Home » ಲೈವ್ ನ್ಯೂಸ್ » ಮಲ್ಲಯ್ಯ ಗಿರಿ, ದೇಗುಲಮಡಿ ಮತ್ತು ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಪೂಜ್ಯ ಶ್ರೀ ಡಾ ಬಸವಲಿಂಗ ಅವಧೂತರ ಭವ್ಯ ಮೆರವಣಿಗೆ

ಮಲ್ಲಯ್ಯ ಗಿರಿ, ದೇಗುಲಮಡಿ ಮತ್ತು ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಪೂಜ್ಯ ಶ್ರೀ ಡಾ ಬಸವಲಿಂಗ ಅವಧೂತರ ಭವ್ಯ ಮೆರವಣಿಗೆ

Facebook
X
WhatsApp
Telegram

ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿ ಗ್ರಾಮದಲ್ಲಿ ಭಾನುವಾರ ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯ ಗಿರಿ, ದೇಗುಲಮಡಿ ಮತ್ತು ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಪೂಜ್ಯ ಶ್ರೀ ಡಾ ಬಸವಲಿಂಗ ಅವಧೂತರ ಭವ್ಯ ಮೆರವಣಿಗೆ ನಡೆಯಿತು

ಕೋಟ್:
‘ಕರ್ನಾಟಕ, ತೆಲಂಗಾಣದ ಸಾವಿರಾರು ಭಕ್ತರು ಚಳಿಯನ್ನು ಲೆಕ್ಕಿಸದೆ ಪೂಜ್ಯ ಶ್ರೀ ಡಾ ಬಸವಲಿಂಗ ಅವಧೂತರ ಪ್ರವಚನ ಆಲಿಸಿರುವುದು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ’.
– ವಿಜಯಕುಮಾರ ಕಡಗಂಚೆ
‘ಸತ್ಸಂಗದಿಂದ ಆಲೋಚನಾ ಶಕ್ತಿ ಹೆಚ್ಚುತದೆ ‘

ಭಾಲ್ಕಿ: ‘ಸತ್ಸಂಗದಿಂದ ನಿಮ್ಮ ದ್ರಷ್ಠಿ, ಮಾತು ಮತ್ತು ಆಲೋಚನಾ ಶಕ್ತಿ ಹೆಚ್ಚಾಗುತ್ತದೆ ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯ ಗಿರಿ, ದೇಗಲಮಡಿ ಮತ್ತು ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಬಸವಲಿಂಗ ಅವಧೂತರು ನುಡಿದರು.ಅವರು ಭಾಲ್ಕಿ ತಾಲೂಕು ಖಟಕ ಚಿಂಚೋಳಿ ಗ್ರಾಮದ ಬಸವೇಶ್ವರ ವೃತ್ತದ ಬಳಿ ಭಾನುವಾರ ಬ್ರಹತ ಪ್ರವಚನ ಮತ್ತು ಸಂಗೀತ ಕಾರ್ಯಕ್ರಮದಲ್ಲಿ  ಆಶೀರ್ವಚನ ನೀಡಿದರು.


ಈ ಕಾರ್ಯಕ್ರಮದಿಂದ  ನಿಮ್ಮೋಳಗಿನ ಕಲ್ಮಶ. ಸಮಾಜದಲ್ಲಿ ಜಾಗ್ರತೆಯಿಂದ ಹೇಗೆ ಬದುಕಬೇಕು ತಿಳಿದುಕೋಳಬಹುದು ಎಂದರು.  ನಿಮ್ಮ ಕೆಲಸ ಕಾರ್ಯ ಒತ್ತಡ ಜೀವನದಿಂದಾಗಿ ಮಾನಸಿಕ ನೆಮ್ಮದಿ ಕಳೆದುಕೊಂಡು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ‘ ಎಂದು ಕಳವಳ ವ್ಯಕ್ತಪಡಿಸಿದರು. ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಧಾರೆಯೆರೆಯಬೇಕು, ಜನ್ಮದಿನದ ನೆಪದಲ್ಲಿ ಮಕ್ಕಳು ದುಂದು ವೆಚ್ಚ ಮಾಡಿ ದುಷ್ಟ ಚಟ್ಟಕ್ಕೆ ಬಲಿಯಾಗುತ್ತಿದ್ದಾರೆ ಅದನ್ನು ಪೊಷಕರು ತಡೆಯಬೇಕು ಎಂದು ಕಿವಿ ಮಾತು ಹೇಳಿದರು. ಎಲ್ಲರೂ ಆಸ್ತಿ, ಅಂತಸ್ತುಗಳಿಸುವ  ಭರಾಟೆಯಲ್ಲಿ ಮಾನಸಿಕ  ಸುಖ, ಶಾಂತಿ ಹಾಳು ಮಾಡಿಕೋಳ್ಳುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಬಿಡುವಿನ ಸಮಯದಲ್ಲಿ ತಮ್ಮ ತಮ್ಮ ಕುಟುಂಬ ಸದಸ್ಯರೊಂದಿಗೆ ಬೆರೆತು ಸಮಯ ಕಳೆಯಬೇಕು ‘ ಎಂದು ತಿಳಿಸಿದರು. “ನನ್ನಗೆ ಯಾರು ಎಲ್ಲ ಎಂದು ನೀ ಕೊರಗ ಬೇಡ” ಎಂಬ ಹಾಡು ಹಾಡಿ ಭಕ್ತರನ್ನು ಆಧ್ಯಾತ್ಮಿಕ ಕಡೆ ತೆಗೆದುಕೊಂಡು ಹೊದರು.


ಮೊದಲಿಗೆ ಅಲಂಕೃತ ಸಾರೋಟಿನಲ್ಲಿ ಶ್ರೀಗಳು ಆಸೀನರಾದ್ದಂತೆ ಜನರು ದರ್ಶನ ಪಡೆಯಲು ಮುಗಿಬಿದ್ದಿರುವ ದೃಶ್ಯ ಕಂಡು ಬಂತು. ಮೆರವಣಿಗೆಯು ಬಸವೇಶ್ವರ ವೃತ್ತದಿಂದ ಮುಂದೆ ಸಾಗಿದಂತೆಲ್ಲಾ ಜನರು ರಸ್ತೆಯ ಪಕ್ಕದಲ್ಲಿ ಸಾಲಾಗಿ ನಿಂತರು ಅಲ್ಲದೇ ಕೆಲವರು ಮನೆಗಳ ಮೇಲ್ಛಾವಣಿಯ ಮೇಲೆ ಕುಳಿತು ಶ್ರೀಗಳನ್ನು ನೋಡುತ್ತಾ ಶ್ರದ್ಧೆ, ಭಕ್ತಿ, ವಿನಯದಿಂದ ಕೈ ಮುಗಿದು ನಮಸ್ಕರಿಸಿದರು.


ಮೆರವಣಿಗೆಯಲ್ಲಿ ಹಲಗೆ, ಡೊಳ್ಳು ಕುಣಿತ,  ಕಳಸ ಹೊತ್ತ ಮಹಿಳೆಯರು, ಮಕ್ಕಳ ಕೋಲಾಟ ಸೇರಿದಂತೆ ಇನ್ನಿತರ ಕಲಾ ತಂಡಗಳು ನೋಡುಗರ ಮನ ತಣಿಸಿದವು. ಯುವಕರು, ಮಕ್ಕಳು ಡಿಜೆ ಹಾಡಿಗೆ ಹೆಜ್ಜೆ ಹಾಕಿದರು. ಬೆಳಗ್ಗೆಯಿಂದಲೇ ಪ್ರಸಾದ ವ್ಯವಸ್ಥೆ ಸ್ವಾಗತ ಸಮಿತಿಯವರು ಮಾಡಿದರು. ಪ್ರಮುಖರಾದ ಖ್ಯಾತ ವಕೀಲ ಗಂಗಾಧರ ಮಜಗೆ, ಎಂಜಿಎಸ್  ಎಸ್ ಕೆ  ನಿರ್ದೇಶಕ ಮಲ್ಲಿಕಾರ್ಜುನ ಪಾಟೀಲ ಮುಗನೂರು, ವಿಜಯಕುಮಾರ ಕಡಗಂಚೆ, ಸಿದ್ಧಯ್ಯ ಸ್ವಾಮಿ,  ಶಿವು ಉಮರ್ಗೆ,ಕಲ್ಲಪ್ಪ ರಡ್ಡೆರ್,  ಧನರಾಜ ಸಿರಸಗೆ, ದತ್ತು ಭಾವಿದೊಡ್ಡೆ, ಶಿವು ಹೊನ್ನಳೆ, ನರಸಪ್ಪ ಮೊರೆ, ಸಂತೋಷ ಸಿರಸಗೆ, ನಾಗಯ್ಯ ಸ್ವಾಮಿ, ವಿಶ್ವನಾಥ ಬಿರಾದಾರ ಮೊದಲಾದವರು ಇದ್ದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology