ಬೀದರ.09.ಜುಲೈ.25:- ತೆಲಂಗಾಣ ರಾಜ್ಯದ ನರಾಯಣಖೇಡ ತಾಲ್ಲೂಕಿನ ಸಿದ್ದಹಂಗರಗಾ ಗ್ರಾಮದ ನಿವಾಸಿಯಾದ ಬೀರಪ್ಪಾ ಅಡವೆಪ್ಪಾ ಬಿರಾದಾರ (31) ಇತನು ಬೀದರನ ಆಮಂತ್ರಣ ಹೋಟೆಲ್‍ನಲ್ಲಿ ಸುಮಾರು 10 ವರ್ಷಗಳಿಂದ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇತನು ದಿನಾಂಕ: 04-06-2025 ರಂದು ಹೋಟೆಲ್‍ನಿಂದ ಹೊರಗಡೆ ಹೋಗಿ ಮರಳಿ ಹೋಟೆಲ್‍ಗೆ ಬಾರದೇ ಕಾಣೆಯಾಗಿರುತ್ತಾನೆ.
ಕಾಣೆಯಾದ ವ್ಯಕ್ತಿಯು 5 ಅಡಿ 5 ಇಂಚ್ ಎತ್ತರವಿದ್ದು, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ, ನೇರ ಮೂಗು, ದುಂಡು ಮುಖ ಇದ್ದು, ಕಾಣೆಯಾಗುವ ಸಮಯದಲ್ಲಿ ಮೈಮೇಲೆ ಪ್ಯಾಂಟ್, ಶರ್ಟ ಧರಿಸಿರುವ ಇತನು ತೆಲಗು, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಮಾತನಾಡುತ್ತಾನೆ.
ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಬೀದರ ನೂತನ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೇಕ್ಟರ ಮೊಬೈಲ್ ಸಂಖ್ಯೆ: 9480803446, ಬೀದರ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 08482-226704 ಹಾಗೂ ಬೀದರ ನೂತನ ನಗರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08482-228256ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.