ಬೀದರ21.ಮೇ.25:- ಪ್ರತಿಷ್ಠಿತ ಕಂಪನಿಯಾದ ಮಹಿಂದ್ರಾ ಮತ್ತು ಮಹಿಂದ್ರಾ ಲಿಮಿಟೆಡ್ (ಆಠೋಮೆಟಿವ್ ಡಿವಿಜನ್) ಜಹೀರಾಬಾದ ಕಂಪನಿಯಲ್ಲಿ ಶಿಶಿಕ್ಷು ತರಬೇತಿಗಾಗಿ ಪ್ರಸ್ತುತ ಅಂತಿಮ ವರ್ಷದಲ್ಲಿ ತರಬೇತಿ ಪಡೆಯುತ್ತಿರುವ ಮತ್ತು ಐಟಿಐ ಪಾಸಾದ Diesel Mech, Electrician, Fitter, Motor Mechanic ಅಭ್ಯರ್ಥಿಗಳಿಗೆ ಮೇ.23 ರಂದು ಬೆಳಿಗ್ಗೆ 10 ಗಂಟೆಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಐಟಿಐ ಕಾಲೇಜು, ಮನ್ನಳ್ಳಿ ರಸ್ತೆ ಬೀದರನಲ್ಲಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿರುತ್ತದೆ ಎಂದು ಬೀದರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರಣ ಆಸಕ್ತ ಆಭ್ಯರ್ಥಿಗಳು ತಮ್ಮ ಎಲ್ಲ ಮೂಲ ಪ್ರಮಾಣ ಪತ್ರಗಳೊಂದಿಗೆ ಹಾಗೂ ಒಂದು ಸೆಟ್ ಝಿರಾಕ್ಸ ಪ್ರತಿಗಳೊಂದಿಗೆ ಕ್ಯಾಂಪಸ್ ಸಂದರ್ಶನಕ್ಕೆ ಹಾಜರಾಗಿ ಇದರ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9542112252, 9886181311, 9110412264ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.