05/08/2025 3:17 AM

Translate Language

Home » ಲೈವ್ ನ್ಯೂಸ್ » ಭಿಕ್ಷಾಟನೆ: 19 ಜನರನ್ನು ರಕ್ಷಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಭಿಕ್ಷಾಟನೆ: 19 ಜನರನ್ನು ರಕ್ಷಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

Facebook
X
WhatsApp
Telegram

ಬೀದರ.13.ಜುಲೈ.25:- ಜಿಲ್ಲೆಯ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷಾಟನೆ ನಡೆಯುವ ಸ್ಥಳಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ 19 ಜನರನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ತಿಳಿಸಿದ್ದಾರೆ.


19 ಜನರಲ್ಲಿ 14 ಮಕ್ಕಳು ಅವರಲ್ಲಿ ಎರಡು ಮಕ್ಕಳಿಗೆ ಜಿಲ್ಲಾ ಆರೋಗ್ಯ ಕೇಂದ್ರ ಬೀದರ (ಬ್ರೀಮ್ಸ್) ಕೇಂದ್ರದಲ್ಲಿ ಆರೋಗ್ಯ ತಪಾಸಣೆಗಾಗಿ ದಾಖಲು ಮಾಡಲಾಗಿದೆ. 12 ಮಕ್ಕಳನ್ನು ಹಾಗೂ 03 ಜನ ಮಹಿಳೆಯರಿಗೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿನದಲ್ಲಿ ಬರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇಡಲಾಗಿದೆ. ಹಾಗೂ 02 ಪುರುಷರಿಗೆ ಬೀದರ ನಗರಸಭೆ ವ್ಯಾಪ್ತಿಯಲ್ಲಿ ಬರುವಂತಹ ಪುನರ್ವಸತಿ ಕೇಂದ್ರದಲ್ಲಿ ಇಡಲಾಗಿರುತ್ತದೆ. ಜುಲೈ.13 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ, ಅಪ್ತ ಸಮಾಲೋಚನೆ ಮಾಡಿ, 03-ಜನ ಮಹಿಳೆರೊಂದಿಗೆ ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಸಾಂತ್ವನ ಕೇಂದ್ರದಲ್ಲಿ ಇಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


ಕರ್ನಾಟಕದ ನಗರ ಪ್ರದೇಶಗಳಲ್ಲಿ ಭಿಕ್ಷಾಟನೆ ಸಮಸ್ಯೆ ಸಾಮನ್ಯವಾಗಿರುತ್ತದೆ ಕೇಲವರಿಗೆ ನಿಜವಾಗಿಯು ಸಹಾಯಕ ಬೇಕಾಗಿದ್ದವರು ಇದ್ದವರು, ಹಲವರು ಸಂಘಟಿತ ಭಿಕ್ಷಾಟನೆ ಜಾಲದ ಭಾಗವಾಗಿದ್ದಾರೆ. ಇದು ಸಾಮಾಜಿಕ ಸಮಸ್ಯೆ ಮಾತ್ರ ವಲ್ಲದೆ ಆರೋಗ್ಯ ಶಿಷ್ಟಾಚಾರ ಮತ್ತು ಕಾನೂನು ವ್ಯವಸ್ಥೆ ಕುರಿತು ಪ್ರಶ್ನೆ ಎತ್ತುತ್ತದೆ. ಮುಂದುವರೆದು ಇದರಲ್ಲಿ ಹಲವಾರು ಸವಾಲುಗಳು ಎದುರಾಗುತ್ತಿದು, ವಿಶೇಷವಾಗಿ ನಿಜ ಭೀಕ್ಷಕ ಮತ್ತು ನಕಲಿ ಭಿಕ್ಷುಕ ಮಧ್ಯ ವ್ಯತ್ಯಾಸ ಮಾಡುವುದು ಕಷ್ಟ ಸಾಧ್ಯ. ಪುನ್: ಭಿಕ್ಷೆಗೆ ತಿರುಗುವ ಪ್ರರ್ವತಿ, ಸಂಘಟಿತ ಭಿಕ್ಷಾಟನೆ ಜಾಲ ಬೇದಿಸುವುದು, ಪುನರ್ವಸತಿ ಕಲ್ಪಿಸುವುದು ನಮ್ಮ ಸವಾಲುಗಳಾಗಿರುತ್ತವೆ,
ಬೀದರ ಜಿಲ್ಲೆಯಲ್ಲಿ ಪ್ರಮುಖ ಸರ್ವಾಜನಿಕ ಸ್ಥಳ ಹಾಗೂ ದೇವಾಸ್ಥನಗಳಲ್ಲಿ ಭಿಕ್ಷಾಟನೆಗೆ ಸಂಬAಧಿಸಿದAತೆ ಚಿಕ್ಕ ಕಂದಮ್ಮ ಮಕ್ಕಳನ್ನು ದಿನದ ಬಾಡಿಗೆ ಪಡೆದು ಭಿಕ್ಷಾಟನೆಯಲ್ಲಿ ತೊಡಗಿಸುವುದು, ಮಹಿಳೆಯರು ಹಸುಗೂಸುಗಳನ್ನು ಬಳಸಿಕೊಂಡು ಭಿಕ್ಷೆ ಬೇಡುತ್ತಿರುವುದು ಜಿಲ್ಲೆಯಲ್ಲಿ ದಿನೆದಿನೆ ಹೆಚ್ಚಾಗುತ್ತಿರುವುದು ಕಂಡು ಬರುತ್ತಿರುವುದುರಿಂದ ಅವುಗಳಿಗೆ ಪ್ರಾಧಮಿಕ ಹಂತದಲ್ಲಿಯೆ ಸಂಘಟಿತ ಭಿಕ್ಷಾಟನೆಯ ಜಾಲಗಳ ಕಡಿವಾಣ ಹಾಕಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜುಲೈ.11 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975ರನ್ವಯ ಕರ್ನಾಟಕ ಭಿಕ್ಷಾಟನಾ ನಿಷೇಧ ಭಿಕ್ಷುಕರ ನಿಯಂತ್ರಣಕ್ಕಾಗಿ ಟಾಸ್ಕ್ ಪೊರ್ಸ್ ಸಮತಿ ಸಭೆ ಕರೆದು ಸಂಬAಧ ಪಟ್ಟ ಅಧಿಕಾರಿಗಳಿಗೆ ಸರಕರದಿಂದ ವಹಿಸಲಾದ ಜವಾಬ್ದಾರಿಗಳನ್ನು ನಿಯಮಾನುಸಾರ ಕಟ್ಟು ನಿಟ್ಟಾಗಿ ನಿರ್ವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.


ಭಿಕ್ಷುಕರು ನಿಯಂತ್ರಣಕ್ಕೆ ಕೇವಲ ಕಾನೂನು ಪ್ರಾಯೋಗಿಕ ಕ್ರಮ ವಷ್ಟೆ ಸಾಕಾಗದು ಮಾನವಿಯತೆ, ಪುನರ್ವಸತಿ ಮತ್ತು ಸಮಾನ ಹಕ್ಕುಗಳು ನೀಡಲು ಸಮಗ್ರ ಕ್ರಮ ಅಗತ್ಯವಿದೆ. ಸರ್ಕಾರ, ಸಮಾಜ, ಸಂಘ / ಸಂಸ್ಥೆಗಳು ಹಾಗೂ ನಾಗರೀಕರು ಕೈಜೊಡಿಸಿದಾಗ ಶಾಶ್ವತ ಪರಿಹಾರ ಸಾಧ್ಯ ಹಾಗೂ ಆದುದರಿಂದ ಭಿಕ್ಷಾಟನೆ ಒಂದು ಗಂಭಿರ ಸಮಾಜಿಕ ಸಮಸ್ಯೆ ಅಲ್ಲದೆ ನಗರಗಳ ಸೌಕರ್ಯ ಮತ್ತು ಶಿಸ್ತಿಗೆ ಅಡ್ಡಿಯಾಗಿತ್ತಿರುವ ಪ್ರಕರಣವಾಗಿದೆ. ಕರ್ನಾಟಕ ಸರ್ಕಾರವು ಭಿಕ್ಷಾಟನೆಯನ್ನು ನಿಯಂತ್ರಣಕ್ಕೆ ಕರ್ನಾಟಕ ಭಿಕ್ಷಾಟನೆ ನಿಷೇಧ ಅಧಿನಿಯಮ 1975 ಈ ಕಾಯ್ದೆಯಂತೆ ಭಿಕ್ಷಾಟನೆ ಮಾಡುವುದು ನಿಷೇದಿಸಲಾಗಿದೆ.

ಸಂಪತ್ತು ಇರುವ ಭಿಕ್ಷಾಕರನ್ನು ಹಾಗೂ ಬಾಲ ನ್ಯಾಯ ಕಾಯ್ದೆ 2015ರ ಪ್ರಕಾರ ಮಕ್ಕಳನ್ನು ಬಿಕ್ಷಾಟನೆಗೆ ಬಳಸಿದ್ದಲ್ಲಿ 3 ವರ್ಷ ಜೈಲು ಹಾಗೂ 1 ಲಕ್ಷ ದಂಡ ಮತ್ತು ಹಂತವರ ವಿರುದ್ಧ ಕಠಿಣ ಶಿಕ್ಷೆ ಕೈಗೊಳ್ಳಲಾಗುವುದು ಹಾಗೂ ಸಾರ್ವಜನಿಕ ಸ್ಥಳದಲ್ಲಿ ಯಾರಾದರೂ ಭಿಕ್ಷಾಟನೆಯಲ್ಲಿ ತೊಡಗಿರುವುದು ಕಂಡುಬAದರೆ ಕೂಡಲೇ 1098 ಗೆ ಕರೆ ಮಾಹಿತಿ ನೀಡಬೇಕೆಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರದೇಶಕರು ತಿಳಿಸಿದ್ದಾರೆ.


ಜಿಲ್ಲೆಯಲ್ಲಿ ಬೇಟರಮೆಂಟ ಫೌಡೇಶನ್ ವತಿಯಿಂದ ವಿವಿಧ ಸ್ಥಳಗಳಲ್ಲಿ ಭಿಕ್ಷೆಯಾಟನೆಯಲ್ಲಿ ತೊಡಗಿರುವರ ಸುಮಾರು 70 ಜರರಿಗೆ ರೇಷನ್ ಸರಬರಾಜು ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅದರಂತೆ ಜಿಲ್ಲೆಯ ಇನ್ನಿತರ ಸಂಸ್ಥೆಗಳು ಈ ಕಾರ್ಯಕ್ಕೆ ಮುಂದೆ ಬರಬೇಕೆಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD