04/07/2025 7:49 PM

Translate Language

Home » ಕೊಪ್ಪಳ » ಮೃತ ಮಹಿಳೆಯ ವಾರಸುದಾರರ ಪತ್ತೆಗೆ ಮನವಿ

ಮೃತ ಮಹಿಳೆಯ ವಾರಸುದಾರರ ಪತ್ತೆಗೆ ಮನವಿ

Facebook
X
WhatsApp
Telegram

ಕೊಪ್ಪಳ.04.ಜುಲೈ.25: ಕೊಪ್ಪಳದ ಹುಲಿಗಿ ಹತ್ತಿರದ ಹಳೇ ನಿಂಗಾಪುರ ಗ್ರಾಮದ ಪಾಂಡುರAಗ ದೇವಸ್ಥಾನದ ಹತ್ತಿರದ ತುಂಗಭದ್ರಾ ಎಡದಂಡೆ ಕೆನಾಲ್‌ನಲ್ಲಿ ಸುಮಾರು 30 ರಿಂದ 35 ವರ್ಷದ ಅಪರಿಚಿತ ಮಹಿಳೆಯ ಮೃತದೇಹ ತೇಲುತ್ತಿದ್ದು, ಕಾಲು ಜಾರಿ ಬಿದ್ದಿರಬಹುದು ಅಥವಾ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದ್ದು, ಈ ಬಗ್ಗೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ: 27/2025 ಕಲಂ: 194 ಬಿ.ಎನ್.ಎಸ್.ಎಸ್-2023 ಅಡಿ ಪ್ರಕರಣ ದಾಖಲಾಗಿದೆ.

ಮೃತ ಮಹಿಳೆಯ ಚಹರೆ: ಮೃತ ಮಹಿಳೆಯು ಸುಮಾರು 4.5 ಅಡಿ ಎತ್ತರವಿದ್ದು, ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ತಲೆಯಲ್ಲಿ ಕಪ್ಪು ಕೂದಲು ಇರುತ್ತದೆ. ಮೈಮೇಲೆ ಹಸಿರು ಬಣ್ಣದ ಹೂವಿನ ಚಿತ್ರವಿರುವ ಸೀರೆ ಹಾಗೂ ನೀಲಿ ಬಣ್ಣದ ಜಂಪರ್ ಧರಿಸಿದ್ದಾರೆ.

ಈ ಮೃತ ಮಹಿಳೆಯ ಚಹರೆ ಪಟ್ಟಿಗೆ ಹೋಲಿಕೆಯಾಗುವಂತಹ ಮಹಿಳೆ ಕಾಣೆಯಾಗಿದ್ದಲ್ಲಿ ಸಂಬAಧಿಕರು ಹಾಗೂ ವಾರಸುದಾರರು ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಕೊಪ್ಪಳ ಎಸ್.ಪಿ ದೂ.ಸಂಖ್ಯೆ: 08539-230111, ಕೊಪ್ಪಳ ಉಪ ವಿಭಾಗದ ಡಿ.ಎಸ್.ಪಿ ಮೊ.ಸಂಖ್ಯೆ: 08539-222433, ಕೊಪ್ಪಳ ಗ್ರಾಮೀಣ ವೃತ್ತದ ಸಿ.ಪಿ.ಐ. ದೂ.ಸಂಖ್ಯೆ: 08539-221333, ಹಾಗೂ ಮುನಿರಾಬಾದ ಪೊಲೀಸ್ ಠಾಣೆಯ ಪಿ.ಎಸ್.ಐ ಮೊ.ಸಂಖ್ಯೆ: 08539-270333 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಮುನಿರಾಬಾದ ಪೊಲೀಸ್ ಠಾಣೆ ಪ್ರಕಟಣೆ ಕೋರಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!