Home » ಲೈವ್ ನ್ಯೂಸ್ » ಭಾರತೀಯ ಅಂಚೆ ಇಲಾಖೆಯು ‘ನೇರ ಪ್ರತಿನಿಧಿಗಳನ್ನು’ (Direct Agents) ನೇಮಕಾತಿ (Walk in Interview).

ಭಾರತೀಯ ಅಂಚೆ ಇಲಾಖೆಯು ‘ನೇರ ಪ್ರತಿನಿಧಿಗಳನ್ನು’ (Direct Agents)  ನೇಮಕಾತಿ (Walk in Interview).

ಬೀದರ.27.ಜುಲೈ 26: ಬೀದರ ಜಿಲ್ಲೆಯಲ್ಲಿ ಭಾರತೀಯ ಅಂಚೆ ಇಲಾಖೆ ಅಂಚೆ ಅಧೀಕ್ಷಕರ ಕಛೇರಿದಿಂದ ಬೀದರ ವಿಭಾಗದಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ ನಿಯುಕ್ತಿಗಾಗಿ ಪ್ರಸ್ತಾವಿಸಿದ್ದು, ಆಸಕ್ತ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವ ಚಿತ್ರದೊಂದಿಗೆ ಸ್ವ-ವಿವರ, ಶೈಕ್ಷಣಿಕ ಪ್ರಮಾಣ ಪತ್ರದ ನಕಲುಗಳೊಂದಿಗೆ 2026ರ ಆಗಸ್ಟ್ 4 ರಂದು  ಬೆಳಗ್ಗೆ 11 ಗಂಟೆಗೆ ಬೀದರ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಲು ಅವಕಾಶ ಕಲ್ಪಿಸಿದೆ ಬೀದರ ವಿಭಾಗ ಅಂಚೆ ಅಧೀಕ್ಷಕರು

     ಅರ್ಹತಾ ನಿಯಮಗಳು : ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿದ್ದು ಕಡ್ಡಾಯವಾಗಿ 18 ವರ್ಷಗಳಾಗಿರಬೇಕು. ನಿರುದ್ಯೋಗಿ ಹಾಗೂ ಸ್ವಯಂ ಉದ್ಯೋಗ ನಿರತಯುವಕರು, ವಿಮಾ ಕಂಪನಿಗಳ ಮಾಜಿ ಏಜೆಂಟರು ಹಾಗೂ ಸಲಹೆಗಾರರು, ಮಾಜಿ ಸೈನಿಕರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮಂಡಳದ ಕಾರ್ಯಕರ್ತೆಯರು, ನಿವೃತ್ತ ಪ್ರಧಾನ ಮತ್ತುಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಅಂಚೆ ವಿಭಾಗದ ಮುಖ್ಯಸ್ಥರಿಗೆ ಸಮಂಜಸವೆoದು ಕಂಡು ಬಂದ ಯಾವುದೇ ಅಭ್ಯರ್ಥಿಗಳಿಗೆ ಆಯ್ಕೆಯಾದ ಪಕ್ಷದಲ್ಲಿ ಅವಕಾಶ ನೀಡಲಾಗುವದು.

ಆಯ್ಕೆಯಾದ ಅಭ್ಯರ್ಥಿಗಳು 5000 ರೂ.ಗಳ ರಾಷ್ಟ್ರೀಯ ಉಳಿತಾಯ ಪತ್ರಅಥವಾ ಕಿಸಾನ ವಿಕಾಸ ಪತ್ರದರೂಪದಲ್ಲಿ ಭದ್ರತಾ ಠೇವಣಿಯನ್ನು ಇಡಬೇಕಾಗುತ್ತದೆ. ಆಯ್ಕೆಯಾದ ನೇರ ಪ್ರತಿನಿಧಿಗಳಿಗೆ ಅವರು ಮಾಡಿದ ವ್ಯವಹಾರಕ್ಕೆತಕ್ಕಂತೆ ಸೂಕ್ತ ಕಮೀಷನ್ ನೀಡಲಾಗುವದು. ನಿಗದಿತ ವೇತನವು ಇರುವದಿಲ್ಲ.

ಅಭ್ಯಥಿಗಳು ವೇರೆಯಾವುದೇ ವಿಮಾ ಕಂಪನಿ, ಸಂಸ್ಥೆ, ಸಂಘಗಳ ಏಜೆಂಟ ಆಗಿರಬಾರದು. ನುರಿತ ಸಂವಹನ ಕಲೆ, ಹಾಗೂ ವಿಮಾ ಮಾರಾಟ ಕ್ಷೇತ್ರದಲ್ಲಿ ಪೂರ್ವಾನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವದು. ಹೆಚ್ಚಿನ ಮಾಹಿತಿಗಾಗಿ ಬೀದರ ವಿಭಾಗ ಅಂಚೆ ಅಧೀಕ್ಷಕರು ಬೀದರ-585401

ಇಮೇಲ್  dobidar.ka@indiapost.gov.in ದೂ.ಸಂ.08482-225350/226286 ಅಥವಾ ಹತ್ತಿರದ ಅಂಚೆ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology