Home » ಲೈವ್ ನ್ಯೂಸ್ » ಮೂರು ಕಿಶೋರ ಕಾರ್ಮಿಕ ಮಕ್ಕಳ ಪತ್ತೆ

ಮೂರು ಕಿಶೋರ ಕಾರ್ಮಿಕ ಮಕ್ಕಳ ಪತ್ತೆ

Facebook
X
WhatsApp
Telegram

ಬೀದರ,25.ಡಿಸೆಂಬರ್.25:- ಹುಮನಾಬಾದ ಪಟ್ಟಣದಲ್ಲಿರುವ ವಿವಿಧ ಅಂಗಡಿ, ಗ್ಯಾರೇಜ್, ಹೋಟೆಲ್, ಬೇಕರಿ ಮತ್ತು ಬಸ್ ನಿಲ್ದಾಣದೊಳಗಿರುವ ಅಂಗಡಿಗಳ ಮೇಲೆ ಡಿಸೆಂಬರ್.23 ರಂದು ತಹಶೀಲ್ದಾರ ಹುಮನಾಬಾದ ಹಾಗೂ ಟಾಸ್ಕ ರ್ಫೋಸ್ ಸಮಿತಿಯವರು ಹಠಾತ ದಾಳಿ ನಡೆಸಿ 3 ಕಿಶೋರ ಕಾರ್ಮಿಕ ಮಕ್ಕಳನ್ನು ರಕ್ಷಿಸಲಾಗಿದೆ.


ಮಕ್ಕಳ ಶಾಲಾ ದಾಖಲಾತಿಯನ್ನು ಪರಿಶೀಲಿಸಿ ಅಂಗಡಿ ಮಾಲೀಕರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಬಾಲಕಾರ್ಮಿಕರನ್ನು ಮತ್ತು ಕಿಶೋರ ಕಾರ್ಮಿಕರನ್ನು ನೇಮಿಸಿಕೊಳ್ಳಬಾರದೆಂದು ಅಂಗಡಿಗಳ ಮಾಲೀಕರಲ್ಲಿ ಅರಿವು ಮೂಡಿಸಿ ಕರ ಪತ್ರ ಹಂಚಲಾಯಿತು. ಕಾರ್ಮಿಕ ಆಯುಕ್ತರು ಬೆಂಗಳೂರು ಹಾಗೂ ಬೀದರ ಜಿಲ್ಲಾಧಿಕಾರಿಗಳು, ಕಾರ್ಮಿಕ ಅಧಿಕಾರಿಗಳು ಬೀದರವರ ಆದೇಶದಂತೆ ತಹಶೀಲ್ದಾರ ಹುಮನಾಬಾದ ರವರ ಅಧ್ಯಕ್ಷತೆಯಲ್ಲಿ ಬಾಲ ಕಾರ್ಮಿಕ ಹಾಗೂ ಕಿಶೋರ್ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು 2ನೇ ತ್ರೈಮಾಸಿಕ ಕಾರ್ಯಪಡೆ ಸಮಿತಿ ಸಭೆ ಮತ್ತು ಕಾರ್ಯಕಾರಿಣಿ ಸಮಿತಿ ಹಾಗೂ ಪುನರ್ವಸತಿ ಸಮಿತಿ ಸಭೆ ನಡೆಸಿ ಈ ದಾಳಿ ನಡೆಸಲಾಗಿದೆ.


ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕರು ಹುಮನಾಬಾದ, ರಾಹುಲ ಹಾಗೂ ಯೋಜನಾ ನಿರ್ದೇಶಕರು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಕಾರ್ಮಿಕ ಇಲಾಖೆ ಬೀದರ್, ಅರ್ಜುನ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಸಿಬ್ಬಂದಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹುಮನಾಬಾದ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಿಬ್ಬಂದಿ, ಪುರಸಭೆ ಹುಮನಾಬಾದ ಸಿಬ್ಬಂದಿ, ಜಿ ಎಸ್ ನಿಂಗರಾಜ್ ಅರಸ್ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿ ಆರೋಗ್ಯ ಇಲಾಖೆ, ಪೊಲೀಸ್  ಠಾಣೆ ಅಧಿಕಾರಿ ವೃತ್ತ ನಿರೀಕ್ಷಕರು ಹುಮನಾಬಾದ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಹುಮನಾಬಾದ, ಬಿಸಿಎಂ ಇಲಾಖೆ ಸಿಬಂದಿ, ಮಕ್ಕಳ ಕ್ಷೇತ್ರ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆ ಸೇವಕರು ಹುಮನಾಬಾದ, ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿಯವರು ಭಾಗವಹಿಸಿದ್ದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology