ರಾಯಚೂರು.05.ಆಗಸ್ಟ.25: ಇಲ್ಲಿನ ಯರಮರಸ್ ಸರ್ಕಾರಿ ಆದರ್ಶ ವಿದ್ಯಾಲಯ 2025-26ನೇ ಸಾಲಿನ 6ನೇ ತರಗತಿ ದಾಖಲಾತಿ ಕೌನ್ಸೆಲಿಂಗ್ ಪ್ರಕ್ರಿಯು ಆಗಸ್ಟ್ 11ರಿಂದ 14ರವರೆಗೆ ಹಮ್ಮಿಕೊಳ್ಳಲಾಗಿದ್ದು, ಅರ್ಹ ಅಭ್ಯರ್ಥಿಗಳು ಭಾಗವಹಿಸುವಂತೆ ಕೋರಲಾಗಿದೆ.
ಸಾಮಾನ್ಯ ವರ್ಗದ ದಾಖಲಾತಿ ಪ್ರಕ್ರಿಯೆವು ಆಗಸ್ಟ್ 11 ಹಾಗೂ 12 ರಂದು ನಡೆಯಲಿದೆ. ಮೀಸಲಾತಿ ವರ್ಗದ ದಾಖಲಾತಿ ಪ್ರಕ್ರಿಯೆವು ಆಗಸ್ಟ್ 13 ಹಾಗೂ 14ರಂದು ನಿಗದಿಪಡಿಸಲಾಗಿದೆ. ನಿಗದಿತ ದಿನಾಂಕದoದು ಬೆಳಗ್ಗೆ 10 ಗಂಟೆಗೆ ಪೋಷಕರು ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ದಾಖಲಾತಿ ಸಮಯದಲ್ಲಿ ಒದಗಿಸಬೇಕು. ಸಮಯಕ್ಕೆ ಸರಿಯಾದ ದಾಖಲೆಗಳೊಂದಿಗೆ ಹಾಜರಾಗದಿದ್ದಲ್ಲಿ ಅಥವಾ ಗೈರುಹಾಜರಾದಲ್ಲಿ ಮತ್ತೊಮ್ಮೆ ಅವಕಾಶ ನೀಡಲಾಗುವುದಿಲ್ಲ ಎಂದು ಯರಮರಸ್ ಸರ್ಕಾರಿ ಆದರ್ಶ ವಿದ್ಯಾಲಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.