06/07/2025 12:31 AM

Translate Language

Home » ಲೈವ್ ನ್ಯೂಸ್ » ಮೊಹರಂ ಹಬ್ಬದ ಆಚರಣೆ: ಜು.05 ರಿಂದ 07 ರವರೆಗೆ ಮದ್ಯ ಮಾರಾಟ ನಿಷೇಧ

ಮೊಹರಂ ಹಬ್ಬದ ಆಚರಣೆ: ಜು.05 ರಿಂದ 07 ರವರೆಗೆ ಮದ್ಯ ಮಾರಾಟ ನಿಷೇಧ

Facebook
X
WhatsApp
Telegram

ಕೊಪ್ಪಳ.05.ಜುಲೈ .25:- ಮೊಹರಂ ಹಬ್ಬದ ಆಚರಣೆ ಪ್ರಯುಕ್ತ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಜುಲೈ 05 ರಿಂದ 07 ರವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳಾದ ಸುರೇಶ ಬಿ.ಇಟ್ನಾಳ ಅವರು ಆದೇಶ ಹೊರಡಿಸಿದ್ದಾರೆ.

ಮೊಹರಂ ಹಬ್ಬದ ಆಚರಣೆಯ ಪ್ರಯುಕ್ತ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆ, ಶಾಂತಿ ಪಾಲನೆಗಾಗಿ ಮತ್ತು ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ಹಿತದೃಷ್ಟಿಯಿಂದ ಕರ್ನಾಟಕ ಅಬಕಾರಿ ಕಾಯ್ದೆ-1965ರ ಕಲಂ 21ರನ್ವಯ ಜಿಲ್ಲೆಯಾದ್ಯಂತ ಜುಲೈ 05 ರ ಬೆಳಿಗ್ಗೆ 06 ಗಂಟೆಯಿAದ ಜು.07 ರ ರಾತ್ರಿ 11 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಈ ವಿಷಯವಾಗಿ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿ ಅದರಲ್ಲಿ ಆರಕ್ಷಕ ವೃತ್ತ ನಿರೀಕ್ಷಕರು, ಅಬಕಾರಿ ವೃತ್ತ ನಿರೀಕ್ಷಕರು ಕಾರ್ಯನಿರ್ವಹಿಸಲು ಆದೇಶಿಸಿದೆ. ಈ ಆದೇಶವನ್ನು ಜಾರಿಗೆ ತರಲು ನಿರ್ಲಕ್ಷ್ಯ ತೋರಿಸಿದವರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!