ಬೀದರ.13.ಜುಲೈ.25:- ಬೀದರ ತಾಲೂಕಿನ ರೇಕುಳಗಿ ಪಿಕೆಪಿಎಸ್ ನಿರ್ದೇಶಕರ ಚುನಾವಣೆ ಶುಕ್ರವಾರ ದಿನಾಂಕ ೧೧-೭-೨೦೨೫ ರಂದು ನಡೆಯಿತು. ಇದರಲ್ಲಿ ಖಿಜರ್ ಸಾಹೇಬ್ ಪೆನಾಲ್‌ಗೆ ಭರ್ಜರಿ ಗೆಲುವು ಪಡೆದುಕೊಂಡಿದ್ದಾರೆ.
೧೦ ನಿರ್ದೇಶಕರು ಆವಿರೋಧ ಆಯ್ಕೆಗೊಂಡಿರುತ್ತಾರೆ. ಮಲ್ಲಿಕಾರ್ಜುನ ಹಚ್ಚಿ ರೇಕುಳಗಿ, ದೇವೇಂದ್ರ ಬಂಬೋಳಗಿ ಮತ್ತು ಈಶ್ವರ ರೇಕುಳಗಿ, ಶಿವಕುಮಾರ ಬೊಂಬಳಗಿ ಅವರ ಮಧ್ಯೆ ಪೈಪೋಟಿ ನಡೆದಿತ್ತು. ಇವರಲ್ಲಿ ಶಿವಕುಮಾರ ಬೊಂಬಳಗಿ ೨೬೬ ಮತ ಪಡೆದು ಗೆಲುವು ಸಾಧಿಸಿದ್ದಾರೆ. ಮಲ್ಲಿಕಾರ್ಜು ಹಚ್ಚಿ ಅವರು ೯೫ ಮತ ಪಡೆದು ಸೋಲನ್ನು ಅನುಭವಿಸಿದ್ದಾರೆ. ಅದೇ ರೀತಿ ಈಶ್ವರ ರೇಕುಳಗಿ ೩೦೬ ಮತ ಪಡೆದು ಗೆಲುವನ್ನು ಪಡೆದುಕೊಂಡಿರುತ್ತಾರೆ. ದೇವೇಂದ್ರ ಬಂಬಳಗಿ ಕೇವಲ ೩೨ ಮತಗಳನ್ನು ಪಡೆದು ಸೋಲು ಕಂಡಿರುತ್ತಾರೆ.
ಆಯ್ಕೆಯಾದ ನಾಮ ನಿದೇರ್ಶಕರುಗಳು :
ಸೈಯದ್ ಖಜರ ಹುಸೇನಿ, ಶಿವಕುಮಾರ ಬಸಪ್ಪಾ, ಈಶ್ವರ ಶರಣಪ್ಪಾ, ಅರ್ಜುನ್ ನಾಗಣಿ, ಶಂಕರ ಕುಂಬಾರ್, ನೇಮತ ಅಲಿ, ನಾಗಪ್ಪಾ, ಭೀಮಣ್ಣ ಮುಸ್ತರಿ ಮಖಬುಲ್ ಪಟೇಲ್, ನೀಲಮ್ಮ ಭೀಮಣ್ಣ, ಗೋದಾವರಿ ಕಾಶಿನಾಥ, ಉಮೇಶ್ ಬಸಪ್ಪ ಪಿಕೆಪಿಎಸ್ ನಿರ್ದೇಶಕರುಗಳಾಗಿ ಆಯ್ಕೆಯಾಗಿರುತ್ತಾರೆ.
