03/08/2025 3:23 PM

Translate Language

Home » ಲೈವ್ ನ್ಯೂಸ್ » ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು – ಸಬ್ ಇನ್ಸ್ಪೆಕ್ಟರ್ ಆಕಾಶ್.

ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು – ಸಬ್ ಇನ್ಸ್ಪೆಕ್ಟರ್ ಆಕಾಶ್.

Facebook
X
WhatsApp
Telegram

ಚಾಮರಾಜನಗರ .25.ಜುಲೈ.25:- ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದ ಸರಕಾರಿ ಪ್ರೌಢಶಾಲೆಗೆ ಯಳಂದೂರು ಪೋಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಕಾಶ್ ರವರು ಭೇಟಿ ನೀಡಿ  ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳು, ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಸಂಚಾರ ನಿಯಮಗಳ ಹಾಗೂ ಸೈಬರ್  ಸಹಾಯವಾಣಿ 1930, 112  ಮೂಲಕ ವಿದ್ಯಾರ್ಥಿಗಳಿಗೆ    ಅರಿವು ಮೂಡಿಸಿದರು.

ವಿದ್ಯಾರ್ಥಿಗಳು ಈ ದೇಶದ ಆಸ್ತಿ ಇವರ ಸಂರಕ್ಷಣೆ ನಮ್ಮೇಲ್ಲರ ಜವಾಬ್ದಾರಿಯಾಗಿದೆ.

ಈ ದೇಶದ ಯುವ ಶಕ್ತಿಗಳು ಉತ್ತಮ ಮಾರ್ಗದಲ್ಲಿ ನಡೆದರೆ ಈ ದೇಶ ಪ್ರಬುದ್ಧ ಭಾರತವಾಗುತ್ತದೆ. ಆದರೆ ಇಂದು ಯುವಕರು, ಬಾಲಕಿಯರು ಮಾದಕ ವ್ಯಸನಕ್ಕೆ ತುತ್ತಾಗಿದ್ದಾರೆ ಇದರಿಂದ ಅವರ ಜೀವನ ಸರ್ವನಾಶವಾಗುತ್ತದೆ ಇದರಿಂದ  ಹೊರ ಬರಬೇಕಾದರೆ ಅರಿವು ಅಗತ್ಯವಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಕೂಡ ಬಾಲ್ಯ ವಿವಾಹ ನಡೆಯುತ್ತದೆ ಇದು ಕಾನೂನಿಗೆ ವಿರೋಧವಾಗಿದೆ ಇದರ ಬಗ್ಗೆ ಮಾಹಿತಿಗಳಿದ್ದರೆ ತಿಳಿಸಿ. ಬಾಲ್ಯ ವಿವಾಹದಿಂದ ಬಾಲೆಯರ ಜೀವನ ನಾಶವಾಗುತ್ತದೆ. ಬಾಲ್ಯ ವಿವಾಹ ಮಾಡಿದರೆ ಮದುವೆ ಗಂಡು, ಪೋಷಕರು, ಕಲ್ಯಾಣ ಮಂಟಪಗಳ ಮೇಲೆ ಪ್ರಕರಣಗಳು ದಾಖಲಾಗುತ್ತದೆ.

ಶಾಲಾ‌ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಮೋಟರ್ ವಾಹನಗಳು ಬಳಸಬಾರದು.

18 ವರ್ಷ ದಾಟಿದರೆ ಮಾತ್ರ ವಾಹನಗಳನ್ನು ಚಲಾಯಿಸಬೇಕು ಹಾಗೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಏಕೆಂದರೆ ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಯುವಕರು ಅಪಘಾತದಲ್ಲಿ ಸಾವನಪ್ಪಿದ್ದಾರೆ.

ಕಡಿಮೆಯಾಗಬೇಕಾದರೆ  ರಸ್ತೆ ನಿಯಮಗಳನ್ನು ಪಾಲಿಸಬೇಕು ಎಂದರು.

ಹಾಗೂ ಇನ್ನೂ ಅನೇಕ ವಿಷಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ನಾಗಣ್ಣ, ಶಿಕ್ಷಕರಾದ ಶಿವಕುಮಾರ್, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವರದಿ.ಪ್ರಸನ್ನಕುಮಾರ್ ಕೆಸ್ತೂರು

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!