ಬೀದರ, 04ಡಿಸೆಂಬರ್24:- ಬಸವಕಲ್ಯಾಣ ತಾಲ್ಲೂಕಿನ ಜೆ.ಪಿ.ಕಾಲೋನಿ ರಾಜೇಶ್ವರ ನಿವಾಸಿಯಾದ ಪ್ರತಿಭಾ ಗಂಡ ರಾಜಕುಮಾರ ಮಾರೆನವರ (ವಯಸ್ಸು 28 ವರ್ಷ) ಇವರು ದಿನಾಂಕ: 28-11-2024 ರಂದು ಮನೆಯಿಂದ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೋಗಿ ಕಾಣೆಯಾಗಿರುತ್ತಾಳೆ.
ಕಾಣೆಯಾದ ಮಹಿಳೆಯು 5 ಫೀಟ್ 1 ಇಂಚ್ ಎತ್ತರ ಇದ್ದು, ದುಂಡು ಮುಖ, ಕಪ್ಪು ಮೈಬಣ್ಣ ಹೊಂದಿದ್ದು, ಮೈಮೇಲೆ ಸ್ಕೆöÊ ಬ್ಲೂ ಟಾಪ್, ಬಿಳಿ ಬಣ್ಣದ ಪ್ಯಾಂಟ ಧರಿಸಿರುವ ಇವರು ಕನ್ನಡ ಭಾಷೆಯಲ್ಲಿ ಮಾತನಾಡುತ್ತಾಳೆ.
ಈ ಕಾಣೆಯಾದ ಮಹಿಳೆಯ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಲ್ಲಿ ಡೆಪ್ಯೂಟಿ ಸೂಪರಡೆಂಟ್ ಆಫ್ ಪೊಲೀಸ್ ಹುಮನಾಬಾದ ಮೊಬೈಲ್ ಸಂಖ್ಯೆ: 9480803422, ಸರ್ಕಲ್ ಪೊಲೀಸ್ ಇನ್ಸಪೇಕ್ಟರ ಮಂಠಾಳ ಸರ್ಕಲ್ ಮೊಬೈಲ್ ಸಂಖ್ಯೆ: 9480803438, ಪಿ.ಎಸ್.ಐ. ಬಸವಕಲ್ಯಾಣ ರೂರಲ್ ಪೊಲೀಸ್ ಸ್ಟೇಷನ ಮೊಬೈಲ್ ಸಂಖ್ಯೆ: 94808034360, 08481-252333 ಗೆ ಸಂಪರ್ಕಿಸುವAತೆ ಬಸವಕಲ್ಯಾಣ ಗ್ರಾಮೀಣ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.