13/06/2025 12:12 PM

Translate Language

Home » ಲೈವ್ ನ್ಯೂಸ್ » `ಮುಂಬಡ್ತಿ ಮೀಸಲಾತಿ’ ರಾಜ್ಯ ಸರ್ಕಾರ ಆದೇಶ.!

`ಮುಂಬಡ್ತಿ ಮೀಸಲಾತಿ’ ರಾಜ್ಯ ಸರ್ಕಾರ ಆದೇಶ.!

Facebook
X
WhatsApp
Telegram

ಬೆಂಗಳೂರು.20.ಮೇ.25:- ರಾಜ್ಯದ ಅಂಗವೈಕಲ್ಯವುಳ್ಳ ಸರ್ಕಾರಿ ನೌಕರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಅಂಗವೈಕಲ್ಯ ಉಳ್ಳಂತ ಸರ್ಕಾರಿ ನೌಕರರಿಗೆ ಗ್ರೂಪ್-ಬಿ ಮತ್ತು ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದಗಳಿಗೆ ಮುಂಬಡ್ತಿ ನೀಡುವಲ್ಲಿ ಶೇ.4ರಷ್ಟು ಮೀಸಲಾತಿ ನಿಗದಿ ಪಡಿಸಿ ಆದೇಶಿಸಿದೆ.

ಈ ಬಗ್ಗೆ ರಾಜ್ಯ ಸರ್ಕಾರದಿಂದ ನಡವಳಿಯನ್ನು ಹೊರಡಿಸಿದ್ದು, ದಿನಾಂಕ:28.03.2023ರ ಸರ್ಕಾರಿ ಆದೇಶದಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಗ್ರೂಪ್-ಡಿ ಮತ್ತು ಗ್ರೂಪ್-ಸಿ ವೃಂದಗಳಿಗೆ ಸೇರಿದ ಹುದ್ದೆಗಳಿಗೆ ನೀಡುವ ಮುಂಬಡ್ತಿಯಲ್ಲಿ ಎದ್ದುಕಾಣುವ ಅಂಗವೈಕಲ್ಯವನ್ನುಳ್ಳ ಸರ್ಕಾರಿ ನೌಕರರಿಗೆ ಶೇಕಡ 4 ರಷ್ಟು ಮೀಸಲಾತಿ ಆಸ್ಪದವನ್ನು ಕಲ್ಪಿಸಲಾಗಿರುತ್ತದೆ.

ದಿನಾಂಕ:28.11.2023ರ ಸರ್ಕಾರಿ ಆದೇಶದ ಅನುಬಂಧ-2ರಲ್ಲಿ ಎದ್ದು ಕಾಣುವ ಅಂಗವೈಕಲ್ಯವನ್ನುಳ್ಳ ನೌಕರರಿಗೆ ಗ್ರೂಪ್ ಡಿ ಯಿಂದ ಗ್ರೂಪ್-ಸಿ ಮತ್ತು ಗ್ರೂಪ್ ಸಿ ಯಿಂದ ಗ್ರೂಪ್-ಸಿ ಹುದ್ದೆಗಳಿಗೆ ಮುಂಬಡ್ತಿ ನೀಡುವ ಸಂದರ್ಭದಲ್ಲಿ ನಿಗದಿಪಡಿಸಿರುವ 100 ಬಿಂದುಗಳ ರೋಸ್ಮರಿನಲ್ಲಿ 5, 30, 55, 82ನೇ ಬಿಂದುಗಳನ್ನು ಗುರುತಿಸಲಾಗಿದೆ.

ರಾಜ್ಯ ಸಿವಿಲ್ ಸೇವೆಗಳಲ್ಲಿನ ಗ್ರೂಪ್-ಡಿ ಯಿಂದ ಗ್ರೂಪ್-ಸಿ ಮತ್ತು ಗ್ರೂಪ್-ಸಿ ಯಿಂದ ಗ್ರೂಪ್-ಸಿ ವೃಂದಗಳಿಗೆ ಸೇರಿದ ಹುದ್ದೆಗಳಿಗೆ ನೀಡುವ ಮುಂಬಡ್ತಿಯಲ್ಲಿ ಎದ್ದುಕಾಣುವ ಅಂಗವೈಕಲ್ಯವನ್ನುಳ್ಳ ಸರ್ಕಾರಿ ನೌಕರರಿಗೆ ಕಲ್ಪಿಸಲಾಗಿರುವ ಶೇಕಡ 4 ರಷ್ಟು ಮೀಸಲಾತಿ ಆಸ್ಪದವನ್ನು ಗ್ರೂಪ್-ಸಿ ಯಿಂದ ಗ್ರೂಪ್-ಬಿ ಮತ್ತು ಗ್ರೂಪ್-ಬಿ ಯಿಂದ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದಗಳಿಗೆ ಸೇರಿದ ಎದ್ದು ಕಾಣುವ ಅಂಗಕಲ್ಯವನ್ನುಳ್ಳ ಸರ್ಕಾರಿ ನೌಕರರಿಗೂ ಸಹ ವಿಸ್ತರಿಸುವ ಬಗ್ಗೆ ಸರ್ಕಾರ ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ದಿನಾಂಕ:28.03.2023ರ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 121 ಸನನಿ 2020ರಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಗ್ರೂಪ್- ಡಿ ಯಿಂದ ಗ್ರೂಪ್-ಸಿ ಮತ್ತು ಗ್ರೂಪ್-ಸಿ ಯಿಂದ ಗ್ರೂಪ್-ಸಿ ವೃಂದಗಳಿಗೆ ಸೇರಿದ ಹುದ್ದೆಗಳಿಗೆ ನೀಡುವ ಮುಂಬಡ್ತಿಯಲ್ಲಿ ಎದ್ದುಕಾಣುವ ಅಂಗವೈಕಲ್ಯವನ್ನುಳ್ಳ ಸರ್ಕಾರಿ ನೌಕರರಿಗೆ ಕಲ್ಪಿಸಲಾಗಿರುವ ಶೇಕಡ 4 ರಷ್ಟು ಮೀಸಲಾತಿ ಆಸ್ಪದವನ್ನು ದಿನಾಂಕ:28.03.2023ರ ಆದೇಶದಲ್ಲಿನ ಎಲ್ಲಾ ಷರತ್ತು ಮತ್ತು ಉಪಬಂಧಗಳಲ್ಲಿ ಯಾವುದೇ ಬದಲಾವಣೆ ಇಲ್ಲದ (ಅನುಬಂಧವನ್ನು ಹೊರತುಪಡಿಸಿ) ಗ್ರೂಪ್-ಸಿ ಯಿಂದ ಗ್ರೂಪ್-ಬಿ ಮತ್ತು ಗ್ರೂಪ್-ಬಿ ಯಿಂದ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದದ ಹುದ್ದೆಗಳಿಗೂ ಸಹ ವಿಸ್ತರಿಸಿ ಆದೇಶಿಸಲಾಗಿದೆ.

ಈ ಆದೇಶವನ್ನು ಸಚಿವ ಸಂಪುಟ ಸಭೆಯ ಪ್ರಕರಣ ಸಂಖ್ಯೆ: 249/2025 ದಿನಾಂಕ 09-05-2025ರಲ್ಲಿ ನಿರ್ಣಯದಂತೆ ಹೊರಡಿಸಿದೆ ಎಂದಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!