ಬೀದರ, ನವೆಂಬರ್.20 :- ಜಿಲ್ಲೆಯ ಚಿಟ್ಟಗುಪ್ಪಾ ತಾಲ್ಲೂಕಿನ ಅಲಿಪೂರ ತಾಂಡಾದ ನಿವಾಸಿಯಾದ ಪಲ್ಲವಿ ತಂದೆ ವಿಜಯಕುಮಾರ ಚವ್ಹಾಣ (17 ವರ್ಷ) ಇವರು ದಿನಾಂಕ: 14-11-2024 ರಂದು ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿರುತ್ತಾರೆ.
ಕಾಣೆಯಾದ ಮಹಿಳೆ 4 ಫೀಟ್ 6 ಇಂಚ್ ಎತ್ತರ ಇದ್ದು, ದುಂಡು ಮುಖ, ಸದೃಢ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಮೈಮೇಲೆ ಒಂದು ಕೆಂಪು ಬಣ್ಣದ ಟಾಪ ಮತ್ತು ಒಂದು ಕರಿ ಬಣ್ಣದ ಲಗಿನ್ಸ್ ಧರಿಸಿರುವ ಇವಳು ಕನ್ನಡ, ಲಂಬಾಣಿ ಹಾಗೂ ಹಿಂದೆ ಭಾಷೆಯಲ್ಲಿ ಮಾತನಾಡುತ್ತಾಳೆ.
ಈ ಕಾಣೆಯಾದ ಮಹಿಳೆ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಲ್ಲಿ ಬೀದರ ಪೊಲೀಸ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ (08482-226704), ಪೊಲೀಸ ನೀರಿಕ್ಷಕರು ಚಿಟಗುಪ್ಪಾ ವೃತ್ತ ಮೊಬೈಲ್ ಸಂಖ್ಯೆ (9480803434), ಪೊಲೀಸ ಉಪನಿರೀಕ್ಷಕರು ಬೇಮಳಖೇಡಾ ಠಾಣೆಯ ಮೊಬೈಲ್ ಸಂಖ್ಯೆ (9480803454), ಬೇಮಳಖೇಡಾ ಪೊಲೀಸ ಠಾಣೆ ದೂರವಾಣಿ ಸಂಖ್ಯೆ (08482-200449) ಗೆ ಸಂಪರ್ಕಿಸಬಹುದಾಗಿದೆ ಎಂದು ಬೇಮಳಖೇಡಾ ಪೊಲೀಸ್ ಠಾಣೆಯ ಎಸ್.ಹೆಚ್.ಓ. ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ
