ಬೀದರ, ಡಿಸೆಂಬರ್.3 :- ನಗರದ ಎಲ್ಲಾ ಆಹಾರ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ನೋಂದಣಿ ಹಾಗೂ ಪರವಾನಿಗೆ ಮಾಡಿಸುವುದು ಕಡ್ಡಾಯವಾಗಿರುತ್ತದೆ ಹಾಗೂ ಬೀದಿ ಬದಿ ವ್ಯಾಪಾರಿಗಳು ಯಾವುದೇ ತರಹದ ಕೃತಕ ಪದ್ದಾರ್ಥಗಳನ್ನು ಟೆಸ್ಟಿಂಗ್ ಪೌಡರಗಳ, ಪಾನಿಪೂರಿ ನೀರಿನಲ್ಲಿ ಸಿಟ್ರಸ್ ಹಾಗೂ ಬಾಳೆ ಹಣ್ಣುಗಳನ್ನು ರೈಪನಿಂಗ ಮಾಡಲು ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ ಮಾಡದಂತೆ ಜಿಲ್ಲಾ ಅಂಕಿತ ಅಧಿಕಾರಿಗಳಾದ ಡಾ.ಸಂತೋಷ ಎಚ್ಚರಿಕೆ ನೀಡಿದರು.
ಅವರು ಇತ್ತೀಚಿಗೆ ಆಹಾರ ಸುರಕ್ಷತೆ ಮತ್ತುಗುಣಮಟ್ಟ ಕಾಯ್ದೆಯ ಪ್ರಕಾರ ಬೀದಿ ಬದಿ ವ್ಯಾಪಾರಿಗಳು, ಟೀ ಅಂಗಡಿಗಳು, ಜಿಲೇಬಿ ತಯ್ಯಾರಕರು, ಚೈನಿಸ್ ಫಾಸ್ಟ್ ಫೂಡ್, ಟೀಫಿನ್ ಸೆಂಟರ್, ಜೂಸ್ ಸೆಂಟರ್, ಚಿಕನ್ ಮತ್ತು ಕಬಾಬ್ ಸೆಂಟರ್, ಚಾರ್ಟ ಭಂಡಾರಗಳ ವಿಶೇಷ ನೋಂದಣಿ ಮತ್ತು ಪರವಾನಿಗೆ ಆಂದೋಲನ ಬಗ್ಗೆ ಬಸವಕಲ್ಯಾಣ ಲೋಟಸ್ ರೆಸ್ಟೋರೆಂಟ್‌ದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾರದಲ್ಲಿ ಭಾಗವಹಿಸಿ ಮಾತನಾಡಿದರು.
ಒಂದು ವೇಳೆ ಕೃತಕ ಪದ್ದಾರ್ಥಗಳನ್ನು ಉಪಯೋಗಿಸಿದ ಪಕ್ಷದಲ್ಲಿ ತಮ್ಮ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ ಸ್ವಚ್ಛತೆಯನ್ನು ಕಾಪಾಡುವುದು, ಹ್ಯಾಂಡ ಗ್ಲೋಸ್ ಮತ್ತು ಕ್ಯಾಪಗಳ ಬಳಕೆ ಮಾಡಲು ಸೂಚಿಸಿದರು.
ಈ ಕಾರ್ಯಕ್ರಮದಲ್ಲಿ ಬಸವಕಲ್ಯಾಣ ನಗರ ಸಭೆ ಆಯುಕ್ತರಾದ ರಾಜು ಬನಕರ್, ಬಸವಕಲ್ಯಾಣ ನಗರ ಸಭೆ ಎಇಓ ಶಿವಕುಮಾರ, ಬಸವಕಲ್ಯಾಣ ತಾಲ್ಲೂಕಾ ಆಹಾರ ಸುರಕ್ಷತಾ ಅಧಿಕಾರಿ ಅಶ್ವಿನಿ ಘಾಳೆ, ವ್ಯಾಪಾರಿಗಳಾದ ರಮೇಶ ರಾಘವೇಂದ್ರ, ರಬ್ಬಾನಿ ಸೇರಿದಂತೆ ಇತರರು ಉಪಸ್ಥಿತರಿದ್ದರು
