ರಾಯಚೂರು.05.ಜುಲೈ.25: ರಾಯಚೂರು ಜಿಲ್ಲೆ ಕಾರಟಗಿ. ತಾಲ್ಲೂಕಿನ ಬೆನ್ನೂರು ಗ್ರಾಮದ 31ನೇ ವಿತರಣಾ ಕಾಲುವೆ ದಾರಿಯ ತೆರವು ಕಾರ್ಯ ನಡೆಯುತ್ತಿದ್ದು, ಇದರಿಂದ ಕಾಲುವೆ ಮುಚ್ಚುವ ಹುನ್ನಾರ ನಡೆದಿದೆ ಎಂದು ಬೆನ್ನೂರು ಗ್ರಾಮ ಮತ್ತು ಬೆನ್ನೂರು ತಾಂಡಾದ ನಿವಾಸಿಗಳು ಆರೋಪಿಸಿದ್ದಾರೆ.
ಬೆನ್ನೂರು ಗ್ರಾಮದ 31ನೇ ವಿತರಣಾ ಕಾಲುವೆಯ ದಾರಿಯನ್ನು ಕಿತ್ತು ಹಾಕುತ್ತಿರುವುದರಿಂದ ಗ್ರಾಮಸ್ತರ ಹೊಲಗಳಿಗೆ ಹಾಗೂ ತಾಂಡಾದ ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗೆ ತುಂಬಾ ತೊಂದರೆ ಆಗುತ್ತಿದೆ.
ತಾಂಡದ ಜನರಿಗೆ ಇರುವುದು ಇದು ಒಂದೇ ದಾರಿ. ಅದರಲ್ಲೂ ಅದು ಹದಿಗೆಟ್ಟಿದೆ. ಆದರೆ, ಈ ದಾರಿಯನ್ನು ಬೆನ್ನೂರ ನಿವಾಸಿ ಕುರಿ ಆಂಬಣ್ಣ ತಂದೆ ಯಂಕಪ್ಪ ಕುರಿ ಸಾ. ಬೆನ್ನೂರು ಎಂಬುವವರು ತಮ್ಮ ಹೊಲದ ಬದುವಿಗಾಗಿ ರಸ್ತೆಯ ಮಣ್ಣನ್ನು ತಿವಿದು ತಮ್ಮ ಹೊಲಗಳಿಗೆ ಹಾಕಿಕೊಳ್ಳುತ್ತಿದ್ದಾರೆ. ಅದಲ್ಲದೆ ತಮ್ಮ ಹೊಲವನ್ನು ಅಗಲ ಮಾಡಿಕೊಳ್ಳುತ್ತಿದ್ದಾರೆ. ಹಾಗೆ ದಾರಿಯನ್ನು ಅತಿಕ್ರಮಿಸಿ, ರಸ್ತೆ ಗಾತ್ರವನ್ನು ಚಿಕ್ಕದಾಗಿಸುತ್ತಿದ್ದಾರೆ.
ಇದಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಮತ್ತು ಆದಷ್ಟು ಬೇಗ ಈ ರಸ್ತೆಯನ್ನು ಅಭಿವೃದ್ಧಿ ಮಾಡಿಸಿಕೊಡಬೇಕೆಂದು ಬೆನ್ನೂರು ತಾಂಡಾದ ನಿವಾಸಿಗಳು ಆಗ್ರಹಿಸಿದ್ದಾರೆ.
ವರದಿ: ಪ್ರಕಾಶ್ ಚವ್ಹಾಣ.6360535469