ಬೆಂಗಳೂರು.04.ಜುಲೈ.25:- ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2023-24 ನೇ ಸಾಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚನ್ನಪಟ್ಟಣ, ರಾಮನಗರ ಜಿಲ್ಲೆ ಇಲ್ಲಿ ಅರ್ಧಶಾಸ್ತ್ರ ವಿಷಯದಲ್ಲಿ ಕರ್ತವ್ಯ ನಿರ್ವಹಿಸಿದ್ದು ಮಾನ್ಯ ನ್ಯಾಯಾಲಯದ ಮಧ್ಯಂತರ ಆದೇಶದಂತೆ ಕರ್ತವ್ಯದಿಂದ ಬಿಡುಗಡೆಗೊಳಿಸಬಾರದೆಂದು ಒಂದು ವೇಳೆ ನಾನು ಕರ್ತವ್ಯ ನಿರ್ವಹಿಸುತ್ತಿದ್ದ ಕಾಲೇಜಿನಲ್ಲಿ ಕಾರ್ಯಭಾರ ಲಭ್ಯವಿಲ್ಲದಿದ್ದಲ್ಲಿ ಸವಾ (Seniority) (Date of entry into Service) ಪರಿಗಣಿಸಿ ನನ್ನ ವಾಸಸ್ಥಳಕ್ಕೆ ಹತ್ತಿರವಿರುವ ಹಾಗೂ ಕಾರ್ಯಭಾರ ಲಭ್ಯವಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕರ್ತವ್ಯದಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸಿಕೊಡಬೇಕೆಂದು ಉಲ್ಲೇಖ 1ರ ತಮ್ಮ ವತ್ರದಲ್ಲಿ ಕೋರಿರುತ್ತೀರಿ. ಪರಿಶೀಲಿಸಲಾಗಿ, ದಿನಾಂಕ:10.08.2024 ರಂದು ಖಾಯಂ ಪ್ರಾಧ್ಯಾಪಕರು ಕಾಲೇಜಿನ ಕರ್ತವ್ಯಕ, ವರದಿ -30 23 0 0 2024-25 ಕಾರ್ಯಭಾರವಿಲ್ಲದ ಕಾರಣ ತಮ್ಮನ್ನು ಕಾಲೇಜಿನ ಕರ್ತವ್ಯಕ್ಕೆ ವರದಿಮಾಡಿಸಿಕೊಂಡಿರುವುದಿಲ್ಲ ಎಂಬುದಾಗಿ ಉಲ್ಲೇಖ-2 ರಲ್ಲಿ ಪ್ರಾಂಶುಪಾಲರು ತಿಳಿಸಿರುತ್ತಾರೆ.
ಮಾನ್ಯ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ:2610/20256 ನ್ಯಾಯಾಲಯವು ದಿನಾಂಕ:05.09.2024 ರಂದು ನೀಡಿರುವ ತೀರ್ಪಿನಲ್ಲಿ ಯು.ಜಿ.ಸಿ. ವಿದ್ಯಾರ್ಹತೆಯನ್ನು, ಹೊಂದಿರುವ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವಂತೆ ನಿರ್ದೇಶಿಸಲಾಗಿರುತ್ತದೆ. ಅಲ್ಲದೆ, ದಿನಾಂಕ:14.012022 ರ ಸರ್ಕಾರದ ಆದೇಶದಲ್ಲಿ ಯು.ಜಿ.ಸಿ. ನಿಗಧಿವಡಿಸಿದ ವಿದ್ಯಾರ್ಹತೆ ಹೊಂದಿಲ್ಲದ ಅತಿಥಿ ಉಪನ್ಯಾಸಕರಿಗೆ ನಿಗಧಿತ ವಿದ್ಯಾರ್ಹತೆಯನ್ನು ಹೊಂದಲು 3 ವರ್ಷಗಳ ಕಾಲಾವಧಿ ನೀಡುವುದು.
3 ವರ್ಷದ ನಂತರ ಯು.ಜಿ.ಸಿ. ನಿಗಧಿವಡಿಸಿದ ವಿದ್ಯಾರ್ಹತೆ ಹೊಂದಿಲ್ಲದ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು ಎಂಬುದಾಗಿ ಸೂಚಿಸಿರುವ ಹಿನ್ನೆಲೆಯಲ್ಲಿ ಪ್ರಸ್ತುತ 2024-25 ನೇ ಸಾಲಿಗೆ ಯು.ಜಿ.ಸಿ. ವಿದ್ಯಾರ್ಹತೆಯನ್ನು ಹೊಂದಿರುವ ಅತಿಥಿ ಉಪನ್ಯಾಸಕರನ್ನು ಆನ್-ಲೈನ್ ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು ತಾವು ಯು.ಜಿ.ಸಿ. ವಿದ್ಯಾರ್ಹತೆಯನ್ನು ಹೊಂದದೆ ಇರುವುದರಿಂದ ಕಾರ್ಯಭಾರ ಲಭ್ಯವಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕರ್ತವ್ಯದಲ್ಲಿ ಮುಂದುವರಿಸಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ ಎಂಬ ಮಾಹಿತಿಯನ್ನು ಈ ಮೂಲಕ ತಿಳಿಸಲಾಗಿದೆ.
