03/08/2025 4:48 PM

Translate Language

Home » ಲೈವ್ ನ್ಯೂಸ್ » ಬೀದರ ನಗರಸಭೆ: ಅರ್ಜಿ ಆಹ್ವಾನ

ಬೀದರ ನಗರಸಭೆ: ಅರ್ಜಿ ಆಹ್ವಾನ

Facebook
X
WhatsApp
Telegram

ಬೀದರ.25.ಜುಲೈ.25:- 2022-23ನೇ ಸಾಲಿನ ಎಸ್.ಎಫ್.ಸಿ. ಮತ್ತು 2024-25ನೇ ಸಾಲಿನ ನಗರಸಭೆ ನಿಧಿ 24.10%, 7.25% ಮತ್ತು 5% ಯೋಜನೆಯಡಿ ಫಲಾನುಭವಿಗಳ ಆಯ್ಕೆಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ವೈಯಕ್ತಿಕ ಫಲಾನುಭವಿಗಳ ಬಡವರ ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯೋಜನೆಗಳ ವಿವರ: ಎಸ್‍ಎಫ್‍ಸಿ-ನಗರಸಭೆ ವ್ಯಾಪ್ತಿಯ ಅಂಗವೀಕಲ ಜನರಿಗೆ ಹಣಕಾಸಿನ ಸಹಾಯ ಧನ(7.25% ಯೋಜನೆ), ನಗರಸಭೆ ನಿಧಿ- ಐಎಎಸ್/ಕೆಎಎಸ್ ಪರೀಕ್ಷಯ ತೈಯಾರಿ ಮಾಡಲು ಬಯಸುವ ಪರಿಶಿಷ್ಟ ಜಾತಿಯ ಆಕಾಂಕ್ಷಿಗಳಿಗೆ/ವಸತಿ ನಿಲಯಗಳಿಗೆ ಪುಸ್ತಕಗಳ (ಐಎಎಸ್/ಕೆಎಎಸ್ ಪರೀಕ್ಷಯ ತೈಯಾರಿಗೆ ಪೂರಕವಾಗುವ ಅಧ್ಯಯನ ಸಾಮಗ್ರಿ) ವಿತರಣೆ, ಪರಿಶಿಷ್ಟ ಜಾತಿಯ ತರಕಾರಿ/ಹಣ್ಣು ಮಾರಾಟಗಾರರಿಗೆ ತಳ್ಳುಗಾಡಿ ವಿತರಣೆ, ಅನಾರೋಗ್ಯದಿಂದ ಹಾಸಿಗೆ ಹಿಡಿದು ಕುಟುಂಬದ ನಿರ್ವಹಣೆ ಸಾಧ್ಯವಾಗದ ಪರಿಶಿಷ್ಟ ಜಾತಿಯ ರೋಗಿಗಳಿಗೆ ಸಹಾಯಧನ/ಶಸ್ತ್ರ ಚಿಕಿತ್ಸೆಗೆ ಒಳಗಾದ ಕಡುಬಡವರಿಗೆ ಸಹಾಯ ಧನ ನಿಡುವುದು, ನಗರಸಭೆ ನಿಧಿ (ಟಿ.ಎಸ್.ಪಿ.) ಪರಿಶಿಷ್ಟ ಪಂಗಡದ  ತರಕಾರಿ/ಹಣ್ಣು ಮಾರಾಟಗಾರರಿಗೆ ತಳ್ಳುಗಾಡಿ ವಿತರಣೆ, ಐಎಎಸ್/ಕೆಎಎಸ್ ಪರೀಕ್ಷಯ ತೈಯಾರಿ ಮಾಡಲು ಬಯಸುವ ಪರಿಶಿಷ್ಟ ಪಂಗಡದ ಆಕಾಂಕ್ಷಿಗಳಿಗೆÉ/ವಸತಿ ನಿಲಯಗಳಿಗೆ ಪುಸ್ತಕಗಳ (ಐಎಎಸ್/ಕೆಎಎಸ್ ಪರೀಕ್ಷಯ ತೈಯಾಗೆ ಪೂರಕವಾಗುವ ಅಧ್ಯಯನ ಸಾಮಗ್ರಿ) ವಿತರಣೆ, ನಗರಸಭೆ ನಿಧಿ(5%)- ಐಎಎಸ್/ಕೆಎಎಸ್ ಪರೀಕ್ಷಯ ತೈಯಾರಿ ಮಾಡಲು ಬಯಸುವ ಅಂಗವೀಕಲ ಆಕಾಂಕ್ಷಿಗಳಿಗೆÉ/ವಸತಿ ನಿಲಯಗಳಿಗೆ ಪುಸ್ತಕಗಳ (ಐಎಎಸ್/ಕೆಎಎಸ್ ಪರೀಕ್ಷಯ ತೈಯಾಗೆ ಪೂರಕವಾಗುವ ಅಧ್ಯಯನ ಸಾಮಗ್ರಿ) ವಿತರಣೆ, ಅಂಗವೀಕಲರು  ಸ್ವಯಂ ಉದ್ಯೋಗ ಮಾಡಿಕೋಳ್ಳಲು ಕಂಪ್ಯೂಟರ್‍ಗಳ ವಿತರಣೆ.

ಅರ್ಹರು ಅಗತ್ಯ ದಾಖಲಾತಿಗಳೊಂದಿಗೆ ದಿನಾಂಕ: 14-08-2025 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಬೀದರ ನಗರಸಭೆಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!