ಕೊಪ್ಪಳ.31.ಜುಲೈ.25:- ಮುನಿರಾಬಾದ ರೈಲ್ವೇ ನಿಲ್ದಾಣದಲ್ಲಿ ಜುಲೈ 26ರಂದು ಸುಮಾರು 35 ರಿಂದ 40 ವರ್ಷದ ಅಪರಿಚಿತ ವ್ಯಕ್ತಿ ಯಾವುದೋ ದೀರ್ಘವಾದ ಖಾಯಿಲೆಯಿಂದ ಬಳಲಿ ಕುಳಿತಲ್ಲೆಯೋ ಸ್ವಾಭಾವಿಕವಾಗಿ ಮೃತಪಟ್ಟಿದ್ದು, ಈ ಬಗ್ಗೆ ಗದಗ ರೈಲ್ವೇ ಪೊಲೀಸ್ ಠಾಣೆಯ ಯುಡಿಆರ್ ನಂ: 33/2025 ಕಲಂ: 194 ಬಿ.ಎನ್.ಎಸ್.ಎಸ್. ಅಡಿ ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿಯ ಚಹರೆ: ಮೃತ ವ್ಯಕ್ತಿಯು ಅಗಲವಾದ ಮುಖ, ಅಗಲವಾದ ಹಣೆ, ಸಾದಾಗಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ಸುಮಾರು 5 ಅಡಿ 5 ಇಂಚು ಎತ್ತರ, ತಲೆಯಲ್ಲಿ ಸುಮಾರು 3-4 ಇಂಚು ಕಪ್ಪು ಕೂದಲುಗಳಿವೆ. ಸುಮಾರು 1 ಇಂಚು ಕಪ್ಪು ದಾಡಿ-ಮೀಸೆ ಇರುತ್ತವೆ. ಮೃತನ ಮೈಮೇಲೆ ಒಂದು ಹಳದಿ ಕಲರಿನ ಫುಲ್ ಟಿ-ಶರ್ಟ, ಒಂದು ಆಕಾಶ ನೀಲಿ ಕಲರಿನ ನೈಟ್ ಪ್ಯಾಂಟ್, ಒಂದು ಕೆಂಪು ಕಲರಿನ ಅಂಡರವಿಯರ್ ಇರುತ್ತದೆ.
ಈ ಮೃತ ವ್ಯಕ್ತಿ ಚಹರೆ ಪಟ್ಟಿಗೆ ಹೋಲಿಕೆಯಾಗುವಂತಹ ವ್ಯಕ್ತಿ ಕಾಣೆಯಾಗಿದ್ದಲ್ಲಿ, ಸಂಬAಧಿಕರು ಹಾಗೂ ವಾರಸುದಾರರು ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಗದಗ ರೈಲ್ವೇ ಪೊಲೀಸ್ ಠಾಣೆ ದೂ.ಸಂ: 08372-278744, ಮೊ.ಸಂ: 9480802128, ಇ-ಮೇಲ್: gadagrly@ksp.gov.in ಅಥವಾ ರೈಲ್ವೇ ಪೊಲೀಸ್ ಕಂಟ್ರೋಲ್ ರೂಂ: 080-22871291 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಗದಗ ರೈಲ್ವೇ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.