ಬೀದರ.25.ಜುಲೈ.25:- ಬೀದರನ ದೀನ ದಯಾಳ ನಗರದ ನಿವಾಸಿಯಾದ ಶಿವಾನಿ ದಿಲೀಪ (19) ಇವರು ದಿನಾಂಕ: 10-07-2025 ರಂದು ಮನೆಯಿಂದ ಹೊರಗಡೆ ಹೋಗಿ ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ.
ಕಾಣೆಯಾದ ಮಹಿಳೆಯು ತೆಳ್ಳನೆ ಮುಖಾ ಕಪ್ಪು ಗೋಧಿ ಬಣ್ಣ ಹಲ್ಲುಗಳು ಸ್ವಲ್ಪ ಮುಂದೆ ಇರುತ್ತವೆ. ತಲೆಯಲ್ಲಿ ಕೂದಲು ಸಣ್ಣಗಾಗಿರುವ ಇವಳು ಮರಾಠಿ ಹಾಗೂ ಹಿಂದಿ ಭಾಷೆಯಲ್ಲಿ ಮಾತನಾಡುತ್ತಾಳೆ. ಕಾಣೆಯಾದ ಸಮಯದಲ್ಲಿ ಮೈಮೇಲೆ ಆರೆಂಜ ಕಲರ ಚೂಡಿದಾರ ಪೈಜಾಮ ಧರಿಸಿರುತ್ತಾಳೆ.
ಈ ಕಾಣೆಯಾದ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಬೀದರ ಕಂಟ್ರೋಲ್ ರೂಂ. 9480803400, ಬೀದರ ಪೊಲೀಸ್ ಉಪಾಧೀಕ್ಷಕರ ಮೊಬೈಲ್ ಸಂಖ್ಯೆ: 08482-226705, ಬೀದರ ಮಾರ್ಕೆಟ ವೃತ್ತದ ಪೊಲೀಸ್ ನಿರೀಕ್ಷಕರ ಮೊಬೈಲ್ ಸಂಖ್ಯೆ: 9480803431, ಬೀದರ ಮಾರ್ಕೆಟ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08482-226709, 9480803447 ಗೆ ಸಂಪರ್ಕಿಸಬಹುದಾಗಿದೆ ಎಂದು ಬೀದರ ಮಾರ್ಕೆಟ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸಪೇಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.