ಕೊಪ್ಪಳ.01.ಆಗಸ್ಟ.25: ಯಲಬುರ್ಗಾ ಪಟ್ಟಣ ವ್ಯಾಪ್ತಿಯ ನಗರ ವಸತಿ ಯೋಜನೆಯಡಿ 1636 ನಿವೇಶನ ರಹಿತರಿದ್ದು ಅವರಿಗೆ ವಸತಿಯೋಜನೆಯಡಿ ನಿವೇಶನ ಸೌಲಭ್ಯ ಕಲ್ಪಿಸಿಕೊಡಲು, ಯಲಬುರ್ಗಾ ನಗರ ಸ್ಥಳೀಯ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಜಮೀನು ಅವಶ್ಯವಿದ್ದು, ಜಮೀನು ಖರೀದಿ ರೂಪದಲ್ಲಿ ಕೊಡಲು ಇಚ್ಛಿಸುವವರನ್ನು ಆಹ್ವಾನಿಸಲಾಗಿದೆ.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು, ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಯಲಬುರ್ಗಾ ಪಟ್ಟಣ ಆಶ್ರಯ ಸಮಿತಿಯ ಅಧ್ಯಕ್ಷರಾದ ಬಸವರಾಜ ರಾಯರಡ್ಡಿ ಅವರು ಆಶ್ರಯ ಯೋಜನೆಯಡಿ ಜಮೀನು ಖರೀದಿಸಲು ಕಡತದಲ್ಲಿ ಅನುಮೋದನೆ ನೀಡಿದ್ದು, ಜಮೀನು ಖರೀದಿ ರೂಪದಲ್ಲಿ ಕೊಡಲಿಚ್ಛಿಸುವವರು ಅಗತ್ಯ ದಾಖಲಾತಿಗಳಾದ ಚಾಲ್ತಿ ಪಹಣಿ ಪತ್ರಿಕೆ, ಫಾರ್ಮ ನಂ. 10, ಜಮೀನು ಮಾಲೀಕರ ಆಧಾರ ಕಾರ್ಡ ಪ್ರತಿ, ಆಕಾರ ಬಂದ ಹಾಗೂ ನಕ್ಷೆಗಳೊಂದಿಗೆ ಯಲಬುರ್ಗಾ ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ 15 ದಿನಗಳೊಳಗಾಗಿ ಮನವಿ ಸಲ್ಲಿಸುಂತೆ ಯಲಬುರ್ಗಾ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ನಾಗೇಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.