04/08/2025 8:38 PM

Translate Language

Home » ಲೈವ್ ನ್ಯೂಸ್ » ಮುಖ್ಯಮಂತ್ರಿ ಪರಿಹಾರ ನಿಧಿ’ಗೆ ಆನಲೈನ್ ಅರ್ಜಿ .!

ಮುಖ್ಯಮಂತ್ರಿ ಪರಿಹಾರ ನಿಧಿ’ಗೆ ಆನಲೈನ್ ಅರ್ಜಿ .!

Facebook
X
WhatsApp
Telegram

ಬೆಂಗಳೂರು: ಕರ್ನಾಟಕ ರಾಜ್ಯ ಮುಖ್ಯಮಂತ್ರಿಯ ರಾಜ್ಯದಲ್ಲಿನ ಬಡತನ ರೇಖೆಗಿಂತ ಕೆಳಗಿರುವಂತ ಜನರಿಗೆ ತುರ್ತು ಸಂದರ್ಭ ಸೇರಿದಂತೆ ಅನಾರೋಗ್ಯ ಸಮಸ್ಯೆಗೆ, ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಪಡೆಯಬಹುದಾಗಿದೆ.

ಈ ಮೊದಲು ಅಫ್ ಲೈನ್ ಮೂಲಕ ಅರ್ಜಿಯೊಂದಿಗೆ ಅಲೆಯ ಬೇಕಿದ್ದಂತ ಪ್ರಕ್ರಿಯೆಯು, ಈಗ ಮತ್ತಷ್ಟು ಸರಳಗೊಳಿಸಲಾಗಿದೆ.

ಜಸ್ಟ್ ಕುಳಿತಲ್ಲಿಯೇ ಆನ್ ಲೈನ್ ಮೂಲಕ ಸಲ್ಲಿಕೆ ಮಾಡಬಹುದಾಗಿದೆ.

ಮುಖ್ಯಮಂತ್ರಿಗಳ ಪರಿಹಾರ ನಿಧಿ ಬಗ್ಗೆ

ಮುಖ್ಯಮಂತ್ರಿಗಳ ಪರಿಹಾರ ನಿಧಿಯು ಸರ್ಕಾರದ ಆದೇಶ ಸಂಖ್ಯೆ ಎಫ್.ಡಿ. 103 ಎ.ಸಿ.ಪಿ 58ರಂತೆ ದಿನಾಂಕ: 3ನೇ ಡಿಸೆಂಬರ್ 1958ರಂತೆ ಸ್ಥಾಪಿತಗೊಂಡಿದ್ದು, ನಿಯಮಗಳು ಸರ್ಕಾರದ ಆದೇಶ ಸಂಖ್ಯೆ: ಎಫ್.ಡಿ. 35 ಬಿ.ಎಂ.ಎಸ್. 78 ದಿನಾಂಕ: 12ನೇ ಸೆಪ್ಟಂಬರ್ 1978 ರಂದು ರಚನೆಗೊಂಡಿರುತ್ತದೆ.


ಮುಖ್ಯಮಂತ್ರಿಗಳಿಗೆ ಪ್ರದತ್ತವಾಗಿರುವ ವಿವೇಚನ ಅಧಿಕಾರದಂತೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಮಂಜೂರು ಮಾಡಲಾಗುತ್ತಿದೆ.


ಸಾರ್ವಜನಿಕರು, ಸಂಘ-ಸಂಸ್ಥೆಗಳು, ನಿಗಮ-ಮಂಡಳಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಸುವ ದೇಣಿಗೆಯ ಮೊತ್ತವೇ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಆದಾಯ ಮೂಲವಾಗಿದ್ದು, ಸರ್ಕಾರದ ವಾರ್ಷಿಕ ಆಯ-ವ್ಯಯದಲ್ಲಿ ಯಾವುದೇ ಅನುದಾನವು ನಿಗಧಿಯಾಗಿರುವುದಿಲ್ಲ ಈ ರೀತಿ ಸಲ್ಲಿಕೆಯಾಗುವ ದೇಣಿಗೆಯ ಮೊತ್ತಕ್ಕೆ ಆದಾಯ ತೆರಿಗೆ ಇಲಾಖೆಯ ವತಿಯಿಂದ ಶೇ 100ರಷ್ಟು ತೆರಿಗೆ ವಿನಾಯಿತಿ ಲಭ್ಯವಿರುತ್ತದೆ.


ಪ್ರಸ್ತುತ ಈ ಕೆಳಕಂಡ ಪ್ರಕರಣಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಹಾರ ಬಿಡುಗಡೆ ಮಾಡಲಾಗುತ್ತಿದೆ.

ಕಡುಬಡತನದಲ್ಲಿ ಜೀವನ ಮಾಡುತ್ತಿರುವವರಿಗೆ
ಬಡ ಜನರ ಮಾರಣಾಂತಿಕ ಕಾಯಿಲೆಗಳ ಚಿಕಿತ್ಸೆಗಾಗಿ
ನಿರುದ್ಯೋಗಿಗಳಿಗೆ, ದಿವ್ಯಾಂಗರಿಗೆ,ಕುಟುಂಬದ ದುಡಿಯುವ ವ್ಯಕ್ತಿಯು ಅಪಘಾತದಲ್ಲಿ ಆಕಾಲಿಕ ಮರಣ ಹೊಂದಿದಲ್ಲಿ ನಿರ್ಗತಿಕರಾಗುವ ಕುಟುಂಬದವರಿಗೆ. ಆಕಸ್ಮಿಕ ದರ್ಘಟನೆಗಳಿಗೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿಗಳು, ಪ್ರದತ್ತವಾಗಿರುವ ವಿವೇಚನಾನುಸಾರ ಘೋಷಿಸುವ ಪರಿಹಾರದ ಮೊತ್ತವನ್ನು ನೊಂದ ಕುಟುಂಬದವರಿಗೆ ವಿತರಿಸಲಾಗುತ್ತಿದೆ
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಡ, ನಿರ್ಗತಿಕ ಜನರ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕಾಗಿ ಬಹುಪಾಲು ಪರಿಹಾರ ಒದಗಿಸಲು ನಿಯಮಾನುಸಾರ ಕ್ರಮಕೈಗೊಳ್ಳಲಾಗುತ್ತಿದೆ.

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಾರ್ವಜನಿಕರು ಸಂಘ-ಸಂಸ್ಥೆಗಳು, ನಿಗಮ-ಮಂಡಳಿಗಳು ನೀಡುವ ದೇಣಿಗೆಯ ಮೊತ್ತದಿಂದ ಪರಿಹಾರದ ಕಾರ್ಯಗಳನ್ನು ನಿರ್ವಹಿಸಬೇಕಾಗಿರುತ್ತದೆ.

ಈ ರೀತಿ ಸಾರ್ವಜನಿಕರು ನೀಡುವ ದಾನದ ಮೊತ್ತದಲ್ಲಿ ದುರುಪಯೋಗ ಆಗದಂತೆ ತಡೆಯಲು ಕೆಲವೊಂದು ಷರತ್ತು ಬದ್ಧ ಕ್ರಮಗಳನ್ನು ಅನುಸರಿಸುವುದು ಅನಿವಾರ್ಯವಾಗಿರುತ್ತದೆ.

ಅಂತಹ ಷರತ್ತುಗಳು ಈ ಕೆಳಕಂಡಂತೆ ಇರುತ್ತವೆ.

ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳೆಂದು ಗುರುತಿಸಲು ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರುವ ವ್ಯಕ್ತಿಗಳ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುತ್ತಿದೆ.


ಅರ್ಜಿದಾರರು ಚಿಕಿತ್ಸೆ ಪಡೆದಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಹಾಗೂ ಇತರೇ ಯೋಜನೆಗಳಲ್ಲಿ ಸೌಲಭ್ಯವನ್ನು ಪಡೆದು ಮತ್ತೊಮ್ಮೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲು ಅತಿಯಾಸೆಯಿಂದ ಸೌಲಭ್ಯ ಪಡೆಯಲು ಯತ್ನಿಸುವ ಪ್ರಕರಣಗಳನ್ನು ತಡೆಗಟ್ಟಲು ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಅಂತಿಮ ಮೂಲ ಬಿಲ್ಲುಗಳನ್ನು ಹಾಗೂ ಬಿಡುಗಡೆ ಸಾರಾಂಶ ಪತ್ರವನ್ನು ಪಡೆಯಲಾಗುತ್ತಿದೆ.

👉 ಚಿಕಿತ್ಸೆ ಪಡೆಯಬೇಕಾದಲ್ಲಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಅಂದಾಜು ಪಟ್ಟಿಯನ್ನು ಪಡೆಯಲಾಗುತ್ತಿದೆ.


👉ಇನ್ನಿತರೇ ದುರ್ಘಟನೆಗಳಿಗೆ ಸಂಬಂಧಿಸಿದಂತೆ ಅಥವಾ ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿಲ್ಲದ ಬಡ ಜನರ ಮಾರಣಾಂತಿಕ ಕಾಯಿಲೆಯ ಚಿಕಿತ್ಸಾ ವೆಚ್ಚಕ್ಕೆ ಪರಿಹಾರ ಒದಗಿಸಲು ನಿಯಮವನ್ನು ರೂಪಿಸಲಾಗಿದ್ದು, ಅರ್ಜಿದಾರರ ಆರ್ಥಿಕ ಸ್ಥಿತಿಯ ಬಗ್ಗೆ ಹಾಗೂ ಅವರು ಅನುಭವಿಸುತ್ತಿರುವ ಯಾತನೆಯ ಬಗ್ಗೆ ಸಂಬಂಧಿಸಿದ ಜಿಲ್ಲಾಧಿಕಾರಿಗಳು ನಿಗಧಿತ ದಾಖಲೆಗಳೊಂದಿಗೆ ವರದಿ ಸಲ್ಲಿಸಿದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಕಡತ ಸಲ್ಲಿಸಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.


👉ಮುಖ್ಯಮಂತ್ರಿಗಳ ಪರಿಹಾರ ನಿಧಿಗಾಗಿ ಸಾಮಾನ್ಯ ಜನರು ಅರ್ಜಿ ಸಲ್ಲಿಸಿ ಅರ್ಜಿಯ ಸ್ಥಿತಿಗತಿಯನ್ನು ತಿಳಿಯಲು ಹಾಗೂ ಅರ್ಹ ಅರ್ಜಿದಾರರಿಗೆ ಶೀಘ್ರಗತಿಯಲ್ಲಿ ಪರಿಹಾರವನ್ನು ಒದಗಿಸಲು ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ವಿದ್ಯುನ್ಮಾನದ ತಂತ್ರಾಂಶದ ಮೂಲಕ ನಿರ್ವಹಿಸಲಾಗುತ್ತಿದೆ.

ಅರ್ಜಿಯ ವಿಲೇವಾರಿಯ ಹಂತಗಳ ಮಾಹಿತಿಯನ್ನು ಅರ್ಜಿದಾರರ ಮೊಬೈಲ್ ಸಂಖ್ಯೆಗೆ ರವಾನಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.


👉ಮುಖ್ಯಮಂತ್ರಿಗಳ ಪರಿಹಾರ ನಿಧಿಯು ಸರ್ಕಾರದ ನಂಬಿಕಸ್ಥ ಶಾಖೆಯಾಗಿದ್ದು, ನೈಸರ್ಗಿಕ ಪ್ರಕೃತಿ ವಿಕೋಪಗಳಾದಂತಹ ಸಂದರ್ಭಗಳಲ್ಲಿ ನೊಂದ ಸಂತ್ರಸ್ತರಿಗೆ ಹಾಗೂ ಹಾನಿಗೊಳಗಾದ ಪ್ರದೇಶಗಳ ಅಭಿವೃದ್ಧಿಗಾಗಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಸ್ವಇಚ್ಚೆಯಿಂದ ನೀಡುವ ದೇಣಿಗೆಯನ್ನು ಸಂಗ್ರಹಿಸಿ ತುರ್ತು ಅಗತ್ಯ ಯೋಜನೆಗಳಿಗೆ ಹಣಕಾಸಿನ ವ್ಯವಸ್ಥೆಯನ್ನು ಕಲ್ಪಿಸಲು ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿ ಒಂದು ಸೂಕ್ತ ವೇದಿಕೆಯಾಗಿದೆ.

👉ಇನ್ನೂ ಈಗ ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಆನ್ ಲೈನ್ ಮೂಲಕವೂ ಅರ್ಜಿಯನ್ನು ಸಲ್ಲಿಸಿ, ಆರ್ಥಿಕ ನೆರವು ಪಡೆಯಬಹುದಾಗಿದೆ. ಪರಿಹಾರ ಕೋರಿ ಅರ್ಜಿಯನ್ನು ಚಿಕಿತ್ಸೆಗೆ ಮುನ್ನ ಹಾಗೂ ಚಿಕಿತ್ಸೆಯ ನಂತ್ರವೂ ಸಲ್ಲಿಸಬಹುದಾಗಿದೆ.

👉ಆದರೇ ಅದಕ್ಕೆ ಕೆಲ ಕಡ್ಡಾಯ ದಾಖಲೆಗಳನ್ನು ಸಲ್ಲಿಸುವುದು ಅತ್ಯಗತ್ಯವಾಗಿದೆ.

👉ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಚಿಕಿತ್ಸೆಗೆ ಮುನ್ನಾ ಅರ್ಜಿ ಸಲ್ಲಿಕೆಯ ಸೂಚನೆಗಳು

👉ಬಿ.ಪಿ.ಎಲ್ ಪಡಿತರ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು.


👉ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಸದರಿ ಖಾತೆ ಆಧಾರ್ ಗುರುತಿನ ಚೀಟಿಯೊಂದಿಗೆ ಜೊಡಣೆಯಾಗಿದ್ದು, ಆನ್ ಲೈನ್ ಮೂಲಕ ಹಣ ಸ್ವೀಕರಿಸುವ ವ್ಯವಸ್ಥೆಯನ್ನು ಹೊಂದಿರಬೇಕು.


ಆಧಾರ್ ಗುರುತಿನ ಚೀಟಿ ಹೊಂದಿರಬೇಕು.

👉 ಆಧಾರ್ ಗುರುತಿನ ಚೀಟಿಯಲ್ಲಿನ ಮಾಹಿತಿಯಂತೆ ಅರ್ಜಿದಾರರ ಹೆಸರು, ತಂದೆ/ಗಂಡನ ಹೆಸರು, ಜನ್ಮ ದಿನಾಂಕ, ವಯಸ್ಸು, ಲಿಂಗ, ವಿಳಾಸವನ್ನು ಪರಿಗಣಿಸಲಾಗುವುದು.


👉ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯೊಂದನ್ನು ಮುಂದಿನ ಸಂವಹನಕ್ಕಾಗಿ ಒದಗಿಸುವುದು.


👉ಚಿಕಿತ್ಸೆಪಡೆಯಬೇಕಾದಲ್ಲಿ ಆಸ್ಪತ್ರೆಯವರು ನೀಡಿರುವ ಚಿಕಿತ್ಸಾ ವೆಚ್ಚದ ಮೂಲ ಅಂದಾಜು ಪಟ್ಟಿ ಹೊಂದಿರಬೇಕು.


👉ಚಿಕಿತ್ಸಾ ವೆಚ್ಚದ ಮೂಲ ಅಂದಾಜು ಪಟ್ಟಿ ಅರ್ಜಿ ಸಲ್ಲಿಸುವ ದಿನಾಂಕದಿಂದ 40 ದಿನಗಳೊಳಗೆ ಇರಬೇಕು.


👉ಆಸ್ಪತ್ರೆಯವರ ಅಧಿಕೃತ ಇ-ಮೇಲ್ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಪಡೆದಿರಬೇಕು.


👉ಯಾವುದೇ ವಿಮಾ ಹಾಗೂ ಸರ್ಕಾರಿ/ಸರ್ಕಾರಿಯೇತರ/ದಾನಿಗಳಿಂದ ಯೋಜನೆ ಸೌಲಭ್ಯ ಅಥವಾ ಧನ ಸಹಾಯ ಪಡೆದಿರಬಾರದು.


👉ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಮ್ಮೆ ಮಾತ್ರ ಪರಿಹಾರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸುವ ಮುನ್ನ ಚಿಕಿತ್ಸೆ ಪಡೆದ ವ್ಯಕ್ತಿಯು ಜೀವಂತವಾಗಿರಬೇಕು.


👉ಅಪಘಾತ ಅಥವಾ ಇನ್ನಿತರೆ ಚಿಕಿತ್ಸೆ ಪಡೆದಿರುವ ಬಗ್ಗೆ (ಆರ್.ಟಿ.ಎ) ರೋಡ್ ಟ್ರಾಫಿಕ್ ಆಕ್ಸಿಡೆಂಟ್, (ಎಂ.ಎಲ್.ಸಿ ) ಮೆಡಿಕೋ ಲೀಗಲ್ ಕೇಸ್, ನ್ಯಾಯಲಯದಲ್ಲಿ ಮೊಕದ್ದಮೆ ದಾಖಲಾಗಿರ ಬಾರದು.


ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಚಿಕಿತ್ಸೆಗೆ ಮುನ್ನಾ ಈ ಕೆಳಕಂಡ ದಾಖಲೆಗಳು ಕಡ್ಡಾಯ

……….ಗುರುತಿನ ದಾಖಲೆ………..


👉ವಿಳಾಸದ ಬಗ್ಗೆ ದೃಢೀಕೃತ ದಾಖಲೆ
👉ಭಾವ ಚಿತ್ರ (35*45) (ಪಾಸ್ ಪೊರ್ಟ್ ಅಳತೆ)
👉ಅರ್ಜಿದಾರರ ಹೆಸರುಳ್ಳ ಬಿ.ಪಿ.ಎಲ್ ಪಡಿತರ ಚೀಟಿ.       👉ಮುಂದಿನ ಹಾಗೂ ಹಿಂದಿನ ಭಾಗ
👉ಆಸ್ಪತ್ರೆಯ ಚಿಕಿತ್ಸಾವೆಚ್ಚದ ಅಂದಾಜು ಪಟ್ಟಿ
👉ಶಿಫಾರಸ್ಸು ಪತ್ರ (ಲಭ್ಯವಿದಲ್ಲಿ)
👉ಪರಿಹಾರ ಕೋರಿ ಅರ್ಜಿ ಸಲ್ಲಿಕೆಸಲು ಚಿಕಿತ್ಸೆಯ ನಂತ್ರದ ಸೂಚನೆಗಳು

👉ಬಿ.ಪಿ.ಎಲ್ ಪಡಿತರ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು.


👉ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯೊಂದನ್ನು ಮುಂದಿನ ಸಂವಹನಕ್ಕಾಗಿ ಒದಗಿಸುವುದು.


👉ಚಕಿತ್ಸೆ ಪಡೆದಿದ್ದಲ್ಲಿ ಆಸ್ಪತ್ರೆ ಅಂತಿಮ ಮೂಲ ಬಿಲ್ಲುಗಳನ್ನು ಹೊಂದಿರಬೇಕು.


👉ಸದರಿ ಬಿಲ್ಲುಗಳು ಅರ್ಜಿ ಸಲ್ಲಿಸುವ ದಿನಾಂಕದಿಂದ ಒಂದು ವರ್ಷದೊಳಗೆ ಇರಬೇಕು.


👉ಆಸ್ಪತ್ರೆಯ ಮೂಲ ಬಿಲ್ಲುಗಳನ್ನು ಚಿಕಿತ್ಸೆ ನೀಡಿರುವ ವೈದ್ಯರು ಸಹಿ ಮತ್ತು ಮೊಹರಿನೊಂದಿಗೆ ದೃಢೀಕರಿಸಿರಬೇಕು.
ಔಷದಾಲಯದ (ಮೆಡಿಕಲ್ ಸ್ಟೋರ್) ಬಿಲ್ಲುಗಳನ್ನು ಪರಿಗಣಿಸಲಾಗುವುದಿಲ್ಲ.

👉ಲ್ಯಾಬ್ ಬಿಲ್ಲುಗಳನ್ನು ಹಾಗೂ ಅಧಿಕ ವೆಚ್ಚದ ಔಷದಿಯನ್ನು ಖರೀದಿಸಿರುವ ಬಗ್ಗೆ ಬಿಲ್ಲುಗಳನ್ನು ಚಿಕಿತ್ಸೆ ನೀಡಿರುವ ವೈದ್ಯರು ಸಹಿ ಮತ್ತು ಮೊಹರಿನೊಂದಿಗೆ ದೃಢೀಕರಿಸಿರಬೇಕು.


👉ಬಿಡುಗಡೆ ಸಾರಾಂಶ ಪತ್ರವನ್ನು ಚಿಕಿತ್ಸೆ ಪಡೆದ ಆಸ್ಪತ್ರೆಯಿಂದ ಪಡೆದಿರಬೇಕು. ಚಿಕಿತ್ಸೆ ನೀಡಿರುವ ವೈದ್ಯರು ಸಹಿ ಮತ್ತು ಮೊಹರಿನೊಂದಿಗೆ ದೃಢೀಕರಿಸಿರಬೇಕು.

👉ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್ (ಕೀಮೊ ಥೆರಫಿ) ಮತ್ತು ಕಿಡ್ನಿ (ಡಯಾಲಿಸಿಸ್) ಸಮಸ್ಯೆಗೆ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುವ ಬಗ್ಗೆ ವೈದ್ಯರು ದೃಢೀಕರಿಸಿರುವ ಪತ್ರವಿದ್ದಲ್ಲಿ ಪರಿಗಣಿಸಲಾಗುವುದು.


👉ಚಿಕಿತ್ಸೆಪಡೆಯಬೇಕಾದಲ್ಲಿ ಆಸ್ಪತ್ರೆಯವರು ನೀಡಿರುವ ಚಿಕಿತ್ಸಾ ವೆಚ್ಚದ ಮೂಲ ಅಂದಾಜು ಪಟ್ಟಿ ಹೊಂದಿರಬೇಕು.
ಆಸ್ಪತ್ರೆಯವರ ಅಧಿಕೃತ ಇ-ಮೇಲ್ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಪಡೆದಿರಬೇಕು.


ಅರ್ಜಿ ಸಲ್ಲಿಸುವ ಮುನ್ನ ಚಿಕಿತ್ಸೆ ಪಡೆದ ವ್ಯಕ್ತಿಯು ಜೀವಂತವಾಗಿರಬೇಕು.


👉16) ಅಪಘಾತ ಅಥವಾ ಇನ್ನಿತರೆ ಚಿಕಿತ್ಸೆ ಪಡೆದಿರುವ ಬಗ್ಗೆ (ಆರ್.ಟಿ.ಎ) ರೋಡ್ ಟ್ರಾಫಿಕ್ ಆಕ್ಸಿಡೆಂಟ್, (ಎಂ.ಎಲ್.ಸಿ ) ಮೆಡಿಕೋ ಲೀಗಲ್ ಕೇಸ್, ನ್ಯಾಯಲಯದಲ್ಲಿ ಮೊಕದ್ದಮೆ ದಾಖಲಾಗಿರ ಬಾರದು.


ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಚಿಕಿತ್ಸೆ ನಂತ್ರ ಈ ಕೆಳಕಂಡ ದಾಖಲೆಗಳು ಕಡ್ಡಾಯ

👉ಗುರುತಿನ ದಾಖಲೆ
👉ವಿಳಾಸದ ಬಗ್ಗೆ ದೃಢೀಕೃತ ದಾಖಲೆ
👉ಭಾವ ಚಿತ್ರ (35*45) (ಪಾಸ್ ಪೊರ್ಟ್ ಅಳತೆ)
👉ಅರ್ಜಿದಾರರ ಹೆಸರುಳ್ಳ ಬಿ.ಪಿ.ಎಲ್ ಪಡಿತರ ಚೀಟಿ        👉ಮುಂದಿನ ಹಾಗೂ ಹಿಂದಿನ ಭಾಗ
👉ಬಿಡುಗಡೆ ಸಾರಾಂಶ ಪತ್ರ
👉ಆಸ್ಪತ್ರೆಯ ಅಂತಿಮ ಬಿಲ್ಲು
👉ಶಿಫಾರಸ್ಸು ಪತ್ರ (ಲಭ್ಯವಿದಲ್ಲಿ)
👉ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಹೇಗೆ.?



– ಮೊದಲು https://cmrf.karnataka.gov.in/intranet/Home_Kann.aspx ಈ ಮುಖಪುಟದಲ್ಲಿನ ಮಾಹಿತಿಯನ್ನು ಓದಿಕೊಳ್ಳಬೇಕು.

-https://sevasindhuservices.karnataka.gov.in/ ಗೆ ಭೇಟಿ ನೀಡಬೇಕು.

-ಸೇವಾಸಿಂಧು ಪೋರ್ಟಲ್ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನೀಡಿ ನೋಂದಾಯಿಸಿಕೊಳ್ಳಬೇಕು.

-ಆ ಬಳಿಕ ಮುಖ್ಯಮಂತ್ರಿ ಪರಿಹಾರ ನಿಧಿಯ ಅರ್ಜಿಯನ್ನು ಆಯ್ಕೆ ಮಾಡಿಕೊಂಡು ಚಿಕಿತ್ಸೆ, ಆರ್ಥಿಕ ನೆರವಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ವಿವರ

ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ ವಿಭಾಗ, # 242 / ಎ, 2 ನೇ ಮಹಡಿ, ವಿಧಾನ ಸೌಧ, ಬೆಂಗಳೂರು – 560001
cmr.karnataka.gov.in
080-2203 3950
080-2225 1792

-ಆ ನಂತ್ರ ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಲು https://cmrf.karnataka.gov.in/intranet/Tracker_Kann.aspx ಗೆ ಭೇಟಿ ನೀಡಿ. ಅರ್ಜಿಯ ಸಂಖ್ಯೆ ಹಾಗೂ ಅರ್ಜಿದಾರರ ಹೆಸರನ್ನು ನಮೂದಿಸಿದರೇ, ಅರ್ಜಿಯ ಸ್ಥಿತಿಯನ್ನು ತೋರಿಸ

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD