ಕೊಪ್ಪಳ.03.ಆಗಸ್ಟ್.25: 23 ವರ್ಷದೊಳಗಿನವರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಗಸ್ಟ್ 4 ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಶಿಂಧಿಕುರಬೇಟ ಗ್ರಾಮದ ವಿಠ್ಠಲ ಮಂದಿರದ ಆವರಣದಲ್ಲಿ ಆಯೋಜಿಸಲಾಗಿದ್ದು, ಆಸಕ್ತಿಯುಳ್ಳ ಕುಸ್ತಿಪಟುಗಳು ಭಾಗವಹಿಸಬಹುದಾಗಿದೆ.
ಸೂಚನೆಗಳು: ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸುವ ಕುಸ್ತಿಪಟುಗಳ ದೇಹತೂಕವನ್ನು ಆಗಸ್ಟ್ 4ರ ಸೋಮವಾರ ಬೆಳಗ್ಗೆ 8 ಗಂಟೆಗೆ ಸರಿಯಾಗಿ ತೆಗೆದುಕೊಳ್ಳಲಾಗುವುದು. ಈ ಸ್ಪರ್ಧೆಯಲ್ಲಿ ಭಾಗವಹಿಸುವಂತಹ ಕುಸ್ತಿಪಟುಗಳಿಗೆ ದೇಹತೂಕದಲ್ಲಿ ಯಾವುದೇ ವಿನಾಯಿತಿ ಇರುವುದಿಲ್ಲ. ಎಲ್ಲಾ ಕುಸ್ತಿಪಟುಗಳು ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಜನ್ಮ ಪ್ರಮಾಣಪತ್ರ, ಆಧಾರಕಾರ್ಡ ಮತ್ತು ಡಬ್ಲ್ಯೂ.ಎಫ್.ಐ ಲೈಸೆನ್ಸ್ ಬುಕ್ ಅನ್ನು ಕಡ್ಡಾಯವಾಗಿ ತರಬೇಕು. ಸ್ಪರ್ಧೆಯಲ್ಲಿ 2002 ರಿಂದ 2007ರ ಒಳಗೆ ಜನಿಸಿರುವ ಕುಸ್ತಿಪಟುಗಳಿಗೆ ಮಾತ್ರ ಭಾಗವಹಿಸಲು ಅವಕಾಶ ಇರುತ್ತದೆ.
ಈ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗಳಲ್ಲಿ ಪ್ರಥಮ ಸ್ಥಾನಗಳಿಸಿದಂತಹ ಕುಸ್ತಿಪಟುಗಳು ರಾಂಚಿಯಲ್ಲಿ ನಡೆಯುವಂತಹ 23 ವರ್ಷದೊಳಗಿನ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ಗೆ ನೇರವಾಗಿ ಆಯ್ಕೆಯಾಗುತ್ತಾರೆ.
ಹೆಚ್ಚಿನ ಮಾಹಿತಿಗಾಗಿ, ಕರ್ನಾಟಕ ಕುಸ್ತಿ ಸಂಘ(ರಿ), ತಾಂತ್ರಿಕ ಸಮಿತಿಯ ಛೇರ್ಮನ್ ಡಾ.ಕೆ.ವಿನೋದ್ ಕುಮಾರ್ ಅವರ ಮೊ.ಸಂಖ್ಯೆ: 8971388143 ಅಥವಾ 9880087059 ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.