ಕೊಪ್ಪಳ.01.ಜುಲೈ.25: ಭಾಗ್ಯನಗರ ಪಟ್ಟಣ ಪಂಚಾಯತಿಯ 2022-23ನೇ ಸಾಲಿನ ಪಟ್ಟಣ ಪಂಚಾಯತ ಅನುದಾನದಲ್ಲಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಪಟ್ಟಣ ಪಂಚಾಯತಿಯ ಶೇ.24.10 ರ ಯೋಜನೆಯ ಎಸ್.ಎಫ್.ಸಿ ಮುಕ್ತನಿಧಿ ಎಸ್‌ಸಿಪಿ ಯೋಜನೆಯಲ್ಲಿ ಶೇ.40 ರಷ್ಟು ವ್ಯಕ್ತಿಗತ ಕಾರ್ಯಕ್ರಮ ಯೋಜನೆಯಡಿ ಪರಿಶಿಷ್ಟ ಜಾತಿ ಜನಾಂಗದ ಹಾಗೂ ಶೇ.24.10ರ ಯೋಜನೆಯ ಎಸ್.ಎಫ್.ಸಿ ಮುಕ್ತನಿಧಿ ಶೇ.7.25ರ ಯೋಜನೆಯಲ್ಲಿ ಶೇ.40 ರಷ್ಟು ವ್ಯಕ್ತಿಗತ ಕಾರ್ಯಕ್ರಮದ ಯೋಜನೆಯಡಿ ವಿವಿಧ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಗುತ್ತದೆ.
ಸೌಲಭ್ಯ ಪಡೆಯಲು ಫಲಾನುಭವಿಗಳು ಕಡ್ಡಾಯವಾಗಿ 5 ವರ್ಷಕ್ಕಿಂತ ಹೆಚ್ಚಾಗಿ ಪಟ್ಟಣದಲ್ಲಿ ವಾಸವಿರಬೇಕು. ಚಾಲ್ತಿ ಸಾಲಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು, ಆಧಾರ್ ಕಾರ್ಡ್, ಕುಟುಂಬದ ರೇಶನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪ್ರಸ್ತುತ ವರ್ಷದ ವ್ಯಾಸಂಗ ಪ್ರಮಾಣ ಪತ್ರ ಹಾಗೂ ಸಮಾಜ ಕಲ್ಯಾಣ ಇಲಾಖೆ ಕಚೇರಿಯಿಂದ ಪ್ರೋತ್ಸಾಹಧನ ಪಡೆಯದಿರುವ ಬಗ್ಗೆ ಪ್ರಮಾಣ ಪತ್ರಗಳೊಂದಿಗೆ ಜುಲೈ 15 ರೊಳಗೆ ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.
ಅವಧಿ ಮೀರಿ ಬಂದ ಹಾಗೂ ಅಪೂರ್ಣ ದಾಖಲಾತಿ ಹೊಂದಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.