ಚಾಮರಾಜನಗರ.06.ಜುಲೈ.25:- ಯಳಂದೂರು ತಾಲೂಕು ಕೊಮಾರನಪುರ ಗ್ರಾಮದ ಜೆಎಸ್ಎಸ್ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ರವಿ ಎಂಬುವವರ ಕಬ್ಬಿನ ಗದ್ದೆಯಲ್ಲಿ ಕಬ್ಬಿನ ಕಟಾವು ನಡೆಯುತ್ತಿದ್ದು.ಗದ್ದೆಯ ಮಧ್ಯಭಾಗದಲ್ಲಿ ಭಾರಿ ಗಾತ್ರದ ಹೆಬ್ಬಾವು ಕಾಣಿಸಿ ಕೊಂಡಿದೆ.

ಅದನ್ನು ನೋಡಿದ ಕಬ್ಬು ಕಟಾವು ಮಾಡುವವರು ಭಯದಿಂದ ಕಬ್ಬು ಕಟಾವು ಮಾಡುವುದನ್ನು ನಿಲ್ಲಿಸಿ ತಕ್ಷಣ ಸಂತೇ ಮರಳ್ಳಿಯ ಜನಪ್ರಿಯ ಸ್ನೇಕ್ ಮಹೇಶ್ ರವರೆಗೆ ಕರೆಮಾಡಿ ಬರಮಾಡಿಕೊಂಡರು ಇವರ ಜೊತೆಗೆ ಸ್ನೇಕ್ ಮಂಜು ಕೂಡ ಆಗಮಿಸಿದರು.
ಗದ್ದೆ ತೆರಳಿ ಹೆಬ್ಬಾವನ್ನು ಸುರಕ್ಷಿತವಾಗಿ ಸಂರಕ್ಷಣೆ ಮಾಡಿ. ಅಲ್ಲಿ ಇದ್ದ ಅಕ್ಕಪಕ್ಕದ ರೈತರಿಗೆ ಈ ಹಾವು ನಿಮ್ಮ ಜಮೀನಿನಲ್ಲಿ ಇದ್ದರೆ ಭಯಪಡುವ ಅವಶ್ಯಕತೆ ಇರುವುದಿಲ್ಲ.
ಇದು ವಿಷರಹಿತವಾಗಿದ್ದು. ನಿಮ್ಮ ಜಮೀನಿನಲ್ಲಿ ಇರುವ ಇಲಿಗಳು ಅಥವಾ ಬೇರೆ ನಿಮ್ಮ ಬೆಳೆಗಳನ್ನ ನಾಶಮಾಡುವ ಪ್ರಾಣಿಗಳನ್ನ ತಿಂದು ಬದುಕುತ್ತದೆ. ಮತ್ತೆ ಈ ರೀತಿ ಹೆಬ್ಬಾವುಗಳು ನಿಮ್ಮ ಜಮೀನಿನಲ್ಲಿ ಕಾಣಿಸಿಕೊಂಡರೆ ನನಗೆ ಕರೆ ಮಾಡಿ. ಎಂತಹ ಸಂದರ್ಭದಲ್ಲಿಯೂ ಅವುಗಳನ್ನ ಕೊಲ್ಲುವುದಕ್ಕೆ ಹೋಗಬೇಡಿ. ಎಂದು ರೈತರಿಗೆ ಮನವರಿಕೆ ಮಾಡಿ.. ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಅದನ್ನ ಬಿ ಆರ್ ಟಿ ಅರಣ್ಯ ಪ್ರದೇಶದಲ್ಲಿ ಬಿಟ್ಟರು.