ಬೆಂಗಳೂರು.15.ಫೆಬ್ರವರಿ.26: ಅತಿಥಿ ಉಪನ್ಯಾಸಕರು ಸಲ್ಲಿಸಿದ ಪಿಎಚ್.ಡಿ ಪ್ರಮಾಣಪತ್ರ ಗಳ ನೈಜತೆ ಪತ್ತೆ ಹಚ್ಚಲು ಪ್ರಮಾಣಿತ ಕಾರ್ಯಾಚರಣೆಯ ವಿಧಾನ (ಎಸ್‌ಒಪಿ) ಅಳವಡಿಸಿ ಕೊಳ್ಳಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದ್ದು, ಅದಕ್ಕಾಗಿ ಸಮಿತಿ ರಚಿಸಿದೆ. ಪ್ರತ್ಯೇಕ
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ 2025-26ನೇ ಸಾಲಿನ ಎರಡು, ನಾಲ್ಕು ಹಾಗೂ ಅರನೇ ಸೆಮಿಸ್ಪರ್‌ಗೆ ಯುಜಿಸಿ ಅರ್ಹತೆ ಪಡೆದಿರುವ ಅತಿಥಿ ಉಪನ್ಯಾಸಕರನ್ನೇ ನೇಮಕ ಮಾಡಿ ಕೊಳ್ಳಲಾಗಿತ್ತು. ನೇಮಕಗೊಂಡ ಹಲವು ಅಭ್ಯರ್ಥಿಗಳು ನಕಲಿ ಪಿಎಚ್‌ಡಿ ಪ್ರಮಾಣಪತ್ರ ಸಲ್ಲಿಸಿದ್ದಾರೆ ದೂರುಗಳು ಸಲ್ಲಿಕೆಯಾಗಿದ್ದವು. ఎంబ
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರಾಗಿ ಕೆಲಸ ಮಾಡುವವರು ಸ್ನಾತಕೋತ್ತರ ಪದವಿಯ ಜತೆಗೆ
ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಅಥವಾ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್) ತೇರ್ಗಡೆ ಯಾಗಿರಬೇಕು. ಪಿಎಚ್.ಡಿ ಪಡೆ ದಿರಬೇಕು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ರೂಪಿಸಿದೆ. ಪ್ರಥಮ ದರ್ಜೆ ಕಾಲೇಜು ನಿಯಮ ಗಳಲ್ಲೂ ಇಂತಹ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕ ರನ್ನೇ ನೇಮಕ ಮಾಡಿಕೊಳ್ಳಬೇಕು ಎಂದು ಸೂಚಿಸಿದೆ.
ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಹಾಗಾಗಿ, ಕಾಲೇಜು ಶಿಕ್ಷಣ ಇಲಾಖೆ ಯುಜಿಸಿ ಅರ್ಹತೆ ಇಲ್ಲದ ಸುಮಾರು ಆರು ಸಾವಿರ ಅತಿಥಿ ಉಪನ್ಯಾಸಕರನ್ನು ಕೈಬಿಟ್ಟು, ಅರ್ಹತೆ ಇರುವ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿತ್ತು.
200ಕ್ಕೂ ಹೆಚ್ಚು ‘ಅತಿಥಿ’ಗಳ ರಾಜೀನಾಮೆ
ದಾಖಲೆಗಳ ಪರಿಶೀಲನೆಗೆ ಕಾಲೇಜು ಶಿಕ್ಷಣ ಇಲಾಖೆ ಪ್ರಮಾಣಿತ ಕಾರ್ಯಾಚರಣೆಯ ವಿಧಾನ ಅಳವಡಿಸಿಕೊಳ್ಳುವ ಮಾಹಿತಿ ಸಿಗುತ್ತಿದ್ದಂತೆ ಯುಜಿಸಿ ಅರ್ಹತೆ ಅನುಸಾರ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಆಯ್ಕೆಯಾಗಿದ್ದ 200ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಎನ್.ಮಂಜುಶ್ರೀ, ‘ಕೆಲ ಅತಿಥಿ ಉಪನ್ಯಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ನೀಡುವಾಗ ವೈಯಕ್ತಿಕ ಕಾರಣಗಳನ್ನು ನಮೂದಿಸಿದ್ದಾರೆ. ಅವರು ಸಲ್ಲಿಸಿದ ಪ್ರಮಾಣ ಪತ್ರಗಳ ನೈಜತೆ ಪರೀಶೀಲನೆಯ ನಂತರವೇ ನಿಜವಾದ ಕಾರಣ ಗೊತ್ತಾಗುತ್ತದೆ’ ಎಂದರು.
~~~~~~~~~~~~~~~~~~~~~~~~~~~~~~~~~~~~
ಪಿಎಚ್.ಡಿ ಪ್ರಮಾಣಪತ್ರಗಳ ನೈಜತೆ ಪತ್ತೆ ಹಚ್ಚಲು ಪ್ರಮಾಣಿತ ಕಾರ್ಯಾಚರಣೆಯ ವಿಧಾನ (ಎಸ್‌ಒಪಿ) ಅಳವಡಿಸಿಕೊಳ್ಳಲಾಗುತ್ತಿದ್ದು, ಶೀಘ್ರ ಆದೇಶ ಹೊರಡಿಸಲಾಗುವುದು
ಎನ್.ಮಂಜುಶ್ರೀ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ,
~~~~~~~~~~~~~~~~~~~~~~~~~~~~~~~~~~~
ಅತಿಥಿ ಉಪನ್ಯಾಸಕರ ಪ್ರಮಾಣಪತ್ರಗಳ ನೈಜತೆ ಪರಿಶೀಲನೆಯ ಮಾದರಿಯಲ್ಲೇ ಕಾಯಂ ಪ್ರಾಧ್ಯಾಪಕರ ಪಿಎಚ್.ಡಿ ಪ್ರಮಾಣಪತ್ರಗಳನ್ನೂ ಪರಿಶೀಲನೆ ನಡೆಸಬೇಕು. ನಕಲಿ ಸಾಬೀತಾದರೆ ಅವರನ್ನು ಕೆಲಸದಿಂದ ವಜಾ ಮಾಡಬೇಕು
ಅರುಣ್ ಹೊಸಕೊಪ್ಪ, ಕಾರ್ಯದರ್ಶಿ, ಸಂಸ್ಕೃತಿ ಎಜುಕೇಷನ್ ಟ್ರಸ್ಟ್
Source Prajavani






Any questions related to ಯುಜಿಸಿ ಅರ್ಹತೆ ಕಡ್ಡಾಯ: ಹಲವು ಅತಿಥಿ ಉಪನ್ಯಾಸಕರ ಪ್ರಮಾಣಪತ್ರಗಳು ಮತ್ತು ನಕಲಿಪಿಎಚ್.ಡಿ ನೈಜತೆ : ಎಸ್‌ಪಿ?