Home » ಲೈವ್ ನ್ಯೂಸ್ » ಯುಜಿಸಿ ಅರ್ಹ/ಅನರ್ಹ ಬೇಧವಿಲ್ಲದೆ ಭದ್ರತೆ ಮತ್ತು ಮಾನವೀಯ ಹಕ್ಕುಗಳನ್ನು ರಕ್ಷಿಸುವ ಕ್ರಮ ಕೈಗೊಳ್ಳಬೇಕು.ವೆಂಕಟೇಶ್ ಸಿ,

ಯುಜಿಸಿ ಅರ್ಹ/ಅನರ್ಹ ಬೇಧವಿಲ್ಲದೆ ಭದ್ರತೆ ಮತ್ತು ಮಾನವೀಯ ಹಕ್ಕುಗಳನ್ನು ರಕ್ಷಿಸುವ ಕ್ರಮ ಕೈಗೊಳ್ಳಬೇಕು.ವೆಂಕಟೇಶ್ ಸಿ,

Facebook
X
WhatsApp
Telegram

ಬೆಂಗಳೂರು.21.ಜನವರಿ.25:ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಸೇವೆಗೂ ಇಲ್ಲ ಗೌರವ ಕೊನೆಗೆ ಯುಜಿಸಿ ಅನರ್ಹ ಅಂದು 25-30 ವರ್ಷ ಸೇವೆ ಸಲ್ಲಿಸಿದ 6600 ಅತಿಥಿ ಉಪನ್ಯಾಸಕರ ಜೀವನ ಹಾಳು ಮಾಡಲಾಗಿದೆ.

ಯುಜಿಸಿ ನಿಯಮ ಪಿಎಚ್‌ಡಿ, ಎನ್‌ಇಟಿ ಅಥವಾ ಕೆ-ಸೆಟ್ ಅರ್ಹತೆ ಇಲ್ಲದ ಕಾರಣ ಅತಿಥಿಗಳ ಜೀವನ ಈಗ ಅತಂತ್ರವಾಗಿದೆ. ಆರೋಗ್ಯ ವಿಮೆ, ಪಿಂಚಣಿ, ಕೌಟುಂಬಿಕ ಭದ್ರತೆ ಇಲ್ಲದೆ ಸೇವೆ ಸಲ್ಲಿಸಿದ ಇವರಿಗೆ ವೃತ್ತಿ ಬದುಕಿನ ಸಂಧ್ಯಾಕಾಲದಲ್ಲಿ ನೋವು ಎದುರಾಗಿದೆ. ಮುಖ್ಯಮಂತ್ರಿಗಳು ಅನುಕೂಲ ಮಾಡಿಕೊಡಬೇಕೆಂದು ಯುಜಿಸಿ ಅನರ್ಹ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಶ್ರೀ ವೆಂಕಟೇಶ್ ಸಿ ಅವರು ತಿಳಿಸಿದರು.

ಅತಿಥಿ ಉಪನ್ಯಾಸಕರ ಸುದೀರ್ಘ, ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ UGC – Non-UGC ಬೇಧವಿಲ್ಲದೆ ಖಾಯಂ ನೇಮಕಕ್ಕೆ ರಾಜ

ರಾಜ್ಯದ ವಿವಿಧ ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳಲ್ಲಿ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಗೌರವಯುತ ಅತಿಥಿ ಉಪನ್ಯಾಸಕರು, ನಮ್ಮ ಸುದೀರ್ಘ ಮತ್ತು ನಿಸ್ವಾರ್ಥ ಸೇವೆಯನ್ನು ಸರ್ಕಾರ ಗಮನಿಸಿ, ಗೌರವಪೂರ್ವಕವಾಗಿ ಈ ಕುರಿತು ಮನವಿ ಸಲ್ಲಿಸುತ್ತಿದ್ದೇವೆ.

ರಾಜ್ಯದ ಅನೇಕ ಅತಿಥಿ ಉಪನ್ಯಾಸಕರು ಕ್ರಮವಾಗಿ 5, 10, 15, 20, 25 ಮತ್ತು 30 ವರ್ಷಗಳಿಂದ ಯಾವುದೇ ಹಣಕಾಸಿನ ಭದ್ರತೆ ಇಲ್ಲದೆ, ಸೇವಾ ಭದ್ರತೆ ಇಲ್ಲದೆ, ಹುದ್ದೆಯ ಭರವಸೆ ಇಲ್ಲದೆ, ಮತ್ತು UGC – Non-UGC ಬೇಧವಿಲ್ಲದೆ ಅಕಾಡೆಮಿಕ್ ಚಟುವಟಿಕೆಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಕಾಲೇಜುಗಳ ವಿದ್ಯಾ ಗುಣಮಟ್ಟ, ಫಲಿತಾಂಶ ಮತ್ತು ವಿದ್ಯಾರ್ಥಿಗಳ ಭವಿಷ್ಯ ಸುಧಾರಣೆಯಲ್ಲಿ ಅತಿಥಿ ಉಪನ್ಯಾಸಕರ ಕೊಡುಗೆ ನಿಸ್ಸಂದೇಹವಾಗಿ ಪ್ರಮುಖವಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ವಿನಂತಿಯೇನೆಂದರೆ-ಅತಿಥಿ ಉಪನ್ಯಾಸಕರಿಗೆ ಯುಜಿಸಿ ಅರ್ಹ ಮತ್ತು ಅನರ್ಹ ಬೇಧವಿಲ್ಲದೆ ಸಮಾನ ಸ್ಥಾನಮಾನ ನೀಡಬೇಕು, ಸುದೀರ್ಘ ಸೇವೆಯನ್ನು ಮಾನ್ಯತೆ ನೀಡಿ ಖಾಯಂ ನೇಮಕ ಕ್ರಮ ಕೈಗೊಳ್ಳಬೇಕು, ವಯೋಮಿತಿ ಹಾಗೂ ನೇಮಕಾತಿ ಮಾನದಂಡಗಳಲ್ಲಿ ವಿನಾಯಿತಿ ನೀಡಬೇಕು, ಸೇವಾ ಭದ್ರತೆ, ವೇತನ ಭದ್ರತೆ ಮತ್ತು ಮಾನವೀಯ ಹಕ್ಕುಗಳನ್ನು ರಕ್ಷಿಸುವ ಕ್ರಮ ಕೈಗೊಳ್ಳಬೇಕು.

ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರವು ಬಲಗೊಂಡು, ವಿದ್ಯಾರ್ಥಿಗಳು ಗುಣಮಟ್ಟದ ಪಾಠವನ್ನು ಪಡೆಯಲು ನಾವು ನೀಡಿರುವ ಸೇವೆ ಸರ್ಕಾರದಿಂದ ಸಕಾಲದಲ್ಲಿ ಮಾನ್ಯತೆ ಪಡೆಯಬೇಕು ಎಂಬುದು ನಮ್ಮ ವಿನಂತಿ.

ನಮ್ಮ ನ್ಯಾಯಸಮ್ಮತ ಬೇಡಿಕೆಯನ್ನು ಮಾನ್ಯವಾಗಿ ಪರಿಗಣಿಸಿ,

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology