ಕೊಪ್ಪಳ.13.ಜೂನ್.26: ಕೊಪ್ಪಳ ಜಿಲ್ಲೆಯಲ್ಲಿ ಗ್ರೇಡ್-2 ಇಂದ ಗ್ರೇಡ್-1 ನವೀಕರಿಸಲಾದ ಹಾಗೂ ಹತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ-1 ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಕುಕನೂರು ತಾಲ್ಲೂಕಿನ 2 ಗ್ರಾಮ ಪಂಚಾಯತಿಗಳಲ್ಲಿ ಹೊಸದಾಗಿ ಅಧಿಸೂಚನೆಯನ್ನು ಸರ್ಕಾರವು ಹೊರಡಿಸಿರುತ್ತದೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಮಂಗಳೂರು ಗ್ರಾಮ ಪಂಚಾಯತ್ ಗ್ರೇಡ್-1 (ಹತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಗ್ರಾಮ) ಮತ್ತು ಭಾನಾಪುರ ಗ್ರೇಡ್-2 ರಿಂದ 1, ಈ ಎರಡು ಗ್ರಾಮಗಳಲ್ಲಿ ತಲಾ ಒಂದು ಹುದ್ದೆಗಳಲ್ಲಿ ಆಯಾ ಗ್ರಾಮ ಪಂಚಾಯತಿಗಳಲ್ಲಿನ ಆಸಕ್ತರು ಕಾರ್ಯನಿರ್ವಹಿಸಲು ಇಚ್ಛಿಸಿದ್ದಲ್ಲಿ ಜೂನ್ 15ರೊಳಗಾಗಿ ಪೋರ್ಟಲ್ https://sevasindhuservices.karnataka.gov.in/loginWindow.do ನಲ್ಲಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಮಾತ್ರ ಅವಕಾಶ ಕಲ್ಪಿಸಿದ್ದು, ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕೊಪ್ಪಳ ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Any questions related to ಮಂಗಳೂರು, ಭಾನಾಪುರ: ಗ್ರಾಮ-1 ಪರಿಣಾಮಕಾರಿ ಅನುಷ್ಠಾನಕ್ಕೆ ಅರ್ಜಿ ಆಹ್ವಾನ?