09/06/2025 3:41 PM

Translate Language

Home » ಲೈವ್ ನ್ಯೂಸ್ » ಭೂಸೇನಾ ನೇಮಕಾತಿಗೆ ಅಗ್ನಿಪಥ ಅನ್‌ಲೈನ್ ರೆಜಿಸ್ಟ್ರೇಷನ್ ಪ್ರಾರಂಭ

ಭೂಸೇನಾ ನೇಮಕಾತಿಗೆ ಅಗ್ನಿಪಥ ಅನ್‌ಲೈನ್ ರೆಜಿಸ್ಟ್ರೇಷನ್ ಪ್ರಾರಂಭ

Facebook
X
WhatsApp
Telegram

ಬೀದರ.17.ಮಾರ್ಚ.25:-ಆರ್ಮಿ ರಿಕ್ರೂಟಿಂಗ್ ಆಫೀಸ್ ಬೆಳಗಾವಿ ಹಾಗೂ ಬೆಂಗಳೂರು ಹೆಡ್‌ಕ್ವಾರ‍್ಸ್ ರಿಕ್ರೂಟಿಂಗ್ ಜೋನ್ ಬೆಂಗಳೂರು ಇವರ ಸಹಯೋಗದಲ್ಲಿ ಭೂಸೇನಾ ನೇಮಕಾತಿಗೆ ಮಾರ್ಚ್.12 ರಿಂದ ಏಪ್ರಿಲ್ 10 ರವರೆಗೆ ಅಗ್ನಿಪಥ ಆನ್‌ಲೈನ್ ರೆಜಿಸ್ಟ್ರೇಷನ್ ಆರಂಭಿಸಿದ್ದು, ಜಾಯಿನ್ ಇಂಡಿಯನ್ ಆರ್ಮಿ ವೆಬ್‌ಸೈಟ್ 

www.joinindianarmy.nic.in  ನಲ್ಲಿ ರ‍್ಯಾಲಿ ಮೂಲಕ ಈ ಕೆಳಕಂಡ ಜಿಲ್ಲೆಗಳ ಅಭ್ಯರ್ಥಿಗಳು ನೊಂದಣಿ ಮಾಡಿಕೊಳ್ಳಲು ಡೈರೆಕ್ಟರ್ ರಿಕ್ರೂಟಿಂಗ್ ಕರ್ನಲ್ ಎ.ಕೆ ಉಪಾಧ್ಯಾಯ ಅವರು ತಿಳಿಸಿದ್ದಾರೆ.

ಬೆಳಗಾವಿ, ಬೀದರ, ಕಲುಬುರ್ಗಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳ ನೊಂದಣಿ ಮಾಡಿಕೊಳ್ಳಬಹುದಾಗಿದ್ದು, ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್, ಟ್ರೇಡ್‌ಮನ್ ಹುದ್ದೆಗಳಿಗೆ 10ನೇ ತರಗತಿ ಉತ್ತೀರ್ಣರಾಗಿರಬೇಕು, ಅಗ್ನಿವೀರ್, ಟ್ರೇಡ್‌ಮನ ಹುದ್ದೆಗೆ 8ನೇ ತರಗತಿ ಪಾಸ್ ಆಗಿರಬೇಕು, ಅಗ್ನಿವೀರ್ ಕ್ಲರ್ಕ್, ಸ್ಟೋರ್‌ಕೀಪರ್ ಟೆಕ್ನಿಕಲ್ ವಿಭಾಗಗಳಿಗೆ ನೇಮಕಾತಿ ನಡೆಯಲಿದೆ.

ವಯೋಮಿತಿ, ಶೈಕ್ಷಣಿಕ ಅರ್ಹತೆ ಮತ್ತು ಇತರೆ ಮಾಹಿತಿಗಾಗಿ ಮಾರ್ಚ್.12 ರಂದು ಬೆಳಗಾವಿ ಆರ್ಮಿ ರಿಕ್ರೂಟಿಂಗ್ ಆಫೀಸ್‌ದಿಂದ ಹೊರಡಿಸಿದ ಅಧಿಸೂಚನೆ ವೀಕ್ಷಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!