ಬೀದರ: ಜು.೦೧, ೨೦೨೪-೨೫ನೇ ಸಾಲಿನ ೧೫ನೇ ಹಣಕಾಸು ಯೋಜನೆ ಮತ್ತು ೨೦೨೩ ರಿಂದ ೩೦-೦೬-೨೦೨೫ರ ವರೆಗೆ ಕರ ವಸೂಲಿ ಡಿಜಿಟಲ್ ಬಗ್ಗೆ ತನಿಖೆಗೆ ಆದೇಶಿಸಿ ಯದಲಾಪೂರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಅವರನ್ನು ಅಮಾನತ್ತು ಮಾಡಬೇಕೆಂದು ಯದಲಾಪುರ ಗ್ರಾಮ ಪಂಚಾಯತ ಸದಸ್ಯರುಗಳು ಒತ್ತಾಯಿಸಿದ್ದಾರೆ.
ಈ ಕುರಿತು ಮಾನ್ಯ ಕಾರ್ಯನಿರ್ವಾಹಕಾಧಿಕಾರಿಗಳಿಗೆ ದೂರು ನೀಡಿರುವ ಅವರುಗಳು ಅವ್ಯವಹಾರದ ಬಗ್ಗೆ ಹಾಗೂ ಪಿಡಿಒ ಗ್ರಾಮ ಪಂಚಾಯತ್ ಸದಸ್ಯರಗುಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ಸಂಪೂರ್ಣವಾದ ವಿವರ ನೀಡಿ ಪಿಡಿಒ ಅಮಾನತ್ತಿಗೆ ಆಗ್ರಹಿಸಿದ್ದಾರೆ. ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರನ್ನು ಸಹ ಭೇಟಿಯಾಗಿ ದೂರು ಅರ್ಜಿಯ ಪ್ರತಿಯನ್ನು ನೀಡಿದಲ್ಲದೆ.
ಪಿಡಿಒ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ತುಣುಕುಗಳು ತಮ್ಮಲ್ಲಿದ್ದು, ಎಲ್ಲಿ ಯಾವಾಗ ಬೇಕಾದರೂ ತೊರಿಸಲು ಸಿದ್ಧರಿದ್ದೆವೆಂದು ಅವರುಗಳು ವಿವರಿಸಿ ಪಿಡಿಒ ಅಮಾನತ್ತಿಗಾಗಿ ಒತ್ತಾಯಿಸಿದ್ದಾರೆ.
ಯದಲಾಪೂರ ಗ್ರಾಮ ಪಂಚಾಯತಗೆ ೫ ಗ್ರಾಮಗಳು ಒಳಗೊಂಡಿರುತ್ತವೆ. ಆದರೆ ಇಲ್ಲಿಯ ತನ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಾಗಳು ಆಗಿರುವುದಿಲ್ಲ. ಬೀದಿ ದೀಪಗಳು ಇಲ್ಲಾ ಚರಂಡಿ ಸ್ವಚ್ಛತೆ ಇಲ್ಲ ಕುಡಿಯುವ ನೀರಿನ ಸಮಸ್ಯೆ ಇದೆ ಸುಮಾರು ೫ ತಿಂಗಳು ಕಳೆದರು ಕೆಟ್ಟು ಹೋಗಿದ್ದ ಬೋರವೆಲ್ ಮೋಟರ್ ರೀಪೇರಿ ಆಗುತ್ತಿಲ್ಲ ಇನ್ನೂ ಹಲವಾರು ಸಮಸ್ಯೆಗಳು ಗ್ರಾಮಗಳಲ್ಲಿ ಅವ್ಯವಸ್ಥಿತವಾಗಿ ಇವೆ ೧೫ನೇ ಹಣಕಾಸು ಯೋಜನೆಯಡಿ ಬಂದAತೆ ಹಣದ ಬಗ್ಗೆ ಸದಸ್ಯರು ವಿವರಣೆ (ಲೆಕ್ಕ) ಕೇಳಿದರೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಸದಸ್ಯರುಗಳಿಗೆ ಉತ್ತರ ನೀಡದೆ ಅವಾಕ್ಷ್ಯ ಶಬ್ದಗಳಿಂದ ನಿಂದನೆ ಮಾಡುತ್ತ ಇದ್ದಾರೆ. ಹಾಗಾಗಿ ೧೫ನೇ ಹಣಕಾಸು ಯೋಜನೆ ಹಣ ದುರ್ಬಳಕೆಯಾಗಿರುತ್ತದೆ. ಇದರ ಬಗ್ಗೆ ಕುಲಂಕುಶವಾಗಿ ತನಿಖೆಗೆ ಆದೇಶ ನೀಡಬೇಕು ಮತ್ತು ೨೩-೧೧-೨೦೨೩ ರಿಂದ ೩೦-೦೬-೨೦೨೫ ರವರೆಗೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಅಂದಾಜು ಸುಮಾರು ಹದ್ದಿನಾರು ನೂರು (೧೬೦೦) ಮೇಲ್ಪಟ್ಟು ಡಿಜಿಟಲ್ ಖಾತಾಗಳು ಮಾಡಿರುತ್ತಾರೆ. ಇದರಲ್ಲಿ ಅನೇಕ ಲೇಔಟ್ಗಳು ಕೂಡ ಇರುತ್ತವೆ.
ಆದರೆ ಯಾವ ಸದಸ್ಯರ ಗಮನಕ್ಕೆ ತರದೆ ಸಾಮಾನ್ಯ ಸಭೆಯನ್ನು ಅನುಮೋದನೆ ಪಡೆಯದೆ ತನ್ನ ಮನಬಂದAತೆ ಡಿಜಿಟಲ್ ಖಾತಾಗಳು ಮಾಡಿರುತ್ತಾರೆ ಒಂದು ಖಾತೆಗೆ ಹನ್ನೊಂದು ನೂರು ರೂಪಾಯಿಯಂತೆ ಜಮೇಯಾಗಿದ್ದ ಹಣದ ಬಗ್ಗೆ ಕೇಳದರೆ ಅಧಿಕಾಋಇಗಳು ಉತ್ತರ ನೀಡುತ್ತಿಲ್ಲಾ. ಗ್ರಾಮ ಪಂಚಾಯತ ಸದಸ್ಯರು ಏನೆ ಸಮಸ್ಯೆಗಳ ಬಗ್ಗೆ ಕೇಳದರು ಅಭಿವೃದ್ಧಿ ಅಧಿಕಾರಿಗಳು ಉತ್ತರ ನೀಡುವುದಕ್ಕೆ ತಯಾರಿಲ್ಲ ಮತ್ತು ಗ್ರಾಮಗಳಲ್ಲಿನ ಜನರು ಹೋಸ ಶೌಚಾಲಯ ನಿರ್ಮಾಣಕ್ಕಾಗಿ ಅರ್ಜಿ ಕೋಟ್ಟು ವರ್ಷಗಟ್ಟಲೆ ಆದರೂ ಶೌಚಾಲಯ ನಿರ್ಮಾಣಕ್ಕೆ ಅನುಮೋದನೆ ನೀಡುತ್ತಿಲ್ಲ ಆಯಾ ನಿಗಮದಿಂದ ಮನೆಗಳು ಮಂಜೂರಾಗಿದ್ದು, ಜಿ.ಪಿ.ಎಸ್. ಮಾಡುವುದಕ್ಕೆ ಹಣ ಕೇಳುತ್ತಿದ್ದಾರೆ.
ನರೇಗಾ ಯೋಜನೆಯಡಿ ಮೇಟಿಗಳಿಗೆ ಕೆಲಸ ಕೊಡುತ್ತಿಲ್ಲ ಇದ್ದರಲ್ಲಿ ತಾರತಮ್ಯ ಮಾಡಿ ದ್ವೇಷ ಸಾಧಿಸುತ್ತಿದ್ದಾರೆ. ಗ್ರೇ ವಾಟರ್ ಕಾಮಗಾರಿಗಳಲ್ಲಿ ಎಸ್.ಸಿ. & ಎಸ್.ಟಿ. ವಾರ್ಡಗಳಲ್ಲಿ ಕಾಮಗಾರಿ ಇಡದೆ ತನ್ನ ಮನಬಂದAತೆ ಕ್ರೀಯಾ ಯೋಜನೆ ಮಾಡಿ ಎಸ್.ಸಿ. & ಎಸ್.ಟಿ. ವಾರ್ಡಗಳಿಗೆ ಅನ್ವಯ ಮಾಡಿರುತ್ತಾರೆ ಯಾವ ಸದಸ್ಯರಿಗೂ ಕೂಡ ಅಭಿವೃದ್ಧಿ ಅಧಿಕಾರಿಗಳು ಮರ್ಯಾದೆ ಕೊಡದೆ ವೈಯಕ್ತಿಕ ದ್ವೇಷ ಮಾಡುತ್ತಿದ್ದಾರೆ. ಸದಸ್ಯರ ಕೆಲಗಳಿಗೆ ತಡೆ ಹಿಡಿಯುತ್ತಿದ್ದಾರೆ ಯಾರಾದರೂ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಮಾಹಿತಿ ಹಕ್ಕು ಮತ್ತು ಇನ್ನಿತರ ವಿಷಯಗಳ ಬಗ್ಗೆ ದೂರು ಸಲ್ಲಿಸಿದರೆ ಅವರಿಗೆ ಹೆದರಿಸುವಂತೆ ಕೆಲಸ ಅಧಿಕಾರಿಗಳು ಮಾಡುತ್ತಿದ್ದಾರೆ.
ಸಾಮಾನ್ಯ ಸಭೆ ನಡೆದ ದಿನಾಂಕ ಬಿಟ್ಟು ಬೇರೆ ದಿನಾಂಕ ಹಾಕಿ ಆನ್‌ಲೈನ್ ಅಪ್ಲೋಟ್ ಮಾಡುತ್ತಿದ್ದಾರೆ ಮತ್ತು ೫ ಗ್ರಾಮಗಳಲ್ಲಿ ಯಾವ ಅಭಿವೃದ್ಧಿ ಕಾಮಗಾರಿಯು ಆಗಿರುವುದಿಲ್ಲ. ಅಭಿವೃದ್ಧಿ ಅಧಿಕಾರಿಗಳು ಬರಿ ಡಿಜಿಟಲ್ ಖಾತಾಗಳು ಮಾಡುತ್ತಿದ್ದಾರೆ. ಹೊರತು ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ.
ಡಿಜಿಟಲ್ ಖಾತಾಗಳು ಲಾಗೀನ ತಡೆ ಹಿಡಿಯಬೇಕೆಂದು ಮನವಿ ಮಾಡುತ್ತೇವೆ ಮತ್ತು ೨೦೨೪-೨೫ನೇ ಸಾಲಿನ ಹಣಕಾಸು ಡಿಜಿಟಲ್ ಖಾತಾಗಳ ಕರ ವಸೂಲಿ ಹಣ ಸಾಮಾನ್ಯ ಕರ ವಸೂಲಿ ಹಣದ ಬಗ್ಗೆ ಕುಲಂಕೋಷವಾಗಿ ತನಿಖೆ ಮಾಡಿ ತಪ್ಪಿಸ್ಥರ ವಿರುದ್ಧ ಕಾನೂನು ರೀತಿಯ ಕ್ರಮ ಕೈಕೊಂಡು ಕೂಡಲೇ ಜಾರಿಗೆ ಬರುವಂತೆ ಅಮಾನತು ಮಾಡಬೇಕ್ಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಗುಣವಂತರಾವ ಪಾಟೀಲ, ಕಾವೇರಿ, ಶ್ವೇತಾ, ಅಬ್ದುಲ್, ರಜಾಕ್, ಗೌಸಿಯಾ ಬೇಗಂ, ನಜೀಮಾ ಬೇಗಂ, ಸಲೋಮಿ, ಲಕ್ಷಿö್ಮ ತುಂಗಾ, ಇಂದುಮತಿ, ಶಾದುಲ್, ಲಲಿತಾ, ಭೀಮರಾವ ಪಾಟೀಲ ಅವರುಗಳು ದೂರು ಪತ್ರ‍್ರದಲ್ಲಿ ವಿವರಿಸಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.