಂಗ್ ನೇಮಕ ಮಾಡಿಕೊಳ್ಳುತ್ತಿರುವುದು ಯುಜಿಸಿ ಮಾನ್ಯತೆ ಇಲ್ಲದ 6665 ಅತಿಥಿ ಉಪನ್ಯಾಸಕರಿಗೆ ಆಘಾತ ತಂದಿದೆ.





Any questions related to ಯುಜಿಸಿ ನಿಯಮಾವಳಿ ನೆಪದಲ್ಲಿ 6,665 ಅತಿಥಿ ಉಪನ್ಯಾಸಕರಿಗೆ ರಕ್ಷಣೆ??