10/06/2025 1:29 AM

Translate Language

Home » ಲೈವ್ ನ್ಯೂಸ್ » ಮೃತ ವ್ಯಕ್ತಿಯ ವಾರಸುದಾರರ ಪತ್ತೆಗಾಗಿ ಮನವಿ.!

ಮೃತ ವ್ಯಕ್ತಿಯ ವಾರಸುದಾರರ ಪತ್ತೆಗಾಗಿ ಮನವಿ.!

Facebook
X
WhatsApp
Telegram


ಬೀದರ 10.ಜನವರಿ.25,:- ಇಂದು ಬೀದರ ರೈಲ್ವೆ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಹುಮನಾಬಾದ ಮತ್ತು ಹಳ್ಳಿಖೇಡ (ಕೆ) ರೈಲು ನಿಲ್ದಾಣಗಳ ಮಧ್ಯ ಕೆಮ್ ನಂ. 49/7-8 ನೇದ್ದರಲ್ಲಿ ದಿನಾಂಕ: 22-12-2024 ರಂದು ಅಂದಾಜು 45 ವರ್ಷದ ಅಪರಿಚಿತ ವ್ಯಕ್ತಿಯ ಮೃತ ದೇಹವು ಕಂಡುಬಂದಿದ್ದು, ಈವರೆಗೆ ಮೃತನ ವಾರಸುದಾರರು ಯಾರು ಎಂಬುವುದಾಗಿ ಪತ್ತೆಯಾಗಿರುವುದಿಲ್ಲ ಎಂದು ಬೀದರ ರೈಲ್ವೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಬೀದರ ರೈಲು ನಿಲ್ದಾಣದ ಡಿವಾಯ್.ಎಸ್.ಎಸ್.ಎಸ್‍ಸಿ ರೈಲ್ವೆ ಬೀದರ ಅವರ ಲಿಖಿತ ಮಾಹಿತಿ ಮೇರೆಗೆ ಬೀದರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್.ನಂ. 34/2024 ಕಲಂ 194 ಬಿಎನ್‍ಎಸ್‍ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದ್ದು, ಮೃತ ವ್ಯಕ್ತಿಯು ಅಂದಾಜು 5 ಅಡಿ 6 ಇಂಚ್ ಎತ್ತ ಇದ್ದು, ಅಗಲವಾದ ಹಣೆ, ಸಧೃಡ ಮೈಕಟ್ಟು, ಗೋಧಿ ಮೈಬಣ್ಣ, ತಲೆಯಲ್ಲಿ ಕಪ್ಪು ಉದ್ದನೆಯ ಕೂದಲು, ಮುಖದ ಮೇಲೆ ಉದ್ದನೆಯ ಗಡ್ಡ ಮತ್ತು ಮೀಸೆ ಇದ್ದು, ಮೈಮೇಲೆ ಒಂದು ಕಪ್ಪು ಬಣ್ಣದ ಜಾಕೇಟ್, ಒಂದು ಕಪ್ಪು ಬಣ್ಣದ ಪ್ಯಾಂಟ್, ಒಂದು ಕಂದು ಬಣ್ಣದ ಅಂಡರವೇರ, ಬೂದು ಬಣ್ಣದ ರೌಡ್ ನೇಕ್ ಟಿ-ಶರ್ಟ ಧರಿಸಿರುತ್ತಾನೆ.


ಈ ಮೃತ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಬೀದರ ರೈಲ್ವೆ ನಿಲ್ದಾಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಿಗೆ ಮತ್ತು ದೂರವಾಣಿ ಸಂಖ್ಯೆ: 08482-226389, ಮೊಬೈಲ್ ಸಂಖ್ಯೆ: 9480802133, 7483095508 ಗೆ ಸಂಪರ್ಕಿಸಲು ಕೋರಿದೆ.

Source: www.prajaprabhat.com

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!