ಬೀದರ: ಜು.೦೧ಃ ನಾನು ಶ್ರೀ ಸ್ವಾಮಿದಾಸ ತಂದೆ ಬಾಬುರಾವ ಎಸ್. ಎಂ. ಕೃಷ್ಣ ನಗರ, ಬೀದರ ನಿವಾಸಿಯಾಗಿದ್ದು, ದಿನಾಂಕ ೦೮-೦೪-೨೦೨೫ ರಂದು ಮಾಹಿತಿ ಹಕ್ಕು ಅಧಿನಿಯಮ ೨೦೦೫ ರ ಅಡಿಯಲ್ಲಿ ಗ್ರಾಮ ಪಂಚಾಯತ ಕಾರ್ಯಾಲಯ ಯದಲಾಪುರನಲ್ಲಿ ೧೫ನೇ ಹಣಕಾಸಿನ ೨೦೨೪-೨೫ನೇ ಸಾಲಿನ ಖರ್ಚು ವೆಚ್ಚದ ವಿವರ, ಸಂಬAಧಪಟ್ಟ ಕ್ರಿಯಾ ಯೋಜನೆಗಳು ಅಂದಾಜು ಪಟ್ಟಿ ಪ್ರತಿಗಳು, ಎಮ್.ಬಿ. ನಕಲು ಕಡತಗಳು, ಕಾಮಗಾರಿ ಮತ್ತು ಜಿಪಿಎಸ್ ಮಾಡಿರುವ ಭಾವಚಿತ್ರಗಳು, ಬಿಲ್ ಹಾಗೂ ಗುತ್ತೆದಾರರ ಗುತ್ತಿಗೆ ತೆಗೆದುಕೊಂಡ ಕಾಮಗಾರಿ ವಿವರ ಮತ್ತು ಬ್ಯಾಂಕ್ ಸ್ಟೇಟಮೆಂಟ್‌ಗಳ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿರುತ್ತೇನೆ.
ಈ ಪ್ರಯುಕ್ತ ನಾನು ಕೇಳಿದ ಮಾಹಿತಿಗೆ ಯದಲಾಪೂರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ದಿನಾಂಕ ೨೫-೦೪-೨೦೨೫ ರಂದು ನನಗೆ ಪತ್ರ ಬರೆದು, ತಾವು ಕೇಳಿದ ಮಾಹಿತಿ ಸುಮಾರು ೫೨೪ ಪುಟಗಳಿದ್ದು, ಪ್ರತಿ ಪುಟಕ್ಕೆ ರೂ ೨ ರಂತೆ ಒಟ್ಟು ರೂ. ೧೦೪೮/-ರೂ. ಗಳನ್ನು ಪಾವತಿಸುವಂತೆ ಪತ್ರದಲ್ಲಿ ತಿಳಿಸಿ ಸದರಿ ಮೊತ್ತವನ್ನು ಪಾವತಿಸಿ ಮಾಹಿತಿ ಪಡೆಯಬಹುದು ಎಂದು ವಿವರಿಸಿರುತ್ತಾರೆ.
ಆದರೆ, ಅವರು ಪತದ್ರoಲ್ಲಿ ತಿಳಿಸಿರುವಂತೆ ನಾನು ಹಣ ಪಾವತಿಸಲು ಹೋದರೆ ಈಗ ಸಮಯ ಮುಗಿದಿದೆ ಎಂದು ನೆಪ ಹೇಳಿ ಹಣ ಕಟ್ಟಿಸಿಕೊಳ್ಳಲು ನಿರಾಕರಿಸುತಿದ್ದಾರೆ. ಅವರು ಬರೆದ ಪತ್ರದಲ್ಲಿ ಹಣ ಕಟ್ಟಲು ಯಾವುದೇ ಕೊನೆಯ ದಿನಾಂಕ ನೀಡಿರುವುದಿಲ್ಲ. ಅವರು ಮಾಹಿತಿ ಒದಗಿಸಿದರೆ ತಮ್ಮ ಭ್ರಷ್ಟಾಚಾರ ಹೊರಬರುತ್ತದೆಂದು ಈ ರೀತಿಯ ಯಾವುದೋ ಒಂದು ಸಬೂಬು ಹೇಳಿ ಮಾಹಿತಿ ನೀಡುತ್ತಿಲ್ಲವೆಂಬುದು ನನ್ನ ಆರೋಪವಾಗಿದೆ.
ಒಂದು ವೇಳೆ ನಿಜವಾಗಿಯೂ ನಾನು ಕೇÃಳಿದ ಮಾಹಿತಿ ನೀಡಲು ಕೊನೆಯ ದಿನಾಂಕ ಇರುವುದಾದರೆ ಅವರು ಪತ್ರದಲ್ಲಿ ಯಾಕೆ ಕೊನೆಯ ದಿನಾಂಕ ನಮೂದಿಸಿಲ್ಲ ಎಂಬ ಪ್ರಶ್ನೆ ನನ್ನದಾಗಿದೆ. ಹಾಗಾಗಿ ಯದಲಾಪೂರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ರಾಜಾರೋಷವಾಗಿ ತಮ್ಮ ಮನಬಂದAತೆ ವರ್ತಿಸುತಿದ್ದಾರೆ. ಮಾಹಿತಿ ನೀಡಲು ಹಿಂದೇಟು ಹಾಕುತ್ತಾ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸುತಿದ್ದಾರೆ.
ಸAಬAಧಪಟ್ಟ ಮೇಲಾಧಿಕಾರಿಗಳು ಯದಲಾಪುರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಶ್ರೀ ಸ್ವಾಮಿದಾಸ ತಂದೆ ಬಾಬುರಾವ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ.