|

‘ಮಳೆಹಾನಿ’ ಸಂತ್ರಸ್ತರಿಗೆ ಪರಿಹಾರ ಹಣ ಮಂಜೂರು ಮಾಡಿ ಸರ್ಕಾರದಿಂದ  ಆದೇಶ.!

ಬೆಂಗಳೂರು.18.ಜೂನ್.25:- ರಾಜ್ಯದಲ್ಲಿ 2025-26 ನೇ ಸಾಲಿನಲ್ಲಿ ದಿನಾಂಕ: 01.04.2025 ರಿಂದ 31.05.2025 ರ ಅವಧಿಯಲ್ಲಿ ಅತಿವೃಷ್ಟಿ / ಪ್ರವಾಹದಿಂದ ಹಾನಿಯಾಗಿರುವ ಮನೆಗಳ ಪುನರ್ ನಿರ್ಮಾಣ / ದುರಸ್ತಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ ಪರಿಹಾರವನ್ನು ಪಾವತಿಸುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ.

ಅತಿವೃಷ್ಟಿ / ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಪುನರ್ ನಿರ್ಮಾಣ | ದುರಸ್ಥಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ 2024-25 ನೇ ಸಾಲಿನಲ್ಲಿ ಪಾವತಿಸಿರುವ ಪರಿಹಾರದಂತೆ, 2025-26 ನೇ ಸಾಲಿನ ನೈಋತ್ಯ ಮುಂಗಾರು ಹಂಗಾಮಿನಲ್ಲಿ (01.06.2025 00 30.09.2025) (01.10.2025 ರಿಂದ 31.12.2025) ಹಾನಿಗೊಳಗಾಗುವ ಮನೆಗಳ ಪುನರ್ ನಿರ್ಮಾಣ /ದುರಸ್ಥಿ ಕಾರ್ಯ ಹಾಗೂ ಪುವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ ನಿಯಾಮಾನುಸಾರ ಅರ್ಹತೆಯಂತೆ ಪರಿಹಾರವನ್ನು ಮೇಲೆ ಓದಲಾದ (2), (3) ಮತ್ತು (4) ರ ಆದೇಶಗಳಲ್ಲಿ ವಿಧಿಸಿರುವ ಷರತ್ತುಗಳ ಪಾಲನೆಗೆ ಒಳಪಟ್ಟು, ಜಿಲ್ಲಾಧಿಕಾರಿರವರ ಹಂತದಲ್ಲಿಯೇ ಅವರ ಪಿ.ಡಿ. ಖಾತೆಯಲ್ಲಿ ಲಭ್ಯವಿರುವ ಅನುದಾನದಿಂದ ಪಾವತಿಸಲು ಮೇಲೆ ಓದಲಾದ (1) ರ ಆದೇಶದಲ್ಲಿ ಸರ್ಕಾರದ ಮಂಜೂರಾತಿಯನ್ನು ನೀಡಿ ಆದೇಶಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ ಮಾಹೆಯಲ್ಲಿ ವಾಡಿಕೆಯಾಗಿ 166 ಮಿ.ಮೀ., ರಷ್ಟು ಮಳೆ ಬರಬೇಕಾಗಿದ್ದು, ಆದರೆ 2025-26 ನೇ ಸಾಲಿನ ಮೇ ಮಾಹೆಯಲ್ಲಿ 944 ಮಿ.ಮೀ., ರಷ್ಟು ಮಳೆಯಾಗಿರುತ್ತದೆ. ಇದ್ದು ವಾಡಿಕೆಗಿಂತ ಹೆಚ್ಚು ಮಳೆಯಾಗಿರುತ್ತದೆ ಹಾಗೂ ಮುಂಗಾರು ಮೇ ಮಾಹೆಯಲ್ಲಿಯೇ ಮುಂಚಿತವಾಗಿ ಪ್ರಾರಂಭವಾಗಿರುತ್ತದೆ. ಇದರಿಂದಾಗಿ ಜಿಲ್ಲೆಯಾದ್ಯಂತ ಪ್ರಾಕೃತಿಕ ವಿಕೋಪದಿಂದಾಗಿ (ನೆರೆ, ಪ್ರವಾಹ, ಭೂಕುಸಿತ ಉಂಟಾಗಿ) ಮಾನವ ಜೀವಹಾನಿ, ಜಾನುವಾರುಗಳ ಪ್ರಾಣ ಹಾನಿ ಹಾಗೂ ಮನೆಹಾನಿ ಸಂಭವಿಸಿದ್ದು, ಸದರಿ ಪ್ರಕರಣಗಳಲ್ಲಿ ಸಂಬಂದಿಸಿದ ಸಂತ್ರಸ್ಥರಿಗೆ ಕೇಂದ್ರ ಗೃಹ ಮಂತ್ರಾಲಯವು ದಿನಾಂಕ:11.07.2023ರಂದು ಹೊರಡಿಸಿರುವ Revised items and Norms of Assistance ಮಾರ್ಗಸೂಚಿಗಳನ್ವಯ ಪರಿಹಾರವನ್ನು ಈಗಾಗಲೇ ಪಾವತಿಸಲಾಗಿರುತ್ತದೆ. ಆದ್ದರಿಂದ ಮೇಲೆ ಓದಲಾದ (1) ರ ಆದೇಶದಲ್ಲಿ ಅತಿವೃಷ್ಟಿ /ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಪುನರ್ ನಿರ್ಮಾಣ / ದುರಸ್ಥಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರವನ್ನು ಪಾವತಿಸಲು ನೀಡಿರುವ ಆದೇಶದಂತೆ, ದಿನಾಂಕ: 01.05.2025 ರಿಂದ ಹಾನಿಯಾದ ಮನೆಹಾನಿ ಪ್ರಕರಣಗಳಿಗೂ ಸಹ ಹೆಚ್ಚುವರಿ ಪರಿಹಾರವನ್ನು ಪಾವತಿಸಲು ಅನುಮೋದನೆಯನ್ನು ನೀಡುವಂತೆ ಮೇಲೆ ಓದಲಾದ (5) ರ ಪತ್ರದಲ್ಲಿ ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ ರವರು ಕೋರಿರುತ್ತಾರೆ.

ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ ರವರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗಿ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ 2025-26 ನೇ ಸಾಲಿನಲ್ಲಿ ರಾಜ್ಯದಲ್ಲಿ ವಾಡಿಕೆ ದಿನಾಂಕಕ್ಕಿಂತ ಮೊದಲೇ ಮುಂಗಾರು ಮಳೆ ಪ್ರಾರಂಭವಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿರುವುದರಿಂದ ದಿನಾಂಕ: 01.04.2025ರಿಂದಲೇ ಜಾರಿಗೆ ಬರುವಂತೆ ಮೇಲೆ ಓದಲಾದ (1) ರ ಆದೇಶದಲ್ಲಿ ತಿಳಿಸಿರುವಂತೆ ಪರಿಹಾರವನ್ನು ಪಾವತಿಸಲು, ಸರ್ಕಾರದ ಅನುಮತಿಯನ್ನು ನೀಡಲು ತೀರ್ಮಾನಿಸಿ, ಕೆಳಕಂಡಂತೆ ಆದೇಶಿಸಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ 2025-26 ನೇ ಸಾಲಿನಲ್ಲಿ ವಾಡಿಕೆ ದಿನಾಂಕಕ್ಕಿಂತ ಮೊದಲೇ ಮುಂಗಾರು ಮಳೆ ಪ್ರಾರಂಭವಾಗಿವುದರಿಂದ, 2025-26 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ / ಪ್ರವಾಹದಿಂದ ಹಾನಿಯಾದ ಮನೆಗಳ ಹಾಗೂ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ ಮೇಲೆ ಓದಲಾದ (2), (3) ಮತ್ತು (4) ರ ಆದೇಶಗಳಲ್ಲಿ ವಿಧಿಸಿರುವ ಷರತ್ತುಗಳ ಪಾಲನೆಗೆ ಒಳಪಟ್ಟು, ಪರಿಹಾರವನ್ನು ನಿಯಾಮಾನುಸಾರ ಅರ್ಹತೆಯಂತೆ ಜಿಲ್ಲಾಧಿಕಾರಿರವರ ಹಂತದಲ್ಲಿಯೇ ಅವರ ಪಿ.ಡಿ. ಖಾತೆಯಲ್ಲಿ ಲಭ್ಯವಿರುವ ಅನುದಾನದಿಂದ ಪಾವತಿಸಲು ಮೇಲೆ ಓದಲಾದ (1) ರ ಆದೇಶದಲ್ಲಿ ತಿಳಿಸಿರುವಂತೆ, ದಿನಾಂಕ: 01.04.2025 ರಿಂದಲೇ ಜಾರಿಗೆ ಬರುವಂತೆ ಪಾವತಿಸಲು ಸರ್ಕಾರದ ಮಂಜೂರಾತಿ ನೀಡಿ ಆದೇಶಿಸಿದೆ.

Similar Posts

Leave a Reply

Your email address will not be published. Required fields are marked *