04/08/2025 10:48 AM

Translate Language

Home » ಲೈವ್ ನ್ಯೂಸ್ » ಯುಜಿಸಿ ಕ್ವಾಲಿಪೈಡ್, ನಾನ್ ಕ್ವಾಲಿಫೈಡ್ ಎಂಬ ಭೇದಭಾವ ಮಾಡದೇ ಸೇವಾ ಭದ್ರತೆ ನೀಡಿ: ಡಾ. ಹನಮಂತಗೌಡ ಕಲ್ಮನಿ

ಯುಜಿಸಿ ಕ್ವಾಲಿಪೈಡ್, ನಾನ್ ಕ್ವಾಲಿಫೈಡ್ ಎಂಬ ಭೇದಭಾವ ಮಾಡದೇ ಸೇವಾ ಭದ್ರತೆ ನೀಡಿ: ಡಾ. ಹನಮಂತಗೌಡ ಕಲ್ಮನಿ

Facebook
X
WhatsApp
Telegram

ಬೆಂಗಳೂರು.16.ಜುಲೈ.25:- ರಾಜ್ಯದಲ್ಲಿ ಎರಡು ದಶಕದಿಂದ ಸತತ ಕಾರ್ಯನಿರ್ವಹಿಸುವ ಅತಿಥಿ ಉಪನ್ಯಾಸಕರನ್ನು ಕ್ವಾಲಿಪೈಡ್, ನಾನ್ ಕ್ವಾಲಿಫೈಡ್ ಎಂಬ ಭೇದಭಾವ ಮಾಡದೇ ಸೇವಾ ಭದ್ರತೆ 2 . ಮಾನ್ಯರೇ ನಮ್ಮ ರಾಜ್ಯದ 430 ಕ್ಕೂ ಹೆಚ್ಚಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 9000 ಕ್ಕಿಂತ ಅಧಿಕ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ.

ಈಗ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಪ್ರಸಕ್ತ 2025-26 ನೇ ಸಾಲಿಗೆ ಕೌನ್ಸಿಲಿಂಗ್ ಮಾಡಲು ಮುಂದಾkಗಿದೆ. ಯುಜಿಸಿ ಕ್ಯಾಲಿಪೈಡ್ ಆಧಾರದ ಮೇಲೆ ನಡೆಸುವ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ತಕ್ಷಣವೇ ತಡೆಹಿಡಿಯಬೇಕು. ಎಲ್ಲಾ ಅತಿಥಿ ಉಪನ್ಯಾಸಕರನ್ನು ಕ್ವಾಲಿಪೈಡ್, ನಾನ್ ಕ್ವಾಲಿಫೈಡ್ ಎಂಬ ಭೇದಭಾವ ಮಾಡದೇ ಸೇವಾ ಭದ್ರತೆ ಒದಗಿಸಲು ತಕ್ಷಣವೇ ಸರ್ಕಾರ ಕ್ರಮಕೈಗೊಳ್ಳಬೇಕು ಅಂದು ಡಾ. ಹನಮಂತಗೌಡ ಕಲ್ಮನಿ  ಅವರು ಮನವಿ ಪತ್ರ ಸಲಿಸಿದರು.

ಈಗಾಗಲೇ ಹಲವಾರು ಬಾರಿ ಉನ್ನತ ಶಿಕ್ಷಣ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಹತ್ತಾರು ವರ್ಷಗಳಿಂದ ಮನವಿ ಮಾಡಿಕೊಂಡರು ಕಾನೂನು ತೊಡಕಿದೆ ನೀವು ನ್ಯಾಯಾಲಯಕ್ಕೆ ಹೋಗಿ ಎಂದು ಹೇಳುತ್ತಿರುವುದು ಬೇಸರದ ಸಂಗತಿಯಾಗಿದೆ. ಈಗೀನ ಸರ್ಕಾರ ತಮ್ಮ ಪ್ರಣಾಳಿಕೆಯಲ್ಲಿ ಅತಿಥಿ ಉಪನ್ಯಾಸಕರನ್ನು ಖಾಯಂ ಗೊಳಿಸುವುದಕ್ಕೆ ಸೂಕ್ತ ಯೋಜನೆ ಕೈಗೊಳ್ಳಲಾಗುವುದು ಎಂದು ಹೇಳಿರುವುದು ಕೈಗನ್ನಡಿ ಇದೆ.

2023 ಜನೇವರಿ 6 ರಂದು ವಿಧಾನಸೌಧದಲ್ಲಿ ಮಾನ್ಯ ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ ಸಚಿವರು, ವಿಧಾನ ಪರಿಷತ್ತು ಸದಸ್ಯರಾದ ಮಾನ್ಯ ಮಟ್ಟಣನವರು, ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ, ಈ ಸಭೆಯಲ್ಲಿ ಸರ್ಕಾರ ಕೈಗೊಂಡ ನಿರ್ಣಯದಂತೆ ಪ್ರತಿ ವರ್ಷ ಕೌನ್ಸಿಲಿಂಗ್ ಪ್ರಕ್ರೀಯೆ ಮಾಡದೇ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನೇ ಮುಂದುವರಿಸಬೇಕು ಎಂದು ಸಭೆಯಲ್ಲಿ ನಿರ್ಣಯವಾಗಿತ್ತು. ಇದನ್ನು ಸರ್ಕಾರ ಮತ್ತು ಉನ್ನತಿ ಶಿಕ್ಷಣ ಇಲಾಖೆ ಗಮಣಿಸಬೇಕು.

ಅತಿಥಿ ಉಪನ್ಯಾಸಕ, ತಾತ್ಕಾಲಿಕ ಎಂಬುದು ಅವೈಜ್ಞಾನಿಕ ಪದ್ಧತಿ ಉನ್ನತ ಶಿಕ್ಷಣ ವ್ಯವಸ್ಥೆಗೆ ಮತ್ತು ಕಾಲೇಜುಗಳ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಗುಣಮಟ್ಟದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸದ್ಯ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ವೃತ್ತಿಯಲ್ಲಿ ಸಾಕಷ್ಟು ಪ್ರತಿಭಾವಂತ, ಅರ್ಹರು ಮತ್ತು ಭೋಧನಾ ಕೌಶಲ್ಯವುಳ್ಳ ಅಭ್ಯರ್ಥಿಗಳು ಇದ್ದರೂ ಸಹ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೆ ಶೈಕ್ಷಣಿಕ ಚಟುವಟಿಕೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇದೆ. ವರ್ಷಪೂರ್ತಿ ಕೆಲಸ ಸಿಗದಿರುವುದು ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಪ್ರತಿನಿತ್ಯ ಆತಂಕದ ಹಾಗೂ ಅಭದ್ರತೆಯ ಪರಿಸ್ಥಿತಿಯಲ್ಲಿ ಬದುಕುವಂತೆ ಮಾಡಿದೆ. ಅತಿಥಿ ಉಪನ್ಯಾಸಕರ ಪ್ರಮುಖ ಬೇಡಿಕೆಗಳಾದ ಸೇವಾ ಭದ್ರತೆಯನ್ನು ಕಲ್ಪಿಸಬೇಕು, ಅತಿಥಿ ಉಪನ್ಯಾಸಕರ ಪ್ರಸ್ತುತ 2025-26 ರ ಕೌನ್ಸಿಲಿಂಗ್ ನೇಮಕ ಪ್ರಕ್ರಿಯೆಯನ್ನು ತಕ್ಷಣವೇ ತಡೆಹಿಡಿಯಬೇಕು ಮತ್ತು ಶೈಕ್ಷಣಿಕ ವರ್ಷದ 12 ತಿಂಗಳವರಿಗೂ ವೇತನ ನೀಡಬೇಕು. 11 ಜುಲೈ 2009 ರ ಒಳಗಡೆ ಎಂ.ಪಿಲ್ ಪದವಿಯನ್ನು ಪಡೆದವರಿಗೆ ಯುಜಿಸಿ ನಿಯಮಾವಳಿಯ ಪ್ರಕಾರ.

ಅರ್ಹತೆ ಮಾನದಂಡ ಪರಿಗಣಿಸಬೇಕು. ಅತಿಥಿ ಉಪನ್ಯಾಸಕರಿಗೆ ಯುಜಿಸಿ ನಿಯಮಾವಳಿಯಂತೆ ವೇತನ ನೀಡಬೇಕು. ಕಳೆದ 2024-25 2025-26ordades ಹೊರಗೆ ಉಳಿದ ಎಲ್ಲಾ ಅತಿಥಿ ಉಪನ್ಯಾಸಕರಿಗೂ ಸೇವೆ ಸಲ್ಲಿಸಲು ಅವಕಾಶ ನೀಡಲು ಕ್ರಮ ಕೈಗೊಳ್ಳಬೇಕು. ನಮ್ಮ ಬೇಡಿಕೆಗಳನ್ನು ಜರೂರು ಪರಿಶಿಲೀಸಿ, ಕರ್ನಾಟಕ ರಾಜ್ಯದ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕು. ಒಂದು ವೇಳೆ ನಮ್ಮ ಬೇಡಿಕೆಗಳು ಇಡೇರದಿದ್ದರೆ ನಾವು ರಾಜ್ಯಾದ್ಯಂತ ಹೋರಾಟ ಮಾಡಲು ಸಿದ್ದರಾಗಿದ್ದೇವೆ.

ಕಾನೂನು ಸಚಿವರಾದ ಮಾನ್ಯ ಶ್ರೀ.ಹೆಚ್.ಕೆ.ಪಾಟೀಲ ಅವರ ಜಿಲ್ಲಾ ಕೇಂದ್ರದಲ್ಲಿ ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರು ಬೇಡಿಕೆಗಳಿಗಾಗಿ 1 ಸತ್ಯಾಗ್ರಹ ನಡೆಸಲು ತೀರ್ಮಾನ ಮಾಡಲಾಗಿದೆ ದಿನಾರ 19.07.2025 ರ ಒಂದು ದಿನ ಜಿಲ್ಲಾ ಆಡಳಿತ ಭವನದ ಎದರು ಧರಣಿ ಮಾಡಲು ನಿರ್ಧರಿಸಿದ್ದೇವೆ.

ಹೋರಾಟಕ್ಕೆ ಅವಕಾಶ ಮಾಡಿಕೊಡದೆ ಸಮಸ್ಯೆ ಪರಿಹರಿಸಬೇಕೆಂದು ತಮ್ಮಲ್ಲಿ ವಿನಂತಿ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!