ಬೀದರ.25.ಜುಲೈ.25:- ಬೀದರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಅವರು ಇತ್ತೀಚಿಗೆ ಅಲಿಯಾಬಾದ(ಜೆ) ಗ್ರಾಮ ಪಂಚಾಯತಿಯ ಅಲಿಯಾಬಾದ(ಜೆ) ಗ್ರಾಮ ಹಾಗೂ ಚೋಂಡಿ ಗ್ರಾಮದ ಜಲ ಜೀವನ ಮೀಷನ ಯೋಜನೆಯ ಎಕ ಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ಪರಿಶೀಲಿಸಿದರು.
ಈ ಕಾಮಗಾರಿಗಳು ಈಗಾಗಲೇ ಹರ್ ಘರ್ ಜಲ್ ಗ್ರಾಮವೆಂದು ಘೋಷಿಸಿ ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸಲಾಗಿದೆ. ಸದರಿ ಯೋಜನೆಯ ಕಾಮಗಾರಿಗಳ ಕಾರ್ಯಚರಣೆ ಮತ್ತು ನಿರ್ವಹಣೆಯು ಗ್ರಾಮ ಪಂಚಾಯತಿಯಿoದ ನಿರ್ವಹಿಸಿ ಗ್ರಾಮದ ಪ್ರತಿಯೊಬ್ಬ ನಾಗರಿಕರಿಗೆ ಶುದ್ದ ಕುಡಿಯುವ ನೀರು ಪೂರೈಸಲು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ ಅಲಿಯಾಬಾದ ಜೆ ಅವರಿಗೆ ತಿಳಿಸಿದರು.
ಬೀದರ ತಾಲೂಕಿನ ಕೋಳಾರ ಗ್ರಾಮ ಪಂಚಾಯತಿಯ ಕೋಳಾರ(ಬಿ) ಗ್ರಾಮ ಹಾಗೂ ಮಂದಕನಳ್ಳಿ ಗ್ರಾಮ ಪಂಚಾಯತಿಯ ಕಂಗನಕೋಟ ಹಾಗೂ ನಾಗೋರಾ ಗ್ರಾಮಪಂಚಾಯತ್‌ನ ಸಾತೋಳಿ ಗ್ರಾಮಗಳ ಕಾಮಗಾರಿಗಳು ಇಗಾಗಲೇ ಹರ್ ಘರ್ ಜಲ್ ಗ್ರಾಮವೆಂದು ಘೋಷಿಸಿ ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸಲಾಗಿದೆ. ಸದರಿ ಯೋಜನೆಯ ಕಾಮಗಾರಿಗಳ ಕಾರ್ಯಚರಣೆ ಮತ್ತು ನಿರ್ವಹಣೆಯು ಗ್ರಾಮ ಪಂಚಾಯತಿಯಿAದ ನಿರ್ವಹಿಸಿ ಗ್ರಾಮದ ಪ್ರತಿಯೊಬ್ಬ ನಾಗರಿಕರಿಗೆ ಶುದ್ದ ಕುಡಿಯುವ ನೀರು ಪೂರೈಸಲು ಸದರಿ ಪಂಚಾಯತ ಅಭಿವೃದ್ಧಿ ಅಧಿಕಾರಿರವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಬೀದರ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ರಾಮಲಿಂಗಪ್ಪಾ ಬಿರಾದರ್, ತಾಲ್ಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಗೋರಕನಾಥ ಚೆನ್ನಶೆಟ್ಟಿ, ಜಿಲ್ಲಾ ಪಂಚಾಯತ ಜಿಲ್ಲಾ ಯೋಜನಾ ವ್ಯವಸ್ಥಾಪಕ ಪತ್ರು ಜೇ, ಶಾಖಾಧಿಕಾರಿಗಳು ಗ್ರಾ.ಕು.ನೀ ಮತ್ತು ನೈಉವಿ ಬೀದರ ಹಾಗೂ ಬೀದರ ತಾಲ್ಲೂಕಿನ ಕೋಲಾರ, ಮಂದಕನಳ್ಳಿ ಸೇರಿದಂತೆ ನಾಗೋರಾ ಗ್ರಾಮಗಳ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.