ಬೀದರ.21.ಅಗಸ್ಟ್.25:- ಬೀದರ ಜಿಲ್ಲೆಯ 196 ಗ್ರಾಮಗಳ ಪರಿಶಿಷ್ಟ ಪಂಗಡದ ಬುಡಕಟ್ಟು ಜನಾಂಗದವರಿಗೆ ಕುಡಿಯುವ ನೀರು, ರಸ್ತೆ, ಇತರೆ ಮೂಲಭೂತ ಸೌಕರ್ಯಗಳು ಜನರಿಗೆ ಮುಟ್ಟುವಂತೆ ಜಿಲ್ಲಾ ಮಟ್ಟದ ಟ್ರೈನರ್ ರವರಿಂದ ತಾಲೂಕಾ ಮಟ್ಟದ ಟ್ರೈನರ್ ರವರು ತರಬೇತಿ ಪಡೆದು ಸದರಿಯವರು ಗ್ರಾಮಗಳ ಹಂತದಲ್ಲಿ ಗ್ರಾಮ ವರ್ಕಶಾಪ್‍ಗಳನ್ನು ನಡೆಸಿ ಪ್ರತಿಯೊಂದು ಗ್ರಾಮದ ಜನರಿಗೆ ಮೂಲಭೂತ ಸೌಕರ್ಯಗಳ ಕುರಿತು ಅರಿವು ಮೂಡಿಸಲು ಎಲ್ಲಾ ಅನುಷ್ಠಾನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.
ಅವರು ಇತ್ತೀಚಿಗೆ ಜಿಲ್ಲಾ ಮಟ್ಟದಲ್ಲಿ ಆದಿ ಕರ್ಮಯೋಗಿ ಅಭಿಯಾನ ಕುರಿತು ಬಿ.ಎಂ.ಟಿ. ತಾಲೂಕಾ ಮಟ್ಟದ ಮಾಸ್ಟರ್ ಟ್ರೈನರ್‍ಗಳಿಗೆ ಜಿಲ್ಲಾ ಸಂಪನ್ಮೂಲ ಕೇಂದ್ರ ಮೈಲೂರ ಬೀದರನಲ್ಲಿ ಆಯೋಜಿಸಲಾಗಿದ್ದ 3 ದಿನಗಳ (ಆ.20 ರಿಂದ ಆ.22 ರವರೆಗೆ) ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಬೀದರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಅವರು ಮಾತನಾಡಿದರು.
ಈ ಕಾರ್ಯಗಾರದಲ್ಲಿ ಸಂಬಂಧಪಟ್ಟ ಏಳು ಇಲಾಖೆಯ ಅನುಷ್ಠಾನ ಅಧಿಕಾರಿಗಳು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.